ಶ್ರೇಷ್ಠ ಕೃಷಿ ವಿಜ್ಞಾನಿ ಡಾ.ಎಸ್.ಎ.ಪಾಟೀಲ್ ನಿಧನ

IMG-20240715-WA0002
Published on


ಕಲಬುರಗಿ : ಕೃಷಿ ವಿಶ್ವವಿದ್ಯಾಲಯದ‌ ವಿಶ್ರಾಂತ ಕುಲಪತಿಗಳು ಹಾಗೂ ನಾಡಿನ ಶ್ರೇಷ್ಠ ಕೃಷಿ ವಿಜ್ಞಾನಿಗಳಾಗಿದ್ದ ಡಾ.ಎಸ್.ಎ.ಪಾಟೀಲ್ ಬಿರಾಳ (೮೦) ಅವರು ನಿಧನರಾದರು.

ಧಾರವಾಡ ಕೃಷಿ ವಿಶ್ವವಿದ್ಯಾಲಯಕ್ಕೆ ಎರಡು ಅವಧಿಗೆ ಕುಲಪತಿಗಳಾಗಿ ಸೇವೆ ಸಲ್ಲಿಸಿದ್ದರು. ಕರ್ನಾಟಕ ಕೃಷಿ ಆಯೋಗದ ಅಧ್ಯಕ್ಷರಾಗಿದ್ದರು. ಐಎಆರ್ ಐ ನಿರ್ದೇಶಕರು ಹೀಗೆ ಹಲವು ಹುದ್ದೆಗಳನ್ನು ಅಲಂಕರಿಸಿ ಕರ್ತವ್ಯ ನಿರ್ವಹಣೆ ಮಾಡಿದ್ದರು.

ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು, ಸಹೋದರರು ಸೇರಿದಂತೆ ಅಪಾರ ಬಂಧುಗಳನ್ನು ಅಗಲಿದ್ದಾರೆ.

ನಗರದ ಗೋದುತಾಯಿ ನಗರದ ನಿವಾಸದಲ್ಲಿ ‌ಕಳೆದ ರಾತ್ರಿ ಮಲಗಿಕೊಂಡಿದ್ದ ವೇಳೆಯಲ್ಲಿ ತೀವ್ರ ಹೃದಯಾಘಾತಕ್ಕೊಳಗಾಗಿ ಕೊನೆಯುಸಿರೆಳೆದರು.
ಮನೆಯಲ್ಲಿ ಯಾರು ಇರಲಿಲ್ಲ. ಇಂದು ಅವರು ಹೊರಗಡೆ ಬಾರದೆ ಇರುವುದರಿಂದ ಕೆಳಗಡೆ ಬಾಡಿಗೆ ಇದ್ದವರು ಬಾಗಿಲು ಬಡಿದರು ತೆರೆಯಲಿಲ್ಲ. ಆಗ ಸಹೋದರರರಿಗೆ ಕರೆ ಮಾಡಿ ಕರೆಸಿ ಬಾಗಿಲು ತೆರೆದಾಗ ಮಲಗಿದಲ್ಲಿಯೇ ಕೊನೆಯುಸಿರೆಳೆದ್ದು ಗೊತ್ತಾಗಿದೆ.

ಪಾರ್ಥಿವ ಶರೀರವನ್ನು ನಗರದ ಭಗವತಿ‌ ನಗರದ ಮನೆಯಲ್ಲಿ ಇರಿಸಲಾಗಿದೆ. ಮೂವರು ಮಕ್ಕಳು ಅಮೆರಿಕದಲ್ಲಿ ಇರುವುದರಿಂದ ಅವರ ಬಂದ ನಂತರ ಅಂತ್ಯಕ್ರಿಯೆ ನೆರವೇರಿಸಲು ಸಹೋದರರು, ಆಪ್ತರು ನಿರ್ಧರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net