ಹಸಿರು ವಲಯ ಅಭಿವೃದ್ಧಿ ಅವಶ್ಯ

07kkr2(6-25 - icl parisara
Published on

ಕಿಕ್ಕೇರಿ: ಮರಗಳನ್ನು ಬೆಳೆಸುವುದರ ಮೂಲಕ ಹಸಿರು ವಲಯ ಅಭಿವೃದ್ಧಿ ಮಾಡಬೇಕು ಎಂದು ಕೋರಮಂಡಲ್ ಸಕ್ಕರೆ ಕಾರ್ಖಾನೆ ಉಪಾಧ್ಯಕ್ಷ ವಿ.ಜೆ.ರವಿ ತಿಳಿಸಿದರು.

ಸಮೀಪದ ಮಾಕವಳ್ಳಿಯ ಕೋರಮಂಡಲ್ ಸಕ್ಕರೆ ಕಾರ್ಖಾನೆಯಲ್ಲಿ ಈಚೆಗೆ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಕಾರ್ಖಾನೆಯಲ್ಲಿ ಇದುವರೆಗೂ 22,928 ಗಿಡಗಳನ್ನು ನೆಟ್ಟು ಮರವಾಗಿ ಬೆಳೆಸಲಾಗಿದೆ. ಇದೀಗ ವಿವಿಧ ಜಾತಿಯ 359 ಗಿಡಗಳನ್ನು ನೆಡಲಾಗಿದೆ. ಇಡೀ ಪರಿಸರವನ್ನು ಹಸಿರುಮಯವಾಗಿಸಿ ವಾತಾವರಣ ತಂಪಾಗಿಸಿ, ಶುದ್ಧ ಗಾಳಿ ಪ್ರಕೃತಿಯಲ್ಲಿ ಸದಾ ಇರುವಂತೆ ಮಾಡಲು ಆದ್ಯತೆ ನೀಡಲಾಗುತ್ತಿದೆ ಎಂದು ತಿಳಿಸಿದರು.

ಕಾರ್ಖಾನೆ ಆವರಣದಲ್ಲಿ ಕಾರ್ಖಾನೆ ಸಿಬ್ಬಂದಿ ಉತ್ಸಾಹದಿಂದ ಗಿಡ ನೆಟ್ಟು ಪ್ರಕೃತಿ ಸಂರಕ್ಷಣೆಗೆ ಕೈ ಜೋಡಿಸಿದರು. ಕಾರ್ಖಾನೆ ಅಧಿಕಾರಿಗಳಾದ ಪಿ.ಎಸ್.ಮೇಯನ್, ಬಾಬುರಾಜ್, ಅಶೋಕ್‌ಕುಮಾರ್, ಆರ್.ಇ. ಕುಮಾರ್, ಕೆ.ಜಿ.ಮೋಹನ್, ರವಿಚಂದ್ರನ್ ಇತರರು ಇದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net