ವಸತಿ ಸಮುಚ್ಚಯ ಜಾಗದಲ್ಲಿ ಮೈದಾನ

bidadi
Published on

ಬಿಡದಿ: ಇಲ್ಲಿನ ಪೊಲೀಸ್​ ವಸತಿ ಗೃಹಗಳ ಪಕ್ಕದ ಜಾಗದಲ್ಲಿ ಬೆಳೆದಿರುವ ಗಿಡ&ಗಂಟಿ ತೆರವುಗೊಳಿಸಿ, ಆಟದ ಮೈದಾನ ನಿರ್ಮಿಸಲು ನೀಲಿನೆ ಸಿದ್ಧವಾಗಿದ್ದು, ಬಹಳ ವರ್ಷಗಳಿಂದ ಕಸದ ಹಾಟಸ್ಪಾಟ್​ ಆಗಿದ್ದ ಜಾಗಕ್ಕೆ ಮುಕ್ತಿ ನೀಡಲು ಇಲಾಖೆ ಮುಂದಾಗಿದೆ.

ಬಿಡದಿಯಿಂದ ನಲ್ಲಿಗುಡ್ಡೆಗೆ ಹೋಗುವ ರಸ್ತೆಯಲ್ಲಿ ಪೊಲೀಸ್​ ವಸತಿ ಗೃಹಗಳಿದ್ದು, ಸಮುಚ್ಚಯದ ಮುಂದಿನ ಖಾಲಿ ಜಾಗ ಗಿಡ&ಗಂಟಿ ಬೆಳೆದು, ವಿಷಜಂತುಗಳ ವಾಸಸ್ಥಾನವಾಗಿತ್ತು. ಅವ್ಯವಸ್ಥೆ ಗಮನಿಸಿದ ಸಿಪಿಐ ಶಂಕರ್​ ನಾಯಕ್​, ಸ್ವಚ್ಛತೆಗೆ ಕ್ರಮ ಕೈಗೊಂಡು, ಮರದಂತೆ ಬೆಳೆದಿದ್ದ ಗಿಡ&ಗಂಟಿಯನ್ನು ಜೆಸಿಬಿ ಮೂಲಕ ತೆರವುಗೊಳಿಸಿ, ಕಸವನ್ನು ಟ್ರಾ$್ಯಕ್ಟರ್​ನಿಂದ ಬೇರೆಡೆ ವಿಲೇ ಮಾಡಿ, ಗುಂಡಿಬಿದ್ದ ಜಾಗಕ್ಕೆ ಮಣ್ಣು ಹಾಕಿ ಸಮತಟ್ಟುಗೊಳಿಸಿದ್ದಾರೆ.

ಕಸದ ಹಾಟ್​ಸ್ಪಾಟ್​ ರಸ್ತೆ ಪಕ್ಕದಲ್ಲೇ ಗಿಡ&ಗಂಟಿ ಬೆಳೆದಿದ್ದ ಕಾರಣ ಜನರು ಈ ಜಾಗವನ್ನು ಕಸದ ತೊಟ್ಟಿಯಾಗಿ ಮಾಡಿಕೊಂಡಿದ್ದರು. ಲೋಡ್​ಗಟ್ಟಲೆ ಕಸದ ರಾಶಿ ಶೇಖರಣೆಗೊಂಡು ಇಡೀ ವಾತಾವರಣದ ಅಂದ ಕೆಡಿಸಿತ್ತಲ್ಲದೇ ಸ್ಥಳ ಗಬ್ಬು ನಾರುತಿತ್ತು. ಗಿಡ&ಗಂಟಿ, ಮುಳ್ಳು ಪೊದೆಗಳಿಂದಾಗಿ ಹಾವು, ಚೇಳುಗಳ ಕಾಟವು ದಿನೇದಿನೆ ಹೆಚ್ಚಾಗಿತ್ತು. ಆಗಾಗ ಈ ಭಾಗದ ಮನೆಗಳಲ್ಲಿ ಹಾವುಗಳು ಕಾಣಿಸಿಕೊಂಡು ಭಯ ಹುಟ್ಟಿಸಿದ್ದವು. ಈ ನಡುವೆ ತ್ಯಾಜ್ಯ ಕೊಳೆತು ಸೊಳ್ಳೆ ಕಾಟ ಹೆಚ್ಚಾದ ಕಾರಣ ವಸತಿ ಗೃಹಗಳ ನಿವಾಸಿಗಳು ಹಾಗೂ ಈ ರಸ್ತೆ ಸಂಚರಿಸುವವರು ಸಾಂಕ್ರಾಮಿಕಗಳಿಗೆ ತುತ್ತಾಗುತ್ತಿದ್ದರು. ಜ್ತಪಿ ಮಾಡಿಕೊಂಡ ವಾಹನಗಳ ಪಾರ್ಕ್​ ಅಪಘಾತಕ್ಕೀಡಾಗಿ ವಾರಸುದಾರು ಬಿಡಿಸಿಕೊಳ್ಳದಿರುವ ಹಾಗೂ ವಿವಿಧ ಪ್ರಕರಣಗಳಲ್ಲಿ ಇಲಾಖೆ ಜಪ್ತಿ ಮಾಡಿಕೊಂಡ ವಾಹನಗಳನ್ನು ಗಿಡ&ಗಂಟಿ ಬೆಳೆದಿದ್ದ ಜಾಗದಲ್ಲೇ ನಿಲ್ಲಿಸಲಾಗಿತ್ತು. ಸದ್ಯ ಸಮತಟ್ಟು ಮಾಡಲಾದ ಜಾಗದಲ್ಲಿ ಒಂದೆಡೆ ಬೈಕ್​, ಮತ್ತೊಂದೆಡೆ ಕಾರು, ಆಟೋಗಳನ್ನು ಪಾರ್ಕ್​ ಮಾಡಲಾಗಿದೆ.

ಬಹಳ ವರ್ಷಗಳಿಂದ ವಸತಿ ಗೃಹದ ಖಾಲಿ ಜಾಗದಲ್ಲಿ ಗಿಡ&ಗಂಟಿ ಬೆಳೆದು ಸಾಕಷ್ಟು ಸಮಸ್ಯೆಗಳು ಉಲ್ಬಣಗೊಂಡಿದ್ದವು. ಇಲಾಖೆ ಜಪ್ತಿಪಡಿಸಿಕೊಂಡ ವಾಹನಗಳನ್ನು ಗಿಡ&ಗಂಟಿ ಮಧ್ಯದಲ್ಲೇ ನಿಲ್ಲಿಸಲಾಗುತ್ತಿತ್ತು. ಈ ಬಗ್ಗೆ ವಸತಿ ಗೃಹದ ನಿವಾಸಿಗಳು ನಮ್ಮ ಗಮನಕ್ಕೆ ತಂದಿದ್ದರಿಂದ ಜಾಗವನ್ನು ಸ್ವಚ್ಛಗೊಳಿಸಲಾಗಿದ್ದು, ಪುರಸಭೆ ಹಾಗೂ ಇತರ ಅನುದಾನವನ್ನು ಕ್ರೋಡಿಕರಿಸಿ, ಸುಸಜ್ಜಿತ ಆಟದ ಮೈದಾನ, ವಾಕಿಂಗ್​ ಪಾತ್​ ನಿರ್ಮಿಸಲು ಯೋಜನೆ ರೂಪಿಸಲಾಗುವುದು. > ಶಂಕರ್​ ನಾಯಕ್​ ಸಿಪಿಐ, ಬಿಡದಿ ಪೊಲೀಸ್​ ಠಾಣೆ ಪೊಲೀಸ್​ ವಸತಿ ಗೃಹಗಳು ನನ್ನ ವಾರ್ಡ್​ ವ್ಯಾಪ್ತಿಗೆ ಬರುತ್ತವೆ. ಬಹಳ ವರ್ಷಗಳ ಹಿಂದೆಯೇ ಇದಕ್ಕೆ ಕಾಯಕಲ್ಪ ನೀಡುವ ಬಗ್ಗೆ ರೂಪುರೇಷೆ ಸಿದ್ಧಪಡಿಸಲಾಗಿದೆ. ಜಾಗದಲ್ಲಿ ಅರಳಿ ಮರವಿದ್ದು, ಅಶ್ವತ್ಥ ಕಟ್ಟೆ ನಿರ್ಮಾಣಕ್ಕೆ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳಲಾಗುವುದು. > ಲೋಹೀತ್​ ಕುಮಾರ್​ ಸ್ಥಾಯಿ ಸಮಿತಿ ಅಧ್ಯ, ಬಿಡದಿ ಪುರಸಭೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net