ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ವಿಸ್ತರಣೆ

highway
bangalore chenni express way
Published on

ಹೊಸ ಆದೇಶ ಹೊರಡಿಸಿದ ನಗರಾಭಿವೃದ್ಧಿ ಇಲಾಖೆ 24 ಗ್ರಾಮಗಳ ಸೇರ್ಪಡೆ

ಗಂಗಾಧರ್ ಬೈರಾಪಟ್ಟಣ ರಾಮನಗರ

ಬಿಡದಿ ಬೆಂಗಳೂರು ಸ್ಮಾರ್ಟ್ ಸಿಟಿ ಯೋಜನಾ ಪ್ರಾಧಿಕಾರವನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವಾಗಿ ಮರು ನಾಮಕರಣ ಮಾಡಿದ್ದ ಸರ್ಕಾರ ಇದೀಗ ಇದರ ವ್ಯಾಪ್ತಿಯನ್ನು ವಿಸ್ತರಿಸಿ ಆದೇಶ ಹೊರಡಿಸಿದೆ.

ಉಪ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರ ಮತ್ತು ಕನಕಪುರ ಯೋಜನಾ ಪ್ರಾಧಿಕಾರ ವ್ಯಾಪ್ತಿಯಲ್ಲಿದ್ದ 22 ಗ್ರಾಮಗಳನ್ನು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಗೊಳಿಸುವ ಮೂಲಕ ಸ್ಮಾರ್ಟ್ ಸಿಟಿ ನಿರ್ಮಾಣಕ್ಕೆ ಹೊಸ ರೂಪ ನೀಡಲು ಸರ್ಕಾರ ಮುಂದಾಗಿದೆ. ಇದರೊಂದಿಗೆ ಪ್ರಾಧಿಕಾರ ವ್ಯಾಪ್ತಿಗೆ ಒಟ್ಟಾರೆ ಬೆಂಗಳೂರು ನಗರ, ರಾಮನಗರ ಜಿಲ್ಲೆಯ ಒಟ್ಟು 54 ಗ್ರಾಮಗಳು ಸೇರ್ಪಡೆಯಾದಂತೆ ಆಗಿದೆ.

ಹೊಸ ಸೇರ್ಪಡೆ ಯಾವುವು?

2025ರ ಮಾರ್ಚ್ 3ರಂದು ನಗರಾಭಿವೃದ್ಧಿ ಇಲಾಖೆ ಅಧೀನ ಕಾರ್ಯದರ್ಶಿ ಹೊರಡಿಸಿರುವ ಆದೇಶದಂತೆ ರಾಮನಗರ ಜಿಲ್ಲೆಯ ಹಳ್ಳಿಮಾಳ, ಹರೀಸಂದ್ರ, ಬೊಮ್ಮಚನಹಳ್ಳಿ, ಲಕ್ಕಸಂದ್ರ, ಸುಗ್ಗನಹಳ್ಳಿ, ಚಿಕ್ಕಸೂಲಿಕೆರೆ, ಕೂಟಗಲ್ ಹೋಬಳಿಯ ದೊಡ್ಡ ಸೂಲಿಕೆರೆ, ಲಕ್ಷ್ಮೀಪುರ ಗ್ರಾಮಗಳು ಉಪನಗರ ವರ್ತುಲ ರಸ್ತೆ ಯೋಜನೆ ಪ್ರಾಧಿಕಾರದಲ್ಲಿ ಇದ್ದವು. ಈ ಎಲ್ಲ ಗ್ರಾಮಗಳು ಸಂಪೂರ್ಣವಾಗಿ ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಗೆ ಒಳಪಡಲಿವೆ.

ಇನ್ನು ಕನಕಪುರ ಯೋಜನಾ ಪ್ರಾಧಿಕಾರದ ವ್ಯಾಪ್ತಿಯಲ್ಲಿದ್ದ ಬೆಂಗಳೂರು ದಕ್ಷಿಣ ತಾಲೂಕಿನ ಉತ್ತರಹಳ್ಳಿ ಹೋಬಳಿಯ ಕೆಜಿ ಕಗ್ಗಲೀಪುರ, ಉತ್ತರಿ, ಕೆಜಿ ಚೌಡನಹಳ್ಳಿ, ಕೆಜಿ ನೆಲಗುಳಿ, ನಾಗನಾಯಕನಹಳ್ಳಿ, ನೆಟ್ಟಿಗೆರೆ, ರಾವುಗೋಡ್ಲು, ಸೋಮನಹಳ್ಳಿ ಗ್ರಾಮಗಳು ಮತ್ತು ರಾಮನಗರ -ಹಾರೋಹಳ್ಳಿ ತಾಲೂಕಿನ ಗಬ್ಬಾಡಿ, ಗಬ್ಬಾಡಿ ಕಾವಲ್, ಕಗ್ಗಲಹಳ್ಳಿ, ಮುಡೇನಹಳ್ಳಿ, ವಡೇರಹಳ್ಳಿ, ಯಡಮಡು ಗ್ರಾಮಗಳು ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರ್ಪಡೆಯಾಗಿವೆ.

ಯಥಾಸ್ಥಿತಿ ಮುಂದುವರಿಕೆ

ಹೊಸ ಆದೇಶ 3 ಮಾರ್ಚ್ 2025ರಿಂದ ಜಾರಿಗೆ ಬಂದಿದೆ. ಇದಕ್ಕೂ ಮುನ್ನಾ ಕನಕಪುರ ಯೋಜನಾ ಪ್ರಾಧಿಕಾರ ಮತ್ತು ಉಪನಗರ ವರ್ತುಲ ರಸ್ತೆ ಯೋಜನಾ ಪ್ರಾಧಿಕಾರದಿಂದ ಈಗಾಗಲೇ ಅನುಮೋದನೆಗೊಂಡಿರುವ ಯೋಜನೆಗಳನ್ನು ಮುಂದುವರಿಸಲು ಸಹ ಆದೇಶದಲ್ಲಿ ತಿಳಿಸಲಾಗಿದೆ.

ವ್ಯಾಪ್ತಿ ವಿಸ್ತರಣೆ

ಈಗ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿ ರಾಮನಗರ ತಾಲೂಕಿನ 45 ಗ್ರಾಮಗಳು, ಹಾರೋಹಳ್ಳಿ ತಾಲೂಕಿನ 6 ಮತ್ತು ಬೆಂಗಳೂರು ದಕ್ಷಿಣ ತಾಲೂಕಿನ 9 ಗ್ರಾಮಗಳು ಸೇರಿ ಒಟ್ಟು 59 ಗ್ರಾಮಗಳ 23361 .89 ಹೆಕ್ಟೇರ್ ಪ್ರದೇಶ ಒಳಪಡಲಿದೆ. ಈ ಗ್ರಾಮಗಳಲ್ಲಿ ಒಟ್ಟು 92,822 ಮಂದಿ ಜನ ಸಂಖ್ಯೆ ಇದೆ.

ರಾಮನಗರ ತಾಲೂಕುಬಿಡದಿ ಹೋಬಳಿ ಗ್ರಾಮ ವಿಸ್ತೀರ್ಣ (ಹೆಕ್ಟೇರ್‌ಗಳಲ್ಲಿ) ಬಿಡದಿ 173.74 ಕಲ್ಲುಗೋಪಳ್ಳಿ 257.78ಕೆಂಚನಕುಪ್ಪೆ 413.28 ಎಂ.ಕರೇನಹಳ್ಳಿ 605.23ಅಬ್ಬನಕುಪ್ಪೆ 368.52 ಇಟ್ಟಮಡು 504.71ರಾಮನಹಳ್ಳಿ 367.76ಹುಲ್ತಾರ್ ಫಾರೆಸ್ಟ್ 1335.82 ಐವಾಗಿಲು 71.89ಗಾಣಕಲ್ಲು 204.15ಕೆಂಪದ್ಯಾಪನಹಳ್ಳಿ 236.45ಕಾಕರಾಮನಹಳ್ಳಿ 222.92ಬನ್ನಿಗೆರೆ 487.45ಭೈರಮಂಗಲ 547.56ಮಂಡಲಹಳ್ಳಿ 37.71 ಅಳ್ಳಾಳುಸಂದ್ರ 594.01ಕಂಚುಗಾರನಹಳ್ಳಿ 637.79ಕಂಚುಗಾರನಹಳ್ಳಿ ಕಾವಲ್ 45.13ಕೆಂಪಯ್ಯನಪಾಳ್ಯ 160.73ಹೊಸೂರು 1037.11ಗೊಲ್ಲರಪಾಳ್ಯ 141.95ಕಸಬಾ ಹೋಬಳಿ ಕೆಂಪನಹಳ್ಳಿ 202.46ಬಳಗುಳಿ 87.37ಬಸವನಪುರ 233.86ಕೇತೋಹಳ್ಳಿ 587.67ಮಾದಾಪುರ 393.66ಮಾಯಗಾನಹಳ್ಳಿ 475.12ಹಾಗಲಹಳ್ಳಿ 1037.79ಧಾರಾಪುರ 151.97ಹಳ್ಳಿ ಮಾಳ 652.35ಹರೀಸಂದ್ರ 1580.77ಬೊಮ್ಮಚ್ಚನಹಳ್ಳಿ 893.98ಲಕ್ಕಸಂದ್ರ 177.74ಸುಗ್ಗನಹಳ್ಳಿ 917.84ಚಿಕ್ಕಸೂಲಿಕೆರೆ 325.50ಕೂಟಗಲ್ ಹೋಬಳಿ ದೊಡ್ಡಸೂಲಿಕೆರೆ 609.63ಲಕ್ಷ್ಮೀಪುರ 763.56ಕೈಲಾಂಚ ಹೋಬಳಿ ಬೆಣ್ಣಹಳ್ಳಿ 295.19ಅಣ್ಣಹಳ್ಳಿ 310.99ಎಂ.ಜಿ ಪಾಳ್ಯ 358.97ಹಾರೋಹಳ್ಳಿ ವಡೇರಹಳ್ಳಿ 414.86ಗಬ್ಬಾಡಿ 170.42ಗಬ್ಬಾಡಿ ಕಾವಲ್ 23.64ಕಗ್ಗಲಹಳ್ಳಿ 119.24ಮುಡೇನಹಳ್ಳಿ 379.83ಯಡಮಡು 62.87ಬೆಂಗಳೂರು (ದ)ಉತ್ತರಹಳ್ಳಿ ಕೆಜಿ ಕಗ್ಗಲೀಪುರ 576.31ಉತ್ತರಿ 495.51ಕೆ ಜಿ ಚೌಡನಹಳ್ಳಿ 389.16ಕೆ.ಜಿ. ನೆಲಗುಳಿ 296.28ನಾಗನಾಯಕನಹಳ್ಳಿ 167.77ನೆಟ್ಟಿಗೆರೆ 143.89ರಾವುಗೋಡ್ಲು 20.72ಸೋಮನಹಳ್ಳಿ 51.32

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net