ಧರ್ಮಸ್ಥಳದಿಂದ ಮರ್ಕಂಜ ಪ್ರೌಢಶಾಲೆಗೆ ಅನುದಾನ

New Project (2)
Published on

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ ಟ್ರಸ್ಟ್ ಸುಳ್ಯ ತಾಲೂಕು ಸಂಪಾಜೆ ವಲಯ ಮರ್ಕಂಜ ಕಾರ್ಯಕ್ಷೇತ್ರದ ಸರ್ಕಾರಿ ಪ್ರೌಢಶಾಲೆ ಮರ್ಕಂಜ ವಿಜ್ಞಾನ ಪ್ರಯೋಗಾಲಯದ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಮಂಜೂರು ಮಾಡಿದ 1 ಲಕ್ಷ ರೂ. ಅನುದಾನದ ಮಂಜುರಾತಿ ಪತ್ರವನ್ನು ತಾಲೂಕಿನ ಯೋಜನಾಧಿಕಾರಿ ಮಾಧವ ಗೌಡ ಮುಖ್ಯಶಿಕ್ಷಕರಿಗೆ ಬುಧವಾರ ಹಸ್ತಾಂತರಿಸಿದರು.

ಮರ್ಕಂಜ ಒಕ್ಕೂಟ ಅಧ್ಯಕ್ಷ ಗೋಪಾಲಕೃಷ್ಣ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಗೀತಾ ಹೊಸೋಳಿಕೆ, ಸರಸ್ವತಿ ಕಕ್ಕಾಡು, ನಯನ್ ಕುಮಾರ್ ಜೈನ್, ರಾಜೇಂದ್ರ ಕುಮಾರ್ ಜೈನ್, ನಿತ್ಯಾನಂದ, ಚಿತ್ರಾವತಿ ಹಾಗೂ ಒಕ್ಕೂಟದ ಪದಾಧಿಕಾರಿಗಳು, ಮೇಲ್ವಿಚಾರಕ ಗಂಗಾಧರ, ಸೇವಾ ಪ್ರತಿನಿಧಿ ರೋಹಿಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net