

ಹಾಸನ: ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಸೆ.15 ರಂದು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬೆಳಗ್ಗೆ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯಿಂದ ಏರ್ಪಡಿಸಲಾಗಿದ್ದ ಬೈಕ್ ರ‌್ಯಾಲಿಗೆ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಲಾಯಿತು.
ಜಿಲ್ಲಾಧಿಕಾರಿ ಕೆ.ಎಸ್.ಲತಾಕುಮಾರಿ ಸ್ವತಹ ಬೈಕ್ ಚಲಾಯಿಸುವ ಮೂಲಕ ನಗರದ ಡೇರಿ ವೃತ್ತದವರೆಗೆ ತಂಡವನ್ನು ಬೀಳ್ಕೊಟ್ಟರು.
ನಂತರ ಮಾತನಾಡಿದರು. ಲೇನ್ ಶಿಸ್ತು ಪಾಲನೆ ಮಾಡಿ ವೇಗ ಮಿತಿಯಲ್ಲಿ ಚಾಲನೆ ಮಾಡುವುದರ ಜತೆಗೆ ಸುರಕ್ಷತೆಯಾಗಿ ಹಿಂದಿರುಗಿ ಬನ್ನಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದ ಪ್ರಾರಂಭದಲ್ಲಿ ಮೌನ ಆಚರಿಸುವ ಮೂಲಕ ಮೊಸಳೆ ಹೊಸಹಳ್ಳಿಯಲ್ಲಿ ಗಣೇಶ ಮೆರವಣಿಗೆಯ ದುರಂತದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ದೂದ್ ಫಿರ್ ಹಾಗೂ ಮತ್ತಿತರರು ಇದ್ದರು.
ಬೈಕ್ ರ‌್ಯಾಲಿಯು ಜಿಲ್ಲಾಧಿಕಾರಿಗಳ ಕಚೇರಿಯಿಂದ ಪ್ರಾರಂಭಗೊಂಡು, ಎನ್.ಆರ್.ಸರ್ಕಲ್, ಹೇಮಾವತಿ ಪ್ರತಿಮೆ, ಚರ್ಚ್ ಸರ್ಕಲ್, ಗಂಧದಕೋಠಿ ಸರ್ಕಲ್, ಕಲಾ ಕಾಲೇಜ್, ನಂತರ ಎಂ.ಜಿ. ರಸ್ತೆ ಯಲ್ಲಿ ಸಾಗಿ ಡೈರಿ ಸರ್ಕಲ್ ಗೆ ಪೂರ್ಣಗೊಂಡು. ಬೆಂಗಳೂರಿಗೆ ಸಾಗುವ ಬೈಕ್ ಸವಾರರಿಗೆ ಬೀಳ್ಕೊಡಲಾಯಿತು.