ತೆಂಗಿನಮರದ ಬುಡಕ್ಕೆ ನೀರು ಹರಿಸುವ ಯೋಜನೆ : ನಾಳೆ ಸಾರ್ವಜನಿಕ ಅಭಿಯಾನದ ಉದ್ಘಾಟನೆ

Published on

ಕಾಸರಗೋಡು: ಹಸಿರು ಕೇರಳ ಮಿಷನ್ ನೇತೃತ್ವದಲ್ಲಿ ಜಲ ಸಂರಕ್ಷಣೆಯ ತೆಂಗಿನಮರದ ಬುಡಕ್ಕೆ ನೀರು ಹರಿಸುವ ಯೋಜನೆಯನ್ವಯ ಸಾರ್ವಜನಿಕ ಅಭಿಯಾನದ ಕಾಸರಗೋಡು ಜಿಲ್ಲಾಮಟ್ಟದ ಉದ್ಘಾಟನೆ ಸೆ.18ರಂದು ಬೇಡಡ್ಕ ಗ್ರಾಮ ಪಂಚಾಯಿತಿಯ ಜಯಪುರದಲ್ಲಿ ಜರುಗಲಿದೆ.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಪಿ.ಬೇಬಿ ಬಾಲಕೃಷ್ಣನ್ ಉದ್ಘಾಟಿಸುವರು. ತೆಂಗಿನ ಇಳುವರಿ ಹೆಚ್ಚಿಸುವುದರ ಜತೆಗೆ ಜಲಸಂರಕ್ಷಣೆಗೆ ಆದ್ಯತೆ ನೀಡುವುದು ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಭಾರಿ ಮಳೆಯಿಂದಾಗಿ ಹರಿದು ಪೋಲಾಗುವ ನೀರನ್ನು ಒಡ್ಡು ನಿರ್ಮಿಸಿ ತಡೆಗಟ್ಟಿ ತೆಂಗಿನಮರದ ಸುತ್ತಲೂ ಮಾಡಿದ ಜಲಾನಯನದಲ್ಲಿ ನಿಲ್ಲಿಸಿ, ಅಲ್ಲೇ ಇಂಗುವಂತೆ ಮಾಡುವ ಯೋಜನೆ ಇದಾಗಿದೆ. ಈ ಮೂಲಕ ಅಂತರ್ಜಲ ಮಟ್ಟ ಹೆಚ್ಚಿಸುವುದರ ಜತೆಗೆ ನೀರಿನ ಕೊರತೆಯನ್ನು ನಿವಾರಿಸಲು ಸಹಾಯಕವಾಗಲಿದೆ. ತೆಂಗಿನಮರದ ಬುಡದಿಂದ 1.8 ಮೀ.ನಿಂದ 2 ಮೀ. ದೂರದಲ್ಲಿ ನೀರಿನ ಒಡ್ಡು ನಿರ್ಮಿಸಲಾಗುವುದು. ಸಾಂಪ್ರದಾಯಿಕವಾಗಿ ಆಚರಣೆಯಲ್ಲಿರುವ ಈ ಕೃಷಿ ಚಟುವಟಿಕೆ ಇತ್ತೀಚಿನ ದಿನಗಳಲ್ಲಿ ಗಣನೀಯವಾಗಿ ಕುಸಿದಿದ್ದು, ಈ ಅಭಿಯಾನದ ಮೂಲಕ ಕೃಷಿಕರನ್ನು ಮತ್ತೆ ಪ್ರೇರೇಪಿಸಲಾಗುವುದು. ಕೇರಳದ ಈ ವಿಶಿಷ್ಟ ಜಲಸಂರಕ್ಷಣಾ ವಿಧಾನವನ್ನು ಪ್ರತಿ ಮನೆಗೂ ತಲುಪಿಸಲು ಹಸಿರು ಕೇರಳ ಮಿಷನ್ ಯೋಜನೆಯಿರಿಸಿಕೊಂಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net