ಹಸಿರು ಕ್ರಾಂತಿ ಪಿತಾಮಹಗೆ ಭಾವಪೂರ್ಣ ಶ್ರದ್ಧಾಂಜಲಿ

swamy nathan
ಕುರುಗೋಡು ಸಮೀಪದ ಎಮ್ಮಿಗನೂರಿನ ಕರ್ನಾಟಕ ಪದವೀಧರ ವೇದಿಕೆಯಿಂದ ಡಾ.ಎಂ.ಎಸ್. ಸ್ವಾಮಿನಾಥನ್‌ಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.
Published on

ಕುರುಗೋಡು: ಸಮೀಪದ ಎಮ್ಮಿಗನೂರು ಗ್ರಾಮದ ಕರ್ನಾಟಕ ಪದವೀಧರ ವೇದಿಕೆಯಿಂದ ಕೃಷಿ ವಿಜ್ಞಾನಿ ಹಸಿರು ಕ್ರಾಂತಿ ಪಿತಾಮಹ ಡಾಕ್ಟರ್ ಎಂ.ಎಸ್.ಸ್ವಾಮಿನಾಥನ್ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ರಾಜ್ಯ ಸಂಚಾಲಕ ಶಿವನೇಗೌಡ ರಾಮಪ್ಪ ಮಾತನಾಡಿ, ಸ್ವಾಮಿನಾಥನ್ ಅಧಿಕ ಇಳುವರಿ ಭತ್ತದ ತಳಿ, ಅಭಿವೃದ್ಧಿಯ ಮೂಲಕ ದೇಶದ ಆಹಾರ ಭದ್ರತೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ದೇಶದ ರಕ್ಷಣೆಗೆ ಬೇಕಿರುವುದು ಧಾನ್ಯಗಳ ಹೊರತು ಬಂದೂಕುಗಳಲ್ಲ ಎಂಬ ನುಡಿಯಂತೆ ಬಾಳಿ ಬದುಕಿದವರು ಎಂದರು.
ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮೌನ ಆಚರಣೆ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net