

ಆರ್ಡಿ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಬೆಳ್ವೆ ವಲಯ, ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ನೇತೃತ್ವದಲ್ಲಿ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ದೇವಳದಲ್ಲಿ ಏ.12ರಂದು ನಡೆಯಲಿರುವ ಅಷ್ಟ ಪವಿತ್ರ ನಾಗಮಂಡಲೋತ್ಸವಕ್ಕೆ ಹಸಿರು ಹೊರೆಕಾಣಿಕೆ ಬುಧವಾರ ಸಮರ್ಪಿಸಲಾಯಿತು.
ಆರ್ಡಿ ಚಿತ್ತೇರಿ ಶ್ರೀದುರ್ಗಾಪರಮೇಶ್ವರಿ ಭಜನಾ ಮಂಡಳಿ ಅಧ್ಯಕ್ಷ ಸುರೇಶ ಶೆಟ್ಟಿ ಆರ್ಡಿ, ಬೆಳ್ವೆ ವಲಯ ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ವಲಯಾಧ್ಯಕ್ಷ ಕೃಷ್ಣ ಪುತ್ರನ್ ಆರ್ಡಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬೆಳ್ವೆ ವಲಯ ಮೇಲ್ವಿಚಾರಕ ರಾಘವೇಂದ್ರ ಗೌಡ, ಅಲ್ಬಾಡಿ ವಲಯ ಪ್ರಗತಿ ಬಂಧು ಸ್ವಸಹಾಯ ಸಂಘಗಳ ಅಧ್ಯಕ್ಷ ರವಿ ನಾಯ್ಕ, ಸೇವಾ ಪ್ರತಿನಿಧಿ ಪ್ರಶಾಂತ ಗುಮ್ಮೋಲ, ಜಯಲಕ್ಷ್ಮೀ ಮರೂರು, ಅಮೃತಾ ಗುಮ್ಮೋಲ, ಸುಪ್ರೀಯಾ ಅಲ್ಬಾಡಿ, ರಂಜಿತಾ ಉಪಸ್ಥಿತರಿದ್ದರು.