

ಬ್ರಹ್ಮಾವರ: ಇಲ್ಲಿನ ಅಜಪುರ ಯಕ್ಷಗಾನ ಸಂಘದ 2024 ನೇ ಸಾಲಿನ ಅಧ್ಯಕ್ಷರಾಗಿ ಎಂ.ಪದ್ಮನಾಭ ಗಾಣಿಗ ಆಯ್ಕೆಯಾಗಿದ್ದಾರೆ. ಉಪಾಧ್ಯಕ್ಷರಾಗಿ ರತ್ನಾಕರ್ ಭಟ್ ಆರೂರು, ಕೃಷ್ಣಮೂರ್ತಿ, ದಯಾನಂದ ನಾಯಕ್ ಸುಂಕೇರಿ, ಕಾರ್ಯದರ್ಶಿಯಾಗಿ ಪ್ರತೀಶ್ ಕುಮಾರ್ ಬ್ರಹ್ಮಾವರ, ಜತೆ ಕಾರ್ಯದರ್ಶಿ ಗಣೇಶ್, ರಮ್ಯಾ ಎಸ್, ಖಜಾಂಚಿಯಾಗಿ ಶ್ರೀಧರ್ ಶೆಟ್ಟಿಗಾರ್ ಆಯ್ಕೆಯಾಗಿದ್ದಾರೆ. ಕಾರ್ಯಕಾರಿ ಸಮಿತಿಯ ಸದಸ್ಯರಾಗಿ ಡಾ.ರಾಜೇಶ್ ನಾವಡ, ಜ್ಯೋತಿ ಕೃಷ್ಣಾ, ವೆಂಕಟೇಶ್ ಎಚ್.ಎನ್, ರಾಘವೇಂದ್ರ ಸಾಮಗ, ರಘುರಾಮ, ಮಧುಸೂದನ ಕೆ, ದಿವಾಕರ್ ಶೆಟ್ಟಿ ಬಸ್ರೂರು, ಗೌರವಾಧ್ಯಕ್ಷರಾಗಿ ಕೃಷ್ಣಸ್ವಾಮಿ ಜೋಯಿಸ್, ಗೌರವ ಸಲಹೆಗಾರರಾಗಿ ಬಾಲಕೃಷ್ಣ ಗಾಣಿಗ, ಎಂ.ಲಕ್ಷ್ಮಣ ಗಾಣಿಗ ಆಯ್ಕೆಯಾಗಿದ್ದಾರೆ.