ಹೆಬ್ರಿ: ಗ್ರಾಮ ಪಂಚಾಯಿತಿ ಸಂಜೀವಿನಿ ಸ್ವಸಹಾಯ ಸಂಘಗಳ ಸಹಭಾಗಿತ್ವದಲ್ಲಿ ಆಷಾಢದ ಪೌಷ್ಟಿಕ ಆಹಾರ ಮೇಳ ನಡೆಯಿತು. ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ್ ಬಂಗೇರ ಉದ್ಘಾಟಿಸಿದರು.
ತಹಸೀಲ್ದಾರ್ ಎಸ್.ಎ.ಪ್ರಸಾದ್ ಶುಭಹಾರೈಸಿದರು. ಪಿಡಿಒ ಸದಾಶಿವ ಸೇರ್ವೆಗಾರ್, ಕಸಾಪ ಹೆಬ್ರಿ ತಾಲೂಕು ಘಟಕದ ಅಧ್ಯಕ್ಷ ಮುದ್ದೂರು ಶ್ರೀನಿವಾಸ್ ಭಂಡಾರಿ, ಪಿಎಸ್‌ಐ ಮಹೇಶ್ ಟಿಎಂ, ವೈದ್ಯಾಧಿಕಾರಿ ಡಾ.ಸಂತೋಷ್ ಕುಮಾರ್, ವಲಯ ಅರಣ್ಯ ಅಧಿಕಾರಿ ಗೌರವ್, ಸಿದ್ದೇಶ್ವರ, ಪಂಚಾಯಿತಿ ಸದಸ್ಯರು, ಧನಲಕ್ಷ್ಮೀ ಸಂಜೀವಿನಿ ಒಕ್ಕೂಟದ ಸದಸ್ಯರು ಉಪಸ್ಥಿತರಿದ್ದರು. ಸುಮಾರು 25ಕ್ಕೂ ಅಧಿಕ ವಸ್ತುಗಳಿಂದ ಆಹಾ ತಯಾರಿಸಲಾಗಿತ್ತು.