ಸದಸ್ಯರ ಸಕ್ರೀಯ ಭಾಗವಹಿಸುವಿಕೆಯಿಂದ ಬೆಳವಣಿಗೆ ಸಾಧ್ಯ

hbr (3)
Published on

ಹೆಬ್ರಿ: ಸಹಕಾರಿಯ ಬೆಳವಣಿಗೆಯಲ್ಲಿ ಆಡಳಿತ ಮಂಡಳಿ ಸದಸ್ಯರು ಸಕ್ರಿಯವಾಗಿ ಪಾಲ್ಗೊಂಡಾಗ ಸಂ ಉತ್ತಮವಾಗಿ ಬೆಳೆಯುತ್ತದೆ. ಗ್ರಾಮೀಣ ಭಾಗದ ಸಂಸ್ಥೆ ಜನರ ಕಲ್ಯಾಣಕ್ಕಾಗಿ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಿ ಸದಸ್ಯರ ಬೆಳವಣಿಗೆ ಕಾರಣವಾಗಿದೆ. ಹಕ್ಕುಗಳೊಂದಿಗೆ ಕರ್ತವ್ಯಗಳನ್ನು ಪ್ರಾವಾಣಿಕವಾಗಿ ವಾಡಿ ಎಂದು ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂದ ನೂತನ ಅಧ್ಯಕ್ಷ ರಾಜೇಶ್ ಹೇಳಿದರು.

ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂದ ವತಿಯಿಂದ ಭಾನುವಾರ ನಡೆದ ನೂತನ ಅಧ್ಯಕ್ಷ, ಉಪಾಧ್ಯಕ್ಷರಿಗೆ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಉಪಾಧ್ಯಕ್ಷ ದೀಕ್ಷಿತ್ ನಾಯಕ್ ವಾತನಾಡಿ, ಎಲ್ಲರೂ ಒಟ್ಟಾಗಿ ದುಡಿದು ಠೇವಣಿ ಹೆಚ್ಚಿಸುವ ಮೂಲಕ ಸಹಕಾರಿಯ ಬೆಳವಣಿಗೆಗೆ ಕೊಡುಗೆ ನೀಡಬೇಕೆಂದರು.

ಶಾಂತಿನಿಕೇತನ ಸಹಕಾರಿ ಅಧ್ಯಕ್ಷರಾಗಿ ರಾಜೇಶ್, ಉಪಾಧ್ಯಕ್ಷರಾಗಿ ದೀಕ್ಷಿತ್ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು. ನೂತನ ನಿರ್ದೇಶಕರಾಗಿ ಜಯಕರ ಆಚಾರ್ಯ, ಮಹೇಶ್, ಕೆ.ಗಣೇಶ್, ಪ್ರಸನ್ನ, ನವೀನ್ ಶೆಟ್ಟಿ, ಸಂದೇಶ್ ಕುಲಾಲ್, ಶ್ರೀನಿವಾಸ ಶೆಟ್ಟಿ, ವಿಜಯ್ ಕುವಾರ್, ಶ್ರೀನಿವಾಸ್ ನಾಯ್ಕ, ಜಯೇಶ್ ಎಂ.ಪಿ., ರೇಷ್ಮಾ, ಸುಜಾತ ಆರ್.ಶೆಟ್ಟಿ ಆಯ್ಕೆಯಾದರು. ಸಿಇಒ ನರೇಂದ್ರ ಎಸ್., ವ್ಯವಸ್ಥಾಪಕ ರಾಜೇಶ್ರೀ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net