ಮುಂಡಗೋಡಲ್ಲಿ ಅಂತರ್ಜಲಮಟ್ಟ ಕುಸಿತ

2mnd1 BORWELL
Published on

ಮುಂಡಗೋಡ: ಈ ಬಾರಿ ವಾಡಿಕೆಗಿಂತ ಹೆಚ್ಚಿಗೆ ಮಳೆ ಸುರಿದರೂ ಸಹ ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಅಂತರ್ಜಲ ಕುಸಿತ ಕಂಡಿರುವುದು ಗ್ರಾಮೀಣ ಜನರಿಗೆ ಆತಂಕ ಮೂಡಿಸಿದೆ.

ತಾಲೂಕಿನ ಶೇ. 90ರಷ್ಟು ಗ್ರಾಮಗಳಿಗೆ ಬೋರ್​ವೆಲ್​ಗಳ ಮೂಲಕ ಕುಡಿಯುವ ನೀರು ಸರಬರಾಜು ಮಾಡಲಾಗುತ್ತದೆ. ಇಂತಹ ಬೋರ್​ವೆಲ್​ಗಳಲ್ಲಿ ಅಂತರ್ಜಲ ಕುಸಿತ ಕಂಡಿದ್ದು, ಸಮರ್ಪಕವಾಗಿ ಕುಡಿಯುವ ನೀರು ಪೊರೈಕೆ ಮಾಡಲು ಗ್ರಾಮ ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲ.

ಈಗ ಎಲ್ಲೂ ಕುಡಿಯುವ ನೀರಿನ ಸಮಸ್ಯೆ ಎದುರಾಗಿಲ್ಲ. ಆದರೆ ಮುಂದಿನ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಗ್ರಾಮಗಳ ಪಟ್ಟಿಯನ್ನು ಅಧಿಕಾರಿಗಳು ಸಿದ್ಧತೆ ಮಾಡಿಕೊಂಡಿದ್ದಾರೆ.

ತಾಲೂಕಿನ ಓಣಿಕೇರಿ, ರಾಮಾಪುರ, ಬ್ಯಾನಳ್ಳಿ, ಮುಡಸಾಲಿ, ಲಕ್ಕೋಳ್ಳಿ, ಶಿಡ್ಲಗುಂಡಿ, ಮಲವಳ್ಳಿ, ನಾಗನೂರ, ಚವಡಳ್ಳಿ, ಅಂದಲಗಿ, ಮೈನಳ್ಳಿ, ಕಾವಲಕೊಪ್ಪ, ಶಿಂಗ್ನಳ್ಳಿ, ಅಜ್ಜಳ್ಳಿ, ನಂದಿಪುರ, ಹೊಸಓಣಿ, ತಮ್ಯಾನಕೊಪ್ಪ, ಸಿದ್ದನಕೊಪ್ಪ, ಉಮಚಗಿ, ಶ್ಯಾನವಳ್ಳಿ, ಹುನಗುಂದ ಸೇರಿ ಹದಿನಾರು ಪಂಚಾಯಿತಿ ವ್ಯಾಪ್ತಿಯ 72 ಗ್ರಾಮಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗುವ ಸಾದ್ಯತೆಗಳಿವೆ ಎಂದು ಪಿಡಿಒಗಳು ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಿದ್ದಾರೆ.

ಗದ್ದೆಗಳಲ್ಲಿ ಅಂತರ್ಜಲ ಕುಸಿತ: ತಾಲೂಕಿನ ಬಹುತೇಕ ರೈತರು ಬೇಸಿಗೆ ಬೆಳೆಯಾಗಿ ಗೋವಿನಜೋಳ ಬೆಳೆದಿದ್ದಾರೆ. ಗದ್ದೆಗಳಲ್ಲಿಯೂ ಸಹ ಅಂತರ್ಜಲ ಕುಸಿತ ಕಂಡು ಬೋರ್​ವೆಲ್​ಗಳಲ್ಲಿ ನೀರು ಕಡಿಮೆಯಾಗಿದೆ. ಬರುವ ಅಲ್ಪಸ್ವಲ್ಪ ನೀರಿನಲ್ಲಿಯೇ ರೈತರು ತಮ್ಮ ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net