ಬೃಹತ್ ಶೋಭಾಯಾತ್ರೆ ಇಂದು

ರಾಮು ನಾಯಕ
ರಾಮು ನಾಯಕ
Published on

ರಾಯಚೂರು: ಶ್ರೀ ರಾಮನವಮಿ ನಿಮಿತ್ತ ಶ್ರೀ ಭಜರಂಗಿ ಯುವಸೇನಾ ಸಮಿತಿಯಿಂದ ಏ.6ರಂದು ಸಂಜೆ 4ಕ್ಕೆ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸದಸ್ಯ ರಾಮು ನಾಯಕ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಂಪಿ, ಕೊಟ್ಟೂರು ಬ್ಯಾಂಡ್, ಅಘೋರಿ ವೇಷಧಾರಿಗಳು, ಕಾಲಭೈರವ ವೇಷಧಾರಿಗಳು ಹಾಗೂ ಜನಪದ ವಾದ್ಯಮೆಳದೊಂದಿಗೆ ಪಟ್ಟಣದ ಶ್ರೀ ಕೋದಂಡ ರಾಮ ದೇವಸ್ಥಾನದಿಂದ ನೂತನ ಉತ್ಸವ ಮೂರ್ತಿ, ಶ್ರೀ ರಾಮಚಂದ್ರ, ಹನುಮಾನ್ ವಿಗ್ರಹಗಳ ಮೆರೆವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಿದರು. ಪ್ರಮುಖರಾದ ಎ.ರಾಮು, ಸಂತೋಷರೆಡ್ಡಿ, ಗೋವಿಂದರೆಡ್ಡಿ, ಉದಯಕುಮಾರ, ಸತೀಶ, ಭೀಮೇಶ ಸಾಗರ, ರಾಜೇಶ, ಭೀಮೇಶ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net