

ಮದ್ದೂರು: ಕ್ಷೇತ್ರದ ಗ್ರಾಮೀಣ ಭಾಗಗಳಲ್ಲಿ ಅಗತ್ಯವಿರುವ ರಸ್ತೆಗಳನ್ನು ಪಟ್ಟಿ ಮಾಡಿ ಹಂತ ಹಂತವಾಗಿ ಅಭಿವೃದ್ಧಿಪಡಿಸುವ ಮೂಲಕ ಗ್ರಾಮಸ್ಥರಿಗೆ ಅನುಕೂಲ ಕಲ್ಪಿಸಲಾಗುತ್ತಿದೆ ಎಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.
ತಾಲೂಕಿನ ಗೆಜ್ಜಲಗೆರೆ, ನಿಡಘಟ್ಟ, ಮಾದಾಪುರ ದೊಡ್ಡಿ ಗ್ರಾಮಗಳ ಪ್ರಮುಖ ರಸ್ತೆಗಳ ಅಭಿವೃದ್ಧಿ ಕಾಮಗಾರಿಗೆ ಇತ್ತೀಚೆಗೆ ಚಾಲನೆ ನೀಡಿ ಮಾತನಾಡಿದರು.
ನಾನು ಗ್ರಾಮಗಳಿಗೆ ತೆರಳಿ ಜನ ಸಂರ್ಪಕ ಸಭೆ ಮಾಡಿದ ಸಂದರ್ಭದಲ್ಲಿ ಗ್ರಾಮಸ್ಥರು ರಸ್ತೆ ಅಭಿವೃದ್ಧಿಪಡಿಸುವಂತೆ ಮನವಿ ಮಾಡಿದ್ದರು. ಆದ್ದರಿಂದ ಸರ್ಕಾರದಿಂದ ವಿಶೇಷ ಅನುದಾನದಲ್ಲಿ ರಸ್ತೆಗಳ ಅಭಿವೃದ್ಧಿ ಮಾಡಲಾಗುತ್ತಿದೆ ಎಂದರು.
ರಸ್ತೆಗಳು ಅಭಿವೃದ್ಧಿಯ ಸಂಕೇತವಾಗಿದ್ದು, ರಸ್ತೆಗಳ ನಿರ್ಮಾಣದಿಂದ ರೈತರಿಗೆ, ಗ್ರಾಮಸ್ಥರಿಗೆ, ವಾಹನ ಸವಾರರಿಗೆ ಅನುಕೂಲವಾಗುತ್ತದೆ. ಈ ಹಿನ್ನೆಲೆಯಲ್ಲಿ ಗ್ರಾಮೀಣ ಭಾಗದ ರಸ್ತೆಗಳನ್ನು ಸರ್ವತೋಮುಖ ಅಭಿವೃದ್ಧಿ ಮಾಡಲು ಮುಂದಾಗಿರುವುದಾಗಿ ತಿಳಿಸಿದರು.
ಮುಖಂಡರಾದ ದೀಪಕ್, ಹರೀಶ್, ಶಿವಾಜಿ, ಆದಿಮೂರ್ತಿ, ಹಿತೇಶ್ ಗೌಡ, ಕಿರಣ್, ಆದಿ, ಶಿವಪ್ರಸಾದ್, ಎನ್.ಎಂ.ಪ್ರಕಾಶ್, ಮಧು, ನಯನಾ, ಸತೀಶ್, ತಿಮ್ಮಣ್ಣ, ಮಹೇಶ್, ಜಯಮುದ್ದು, ಕೃಷ್ಣ, ಲಕ್ಷ್ಮಣ್, ಅಭಿ, ಚಿಕ್ಕಣ್ಣ, ಯತೀಶ್, ಕೃಷ್ಣ, ಮನ್‌ಮುಲ್ ನಿರ್ದೆಶಕ ಹರೀಶ್, ಡಿಸಿಸಿ ಬ್ಯಾಂಕ್ ನಿರ್ದೆಶಕ ಸಂದರ್ಶ ಇದ್ದರು.