ಹಸಿರುಜೀವ ಅಭಿಯಾನ ಸಮಾರೋಪ ಸಮಾರಂಭ

kota (1)
Published on

ಕೋಟ: ಇಲ್ಲಿನ ಪಂಚವರ್ಣ ಯುವಕಮಂಡಲ, ಪಂಚವರ್ಣ ಮಹಿಳಾ ಮಂಡಲದ ವತಿಯಿಂದ ವಿವಿಧ ಸಂಘಸಂಸ್ಥೆಗಳ ಸಹಯೋಗದೊಂದಿಗೆ 270ನೇ ಭಾನುವಾರದ ಪರಿಸರ ಸ್ನೇಹಿ ಹಸಿರುಜೀವ ಅಭಿಯಾನದ ಸಮಾರೋಪ ಭಾನುವಾರ ಜರುಗಿತು.

ಕುಂದಾಪುರ ಉಪವಿಭಾಗದ ಸಹಾಯಕ ಆಯುಕ್ತೆ ರಶ್ಮಿ ಸಂಸ್ಥೆಯ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದರು. ಬಳಿಕ ಗಿಡ ಹಸ್ತಾಂತರಿಸಿದರು. ಕೋಟ ಪಂಚವರ್ಣ ಯುವಕ ಮಂಡಲ ಅಧ್ಯಕ್ಷ ಕೆ.ಮನೋಹರ್ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಪ್ರಮುಖರಾದ ಟಿ.ಗಣಪತಿ ಶ್ರೀಯಾನ್, ರೇವತಿ ತೆಕ್ಕಟ್ಟೆ, ಪ್ರಭಾಕರ್ ಪಡುಕರೆ, ಲಲಿತಾ ಪೂಜಾರಿ ಇದ್ದರು. ಕಲಾವತಿ ಅಶೋಕ್ ಸ್ವಾಗತಿಸಿದರು. ರವೀಂದ್ರ ಕೋಟ ವಂದಿಸಿದರು. ಸುಜಾತ ಬಾಯರಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net