ರೈತರಿಗೆ ಸಹ್ಯಾದ್ರಿ ಬ್ರಹ್ಮ ಭತ್ತದ ತಳಿಯ ಬಿತ್ತನೆ ಬೀಜ ವಿತರಣೆ

mng--6 June sahyadri bramma
Published on

ಮಂಗಳೂರು: ಬ್ರಹ್ಮಾವರದ ವಲಯ ಕೃಷಿ ಸಂಶೋಧನಾ ಕೇಂದ್ರದಿಂದ ಅಭಿವೃದ್ಧಿ ಪಡಿಸಲಾದ ‘ಸಹ್ಯಾದ್ರಿ ಬ್ರಹ್ಮ’ ಭತ್ತದ ತಳಿಯನ್ನು ಪ್ರಾಯೋಗಿಕವಾಗಿ ಬೆಳೆಸುವ ನಿಟ್ಟಿನಲ್ಲಿ ಮಂಗಳೂರಿನ ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದ ವತಿಯಿಂದ ಗುರುವಾರ ಜಿಲ್ಲೆಯ 12 ಮಂದಿ ರೈತರಿಗೆ ತಲಾ ಒಂದು ಗೋಣಿ (25ಕೆ.ಜಿ) ಯಂತೆ ಬಿತ್ತನೆ ಬೀಜ ವಿತರಿಸಲಾಯಿತು.


ಮಂಗಳೂರಿನ ಎಕ್ಕೂರಿನ ಕೃಷಿ ವಿಜ್ಞಾನ ಕೇಂದ್ರದ ಡಾ. ಮಲ್ಲಿಕಾರ್ಜುನ್ ಮತ್ತು ಬೇಸಾಯ ತಜ್ಞ ಹರೀಶ್ ಶೆಣೈ ಅವರು ಬೀಜ ವಿತರಿಸಿದರು. ಇದೇ ವೇಳೆ ಅವರು ರೈತರಿಗೆ ತಳಿಯನ್ನು ಬೆಳೆಸುವ ವಿಧಾನದ ಕುರಿತು ಮಾಹಿತಿ ನೀಡಿದರು. ಎಂಒ4ನ ಸುಧಾರಿತ ಸಂಶೋಧನೆಯಾಗಿ ಸಹ್ಯಾದ್ರಿ ಬ್ರಹ್ಮವನ್ನು ಸಿದ್ಧಪಡಿಸಲಾಗಿದೆ.


ಪ್ರಗತಿಪರ ಕೃಷಿಕರಾದ ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ (ಕೋಡಿಹಳ್ಳಿ ಚಂದ್ರಶೇಖರ್ ಬಣ)ಯ ರಾಜ್ಯ ಕಾರ್ಯದರ್ಶಿ ಮನೋಹರ ಶೆಟ್ಟಿ, ದಯಾನಂದ ಶೆಟ್ಟಿ ಕೊಳವೂರು, ಪ್ರತಿಭಾ ಹೆಗ್ಡೆ ಕೊಳವೂರು, ಸಚೀಂದ್ರ ರೈ ಬಡಗ ಬಳ್ಳೂರು, ದಾಮೋದರ ಶೆಟ್ಟಿ ಕೆಲಿಂಜಾರ್, ಅನಿಲ್ ಪೂಜಾರಿ ಕೆಲಿಂಜಾರ್, ಧನಕೀರ್ತಿ ಬಲಿಪ ಮೂಡುಬಿದಿರೆ, ಮಹಾಬಲ ಹೆಗ್ಡೆ ಹರೇಕಳ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net