

ಹೆಬ್ರಿ: ಅಣೆಕಟ್ಟಿನಿಂದಾಗಿ ಅನೇಕ ರೈತರಿಗೆ ಉಪಯೋಗವಾಗಲಿದೆ. ಅಂತರ್ಜಲ ಮಟ್ಟ ವೃದ್ಧಿಯಾಗಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯಾಗುವುದು. ಇದು ಬಿಜೆಪಿ ಸರ್ಕಾರದ ಮಹತ್ತರ ಕೊಡುಗೆಯಾಗಿದೆ ಎಂದು ಶಾಸಕ ಸುನೀಲ್ ಕುಮಾರ್ ಹೇಳಿದರು.
ಹೆಬ್ರಿ ತಾಲೂಕಿನ ಚಾರ ಗ್ರಾಮದ ನವೋದಯದ ಬಳಿ 70 ಕೋಟಿ ರೂ.ವೆಚ್ಚದಲ್ಲಿ ನಿರ್ಮಾಣವಾದ ಸೇತುವೆ ಸಹಿತ ಕಿಂಡಿ ಅಣೆಕಟ್ಟಿಗೆ ಸೋಮವಾರ ಬಾಗಿನ ಸಮರ್ಪಿಸಿ ಮಾತನಾಡಿದರು.
ಹೆಬ್ರಿ ಬಿಜೆಪಿ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕನ್ಯಾನ ಲಕ್ಷ್ಮೀನಾರಾಯಣ ನಾಯಕ್, ಧಾರ್ಮಿಕ ಮುಂದಾಳು ಎಚ್.ಭಾಸ್ಕರ್ ಜೋಯಿಸ್, ಬಿಜೆಪಿಯ ಪ್ರಮುಖರಾದ ಗಣಪತಿ ಎಂ, ತಾರಾನಾಥ್ ಬಂಗೇರ, ರಮೇಶ್ ಪೂಜಾರಿ, ಅಮೃತ್ ಕುಮಾರ್ ಶೆಟ್ಟಿ ಮತ್ತಿತರರಿದ್ದರು.