ಹಸಿರು ಹೊದಿಕೆಗಾಗಿ ಗ್ರೀನ್‌ಫೀಲ್ಡ್ ಕಾರ್ಯಕ್ರಮ

green field
Published on

ಕಾಸರಗೋಡು : ವಿಶ್ವ ಪರಿಸರ ದಿನದ ಅಂಗವಾಗಿ ಹಸಿರು ಕೇರಳ ಮಿಷನ್ ವತಿಯಿಂದ ಹಸಿರು ವನ ಉತ್ತೇಜಿಸುವ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ರಾಜ್ಯದಲ್ಲಿ 1000ಕ್ಕೂ ಹೆಚ್ಚು ಹೊಸ ಗ್ರೀನ್ ಫೀಲ್ಡ್ ಆರಂಭಿಸುವ ಗುರಿ ಇದ್ದು, ಗ್ರಾಮ ಪಂಚಾಯಿತಿ ಹಾಗೂ ನಗರಸಭೆಗಳಲ್ಲಿ ತಲಾ ಒಂದರಂತೆ ಎಲ್ಲ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಸಸ್ಯಗಳನ್ನು ನೆಡಲಾಗುವುದು. ಜತೆಗೆ 405 ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ 870 ಹೊಸ ಗ್ರೀನ್ ಫೀಲ್ಡ್‌ಗಳನ್ನು ನಿರ್ಮಾಣಗೊಳ್ಳಲಿದೆ. ಪ್ರಸಕ್ತ 203 ಹೊಸ ಹಸಿರು ಕ್ಷೇತ್ರಗಳು ಕಾಸರಗೋಡು ಜಿಲ್ಲೆಯಲ್ಲಿವೆ.

ಹಲವು ಸ್ಥಳಗಳಲ್ಲಿ ಹಸಿರುವನ ಯೊಜನೆ ಜಾರಿಗೊಳಿಸುವ ಮೂಲಕ ಸ್ಥಳೀಯ ಜೀವ ವೈವಿಧ್ಯತೆ ಖಚಿತಪಡಿಸಿಕೊಳ್ಳಲಾಗುತ್ತದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ, ಅಯ್ಯಂಕಾಳಿ ಉದ್ಯೋಗ ಖಾತ್ರಿ ಯೋಜನೆ, ಸಾಮಾಜಿಕ ಅರಣ್ಯ ಇಲಾಖೆ, ಕೃಷಿ ಇಲಾಖೆ, ಗಿಡಮೂಲಿಕೆ ಮಂಡಳಿ, ಕೇರಳ ಅರಣ್ಯ ಸಂಶೋಧನಾ ಸಂಸ್ಥೆ, ಜವಾಹರಲಾಲ್ ನೆಹರು ಟ್ರಾಪಿಕಲ್ ಬೊಟಾನಿಕಲ್ ಗಾರ್ಡನ್, ಅರಣ್ಯ ಕಾಲೇಜು ಮುಂತಾದವು ಹಸಿರು ಪ್ರಚಾರ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net