ಗೃಹಲಕ್ಷ್ಮೀ ಅರ್ಜಿ ನೋಂದಣಿಗೆ ಪರದಾಟ

Gruhalakshmi-
Published on

ಚಳ್ಳಕೆರೆ: ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ನೋಂದಣಿಗೆ ಫಲಾನುಭವಿಗಳ ಪರದಾಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಸಲ್ಲಿಕೆ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ.

ಅರ್ಜಿ ಸಲ್ಲಿಕೆಯಲ್ಲಿ ಹಲವು ಸಮಸ್ಯೆಗಳು ಕಂಡುಬಂದಿರುವ ಕಾರಣದಿಂದ ಫಲಾನುಭವಿಗಳ ದಾಖಲಾತಿ ಸರಿ ಇದ್ದರೂ ಅರ್ಜಿ ಸಲ್ಲಿಕೆ ಆಗುತ್ತಿಲ್ಲ. ಫಲಾನುಭವಿ ಹೆಸರಿಗೆ ಪಡಿತರ ಚೀಟಿ ಸಂಖ್ಯೆ ಸರಿ ಇದ್ದರೂ ಹೊಂದಾಣಿಕೆ ಇಲ್ಲ ಎಂದು ತೋರಿಸಲಾಗುತ್ತಿದೆ.

ಕೆಲವೊಮ್ಮೆ ಅರ್ಜಿ ಸಲ್ಲಿಕೆಯಾಗಿ ಇನ್ನೇನು ಮಂಜೂರಾತಿ ಪತ್ರ ಮುದ್ರಿಸಿಕೊಡುವ ಹಂತದಲ್ಲಿ ಸಂಪೂರ್ಣ ಮಾಹಿತಿ ಜಂಪ್ ಆಗುತ್ತಿದೆ.

ಕೆಲ ಲಾಗಿನ್‌ಗಳಲ್ಲಿ ಅರ್ಜಿ ಸಲ್ಲಿಕೆಯಾದ ಬಳಿಕ ಮಂಜೂರಾತಿ ಪತ್ರ ಮುದ್ರಣಕ್ಕೆ ಅವಕಾಶವಾಗುತ್ತಿಲ್ಲ. ಗ್ರಾಮ ಒನ್, ಕರ್ನಾಟಕ ಒನ್, ಬಾಪೂಜಿ ಸೇವಾ ಕೇಂದ್ರಗಳ ಎದುರು ಫಲಾನುಭವಿಗಳು ದಿನವಿಡೀ ಕಾಯುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net