ಸಂಘದ ಭವನ ನಿರ್ಮಾಣಕ್ಕೆ ಅನುದಾನ

26 YLB 1 NEW
ಯಲಬುರ್ಗಾದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಗಾಣಿಗ ಸಂಘದಿಂದ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭವನ್ನು ಶಾಸಕ ಬಸವರಾಜ ರಾಯರಡ್ಡಿ ಉದ್ಘಾಟಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಮರೇಗೌಡ ಪಾಟೀಲ್, ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಕರಡಿ ಸಂಗಣ್ಣ, ಸಮುದಾಯದ ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು ಇತರರಿದ್ದರು.
Published on

ಯಲಬುರ್ಗಾ: ಜಗತ್ತಿಗೆ ಬೆಳಕು ನೀಡಿದ ಗಾಣಿಗ ಸಮಾಜದ ಕೊಡುಗೆ ದೊಡ್ಡದು ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದ ಬುದ್ಧ ಬಸವ ಅಂಬೇಡ್ಕರ್ ಭವನದಲ್ಲಿ ಜಿಲ್ಲೆ ಹಾಗೂ ತಾಲೂಕು ಗಾಣಿಗರ ಸಂಘ ಹಾಗೂ ಗಾಣಿಗ ನೌಕರರ ಸಂಘದಿಂದ ಗುರುವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ಗಣ್ಯರಿಗೆ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಸಮುದಾಯ ಬೆಳೆಯಬೇಕಾದರೆ ಶಿಕ್ಷಣಕ್ಕೆ ಒತ್ತು ನೀಡಬೇಕು. ಮುದಾಯದ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸಿಎಂ ಗಮನಕ್ಕೆ ತಂದು ಅನುಷ್ಠಾನಕ್ಕೆ ಒತ್ತಾಯಿಸಲಾಗುವುದು. ವಿನಯ, ಸಂಸ್ಕಾರ ಮತ್ತು ಜಾಗತಿಕ ತಿಳಿವಳಿಕೆಗೆ ವಿದ್ಯೆ ಅವಶ್ಯವಿದೆ. ಯಾವುದೇ ಪ್ರತಿಭೆ ಜಾತಿಗೆ ಸೀಮಿತವಾಗಿಲ್ಲ. ಧರ್ಮ ಬೇರೆ ಜಾತಿ ವ್ಯವಸ್ಥೆ ಬೇರೆ. ಜಾತಿ ವ್ಯವಸ್ಥೆ ವಿರುದ್ಧ ಎಲ್ಲರನ್ನೂ ಒಂದಾಗಿಸಲು ಶರಣರು ಕ್ರಾಂತಿ ಮಾಡಿದರು. ಸರ್ಕಾರದಿಂದ ಗಾಣಿಗ ಸಂಘದ ಭವನ ನಿರ್ಮಾಣಕ್ಕೆ ಅನುದಾನ ಕೊಡಿಸಲಾಗುವುದು ಎಂದರು.

ಬಾಗಲಕೋಟೆ ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ, ಸಿದ್ದೇಶ್ವರ ಸ್ವಾಮೀಜಿಯನ್ನು ಒಂದು ಸಮಾಜಕ್ಕೆ ಸೀಮಿತಗೊಳಿಸಬೇಡಿ. ತಮ್ಮವ್ಯಕ್ತಿತ್ವದ ಮೂಲಕ ಸಮಾಜ ಮೀರಿ ಬೆಳೆದವರು. ಅನ್ಯ ಸಮಾಜವನ್ನು ಪ್ರೀತಿ ವಿಶ್ವಾಸದಿಂದ ಕಟ್ಟಿಕೊಂಡು ಬದುಕು ರೂಪಿಸಿಕೊಳ್ಳಬೇಕು. ಮಾಜಿ ಶಾಸಕ ಶಿವಶರಣಪ್ಪಗೌಡ ಪಾಟೀಲ್ ಪುತ್ರ ಅರವಿಂದಗೌಡ ಪಾಟೀಲ್ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಎರಡು ಎಕರೆ ಭೂಮಿ ನೀಡಿರುವುದು ಮಾದರಿ ಕೆಲಸ ಎಂದರು.

ಮಾಜಿ ಸಂಸದ ಎಸ್.ಕೆ.ಬೆಳ್ಳುಬ್ಬಿ ಹಾಗೂ ಮಾಜಿ ಶಾಸಕ ಆನಂದ ನ್ಯಾಮಗೌಡ ಮಾತನಾಡಿ, ಸಮಾಜದ ಸಂಘಟನೆಗೆ ಒತ್ತು ನೀಡಬೇಕು. ಗಾಣದ ಕಸುಬು ಪ್ರಾರಂಭಿಸುವ ಮೂಲಕ ಸಮಾಜದ ಆರೋಗ್ಯ ಕಾಪಾಡಬೇಕು. ಶಿಕ್ಷಣಕ್ಕೆ ಒತ್ತು ನೀಡಬೇಕು ಎಂದರು.
ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾಘವೇಂದ್ರ ಹಿಟ್ನಾಳ, ಕಾಡಾ ಅಧ್ಯಕ್ಷ ಹಸನ್‌ಸಾಬ್ ದೋಟಿಹಾಳ, ಮಾಜಿ ಸಚಿವರಾದ ಎಸ್.ಕೆ.ಬೆಳ್ಳುಬ್ಬಿ, ಅಮರೇಗೌಡ ಪಾಟೀಲ್ ಬಯ್ಯಪುರ, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಎಂಎಲ್‌ಸಿ ಶಿವರಾಜ ಸಜ್ಜನ, ಮಾಜಿ ಸಂಸದ ಕರಡಿ ಸಂಗಣ್ಣ, ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ, ಗಾಣಿಗ ಸಮಾಜದ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು.
ಅದ್ಧೂರಿ ಮೆರವಣಿಗೆ: ಕಾರ್ಯಕ್ರಮಕ್ಕೂ ಪೂರ್ವದಲ್ಲಿ ವಿಜಯಪುರದ ವನಶ್ರೀ ಮಠದ ಲಿ.ಜಗದ್ಗುರು ಜಯದೇವ ಸ್ವಾಮೀಜಿಗಳ ಭಾವಚಿತ್ರದೊಂದಿಗೆ ಕುಂಭ ಕಳಸ, ಡೊಳ್ಳು ಕುಣಿತ ವಾದ್ಯ ಮೇಳದೊಂದಿಗೆ ಪ್ರಮುಖ ವೃತ್ತಗಳ ಮೂಲಕ ಮೆರವಣಿಗೆ ನಡೆಯಿತು.

ಗಾಣಿಗ ಸಮೂದಾಯದ ಅಧ್ಯಕ್ಷ ಗುರಣ್ಣ ಗೋಡಿ, ಮಾಜಿ ಶಾಸಕ ಕೆ.ಶರಣಪ್ಪ, ಜಿಲ್ಲಾಧ್ಯಕ್ಷ ತೋಟಪ್ಪ ಕಾಮನೂರು, ತಾಲೂಕು ಅಧ್ಯಕ್ಷ ಸುಧಾಕರ ದೇಸಾಯಿ, ಗಣ್ಯರಾದ ಅರವಿಂದಗೌಡ ಪಾಟೀಲ್, ಬಸವರಾಜ ಉಳ್ಳಾಗಡ್ಡಿ, ವೀರನಗೌಡ ಬಳೂಟಗಿ, ಬಸವಲಿಂಗಪ್ಪ ಭೂತೆ, ರುದ್ರಮುನಿ ಗಾಳಿ, ಅಮರಗುಂಡಪ್ಪ ಮೇಟಿ, ಅಂದಪ್ಪ ಜವಳಿ, ರತನ ದೇಸಾಯಿ, ಆನಂದ ಕೆ.ಮಂಡ್ಯ, ಮಹೇಶ ಹಳ್ಳಿ, ಶರಣಪ್ಪ ನಾಗೋಜಿ, ಅಯ್ಯನಗೌಡ ಕೆಂಚಮ್ಮನವರ್, ಶಿವಪ್ಪ ವಾದಿ, ಆದೇಶ ರೊಟ್ಟಿ, ಗಿರಿಜಾ ರೇವಣಪ್ಪ ಸಂಗಟಿ, ವೈ.ಜಿ.ಪಾಟೀಲ, ಮಲ್ಲನಗೌಡ ಪಾಟೀಲ, ಶಿವಪುತ್ರಪ್ಪ ತಿಪ್ನಾಳ, ಮಲ್ಲಮ್ಮ ಗೊಂದಿ, ಸಂಗನಗೌಡ ಪಾಟೀಲ, ಹಿರೇಹನಮಪ್ಪ ಬೊಮ್ಮನಾಳ, ರವಿ ಹೊಸೂರ, ಮಂಜುನಾಥ ರೊಟ್ಟಿ, ಬಸವರಾಜ ಬೊಮ್ಮನಾಳ ಸೇರಿದಂತೆ ಇತರರು ಇದ್ದರು.

ಯಲಬುರ್ಗಾ ತಾಲೂಕಿನಲ್ಲಿ ಗಾಣಿಗ ಸಂಘದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕ ರಾಯರಡ್ಡಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಜಿಪಂ ಮಾಜಿ ಸದಸ್ಯ ಅರವಿಂದಗೌಡ ಪಾಟೀಲ್ ಎರಡು ಎಕರೆ ಭೂಮಿ ಕೊಡುವುದಾಗಿ ಘೋಷಿಸಿದ್ದಾರೆ. ಜಿಲ್ಲೆಯ ಹಾಲಿ ಮಾಜಿ ಶಾಸಕರು, ಸಚಿವರು ಅನುದಾನ ನೀಡುವುದಾಗಿ ಭರವಸೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಸಮಾಜದವರು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಲು ಶ್ರಮಿಸಬೇಕು.ಡಾ.ಜಯಬಸವಕುಮಾರ ಮಹಾಸ್ವಾಮೀಜಿಗಾಣಿಗ ಗುರುಪೀಠ, ವನಶ್ರೀ ಸಂಸ್ಥಾನಮಠ, ವಿಜಯಪುರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net