ಸಿರಿಧಾನ್ಯ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು: ಚಲುವರಾಯಸ್ವಾಮಿ ಹೇಳಿಕೆ

Raghu_22_Bengaluru_Santhe_@_GKVK-2
Published on

ಬೆಂಗಳೂರು: ಪ್ರಸ್ತುತ ದಿನಗಳಲ್ಲಿ ಸಿರಿಧಾನ್ಯಗಳ ಮೌಲ್ಯವರ್ಧನೆಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಾಗಿದೆ ಎಂದು ಕೃಷಿ ಸಚಿವ ಎನ್​.ಚಲುವರಾಯಸ್ವಾಮಿ ಹೇಳಿದ್ದಾರೆ.

ಕೃಷಿ ವಿಶ್ವವಿದ್ಯಾಲಯ ವತಿಯಿಂದ ಹೆಬ್ಬಾಳದ ಜಿಕೆವಿಕೆಯಲ್ಲಿ ಶನಿವಾರ ಆಯೋಜಿಸಿದ್ದ "ಉತ್ಪನ್ನಗಳ ಸಂತೆ' ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ವಿವಿಯಿಂದ ಅಭಿವೃದ್ಧಿಪಡಿಸಿದ ವಿವಿಧ ತಾಂತ್ರಿಕತೆಗಳ ಉತ್ಪನ್ನ, ಕೃಷಿ ಪರಿಕರಗಳನ್ನು ರೈತರು ಮತ್ತು ಸಾರ್ವಜನಿಕರು ಪರಿಚಯಿಸಲು ಸಂತೆ ಆಯೋಜಿಸಿರುವುದು ಸಂತಸದ ವಿಷಯ. ಇದಕ್ಕಾಗಿ ವಿವಿಗೆ ಅಭಿನಂದನೆ ಸಲ್ಲಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಸಿರಿಧಾನ್ಯ ಮಾರುಕಟ್ಟೆ ವಿಸ್ತಾರವಾಗುತ್ತಿದೆ. ಇದರಿಂದಾಗಿ ಬೆಳೆಗಾರರಿಗೂ ಅನುಕೂಲವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕೃಷಿ ಸಂಶೋಧನಾ, ವಿಸ್ತರಣೆ,ಉತ್ಪನ್ನಗಳು, ತಂತ್ರಜ್ಞಾನ, ತಾಂತ್ರಿಕತೆಯನ್ನು ಪರಿಚಯಿಸಲು ಕೃಷಿ ವಿವಿ ಮುಂದಾಗಿರುವ ಕ್ರಮದ ಬಗ್ಗೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು. ಕೃಷಿ ವಿವಿ ಪ್ರಾಧ್ಯಾಪಕರು, ಅಧ್ಯಾಪಕರು ಸೇರಿ ಮತ್ತಿತರರಿದ್ದರು. ಉತ್ಪನ್ನಗಳ ಸಂತೆಗೆ ಸಾವಿರಾರು ಮಂದಿ ಭೇಟಿ ನೀಡಿ ಮಾಹಿತಿ ಪಡೆದರು. 50ಕ್ಕೂ ಅಧಿಕ ಮಳಿಗೆಗಳನ್ನು ಪ್ರತಿಷ್ಠಾಪಿಸಲಾಗಿತ್ತು.

328 ತಳಿ ಅಭಿವೃದ್ಧಿ

ಆರು ದಶಕಗಳಲ್ಲಿ ಕೃಷಿ ವಿವಿ ಒಟ್ಟು 485 ತಂತ್ರಜ್ಞಾನ, 328 ತಳಿಗಳನ್ನು ಅಭಿವೃದ್ಧಿಪಡಿಸಿದೆ. ಈ ಎಲ್ಲ ತಳಿಗಳು ನಾಡಿನ ಕೃಷಿಕರಲ್ಲಿ ಜನಪ್ರಿಯವಾಗಿದ್ದು, ಉತ್ಪಾದನೆ ಹೆಚ್ಚಿಸುವಲ್ಲಿ ನಿರ್ಣಾಯಕ ಪಾತ್ರವಹಿಸಿದೆ. ಏಕಗವಾ ಯೋಜನೆಯಡಿ ತಲುಪಿಸಲು ತಾಂತ್ರಿಕತೆ, ಉತ್ಪನ್ನ ತಲುಪಿಸಲು ಸಂತೆ ಆಯೋಜಿಸಲಾಗಿದೆ. 30 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದಾರೆ. ಸಂತೆಯನ್ನು ರೈತರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಕೃಷಿ ವಿವಿ ಕುಲಪತಿ ಡಾ.ಎಸ್​.ವಿ.ಸುರೇಶ್​ ಸಲಹೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net