ಕೋಡಿಯಲ್ಲಿ ಹಸಿರುಜೀವ ಯೋಜನೆ

greenlife
ಕೋಡಿಯಲ್ಲಿ ಹಸಿರುಜೀವ ಯೋಜನೆಗೆ 8ನೇ ವಾರದ ಸಂಭ್ರಮದ ಅಂಗವಾಗಿ ಪರಿಸರ ಸ್ನೇಹಿ ಅಭಿಯಾನದ ಹಸಿರು ಜೀವ ಯೋಜನೆ ಮನೆಗೊಂದು ಗಿಡ ನೆಡುವ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಯಿತು.
Published on

ಕೋಟ: ಪರಿಸರ ಸ್ನೇಹಿ ಅಭಿಯಾನದ ಹಸಿರು ಜೀವ ಯೋಜನೆ 9ನೇ ಭಾನುವಾರದ ಮನೆಗೊಂದು ಗಿಡ ನೆಡುವ ಕಾರ್ಯಕ್ರಮ ನಡೆಯಿತು.

ಕೋಟದ ಪಂಚವರ್ಣ ಸಂಸ್ಥೆ ಹಾಗೂ ಗೀತಾನಂದ ಫೌಂಡೇಷನ್ ಮಣೂರು ಮಾರ್ಗದರ್ಶನದೊಂದಿಗೆ ಕೋಡಿ ಗ್ರಾಪಂ, ಶಿಶುಅಭಿವೃದ್ಧಿ ಯೋಜನೆ ಬ್ರಹ್ಮಾವರ ಹಾಗೂ ಸಮನ್ವಯ ಸಂಜೀವಿನಿ ಒಕ್ಕೂಟ ಕೋಡಿ ನೇತೃತ್ವದಲ್ಲಿ ಹೊಸಬೆಂಗ್ರೆ ಮಾಜಿ ಗ್ರಾಪಂ ಸದಸ್ಯ ಸುರೇಶ್ ಕುಂದರ್ ಮನೆಯಿಂದ ಕೋಡಿ ಗ್ರಾಪಂ ಅಧ್ಯಕ್ಷೆ ಗೀತಾ ಖಾರ್ವಿ ಹಾಗೂ ಸದಸ್ಯ ಕೃಷ್ಣಪೂಜಾರಿ ಚಾಲನೆ ನೀಡಿದರು.

ಕಾರ್ಯಕ್ರಮದ ಸಂಯೋಜಕಿ ಅಂಗನವಾಡಿ ಕಾರ್ಯಕರ್ತೆ ಯಮುನಾ ಎಲ್.ಕುಂದರ್, ಬಾಲಾವಿಕಾಸ ಸಮಿತಿ ಅಧ್ಯಕ್ಷೆ ಸುಲೋಚನಾ ಕುಂದರ್, ಸದಸ್ಯರಾದ ಮೋನಿಕಾ ಎಂ.ಮೆಂಡನ್, ಸಂಜೀವಿನಿ ಒಕ್ಕೂಟ ಎಂಪಿಬಿಕೆ ಅನಿತಾ ಸ್ಥಳೀಯರಾದ ಪ್ರೇಮಾ ಸುರೇಶ್, ಸವಿತಾ, ಭಾರತಿ, ಆಶಾ ಸುಜಾತಾ ಹಾಗೂ ಜ್ಯೋತಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net