ಹೊಸ ವಿಷಯ ಕಲಿಯುವವರೆಲ್ಲರೂ ವಿದ್ಯಾರ್ಥಿಗಳು

gan (3)
Published on

ಕುಂದಾಪುರ: ವಿದ್ಯೆಯನ್ನು ಇಚ್ಚಿಸುವವರು ಎಲ್ಲರೂ ವಿದ್ಯಾರ್ಥಿಗಳೇ. ಕೇವಲ ಶಾಲಾ-ಕಾಲೇಜುಗಳಲ್ಲಿ ಕಲಿಯುವವರು ವಿದ್ಯಾರ್ಥಿಗಳಲ್ಲ ಪ್ರತಿದಿನ ಹೊಸ ವಿಷಯಗಳನ್ನು ಕಲಿಯುತ್ತಿರುವ ನಾವೆಲ್ಲರೂ ಜೀವನ ಪರ್ಯಂತ ವಿದ್ಯಾರ್ಥಿಗಳೇ ಎಂದು ಶ್ರೀ ಕಾಶೀ ಮಠಾಧೀಶ ಶ್ರೀ ಸಂಯಮೀಂದ್ರ ತೀರ್ಥ ಸ್ವಾಮೀಜಿ ನುಡಿದರು.

ಶ್ರೀ ರಾಮ ಸೇವಾ ಸಂ ವತಿಯಿಂದ ಕೋಟೇಶ್ವರದ ಶ್ರೀ ಪಟ್ಟಾಭಿ ರಾಮಚಂದ್ರ ದೇವಸ್ಥಾನದಲ್ಲಿ ಶುಕ್ರವಾರ ಜಿಎಸ್‌ಬಿ ಸವಾಜದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಿ ಆಶೀರ್ವಚನ ನೀಡಿದರು.

ದೇವಸ್ಥಾನ ಆಡಳಿತ ಮೊಕ್ತೇಸರ ದಿನೇಶ್ ಕಾಮತ್, ಚಾತುರ್ವಾಸ ಸಮಿತಿ ಗೌರವಾಧ್ಯಕ್ಷ ಶ್ರೀಧರ್ ಕಾಮತ್ ಹಾಗೂ ಸವಾಜ ಬಾಂಧವರು ಉಪಸ್ಥಿತರಿದ್ದರು.

ಶ್ರೀ ರಾಮ ಸೇವಾ ಸಂ ಅಧ್ಯಕ್ಷ ಶಂಕರ್ ಕಾಮತ್ ಪ್ರಾಸ್ತಾವಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net