

ಕೋಟ: ಮನು ಕುಲ ಅಥವಾ ಮುಂದಿನ ತಲೆವಾರು ಉಳಿಯಬೇಕಾದರೆ ಹಸಿರು ಅಗತ್ಯವಾಗಿದ್ದು, ಗಿಡಗಳನ್ನು ನೆಟ್ಟು ಪೋಷಿಸಬೇಕು ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ. ಕುಂದರ್ ಹೇಳಿದರು.
ಗುರುವಾರ ಸಾಲಿಗ್ರಾಮದ ತೊಡ್ಕಟ್ಟು ಹೊಸಬದುಕು ಆಶ್ರಮದಲ್ಲಿ ಕೋಟ ಪಂಚವರ್ಣ ಯುವಕ, ಮಹಿಳಾ ಮಂಡಲ, ಹೊಸಬದುಕು ಆಶ್ರಮ ನೇತೃತ್ವದಲ್ಲಿ ಮಣೂರು ಗೀತಾನಂದ ಫೌಂಡೇಶನ್, ಅನ್ನಪೂರ್ಣ ನರ್ಸರಿ ಪೇತ್ರಿ, ಸಮುದ್ಯತಾ ಗ್ರೂಪ್ಸ್ ಸಹಯೋಗದೊಂದಿಗೆ ವಿಶ್ವಪರಿಸರ ದಿನ ಅಂಗವಾಗಿ ಗಿಡ ವಿತರಣೆ, ನೆಡುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾಲಿಗ್ರಾಮ ಪ.ಪಂ. ಅಧ್ಯಕ್ಷೆ ಸುಕನ್ಯಾ ಶೆಟ್ಟಿ, ಹೊಸಬದುಕು ಆಶ್ರಮ ಮುಖ್ಯಸ್ಥ ವಿನಯಚಂದ್ರ ಸಾಸ್ತಾನ, ನಿರ್ದೇಶಕಿ ರಾಜೇಶ್ವರಿ, ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ, ಮಹಿಳಾ ಮಂಡಲ ಪೂರ್ವಾಧ್ಯಕ್ಷೆ ಲಲಿತಾ ಪೂಜಾರಿ, ಪದಾಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.
ಮಹಿಳಾ ಮಂಡಲ ಉಪಾಧ್ಯಕ್ಷೆ ಪುಷ್ಪಾ ಕೆ. ಹಂದಟ್ಟು ಸ್ವಾಗತಿಸಿದರು. ಯುವಕ ಮಂಡಲ ಸದಸ್ಯ ಕೇಶವ ಆಚಾರ್ ವಂದಿಸಿದರು. ಸಂಚಾಲಕಿ ಸುಜಾತ ಬಾಯರಿ ನಿರೂಪಿಸಿದರು. ಸಲಹಾ ಸಮಿತಿ ಅಧ್ಯಕ್ಷ ರವೀಂದ್ರ ಕೋಟ ಸಂಯೋಜಿಸಿದರು.