ಗ್ರಾಮಾಯಣ : ಯಾರು ಹೆಚ್ಚು ಹಣ ಕೊಡ್ತೀರೋ ಹೇಳಿ ಅವರಿಗೆ ಮತ ಚಲಾಯಿಸುವೆ!

Narase gowda Gubbi
Published on

ತುಮಕೂರು: ಚುನಾವಣೆ ಅಂದರೆ ಹಣ, ಹೆಂಡ, ಆಮಿಷಗಳ ಸುರಿಮಳೆ ಎಂಬ ಭಾವನೆ ಮೊದಲಿಂದಲೂ ಇದ್ದು, ಈ ಬಾರಿಯೂ ಮುಂದುವರಿದಿದೆ. ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳಷ್ಟೇ ಅಲ್ಲ, ಮತದಾರರೂ ಗಮನಸೆಳೆಯುತ್ತಿದ್ದಾರೆ. ಗುಬ್ಬಿ ತಾಲೂಕಿನ ನಿಟ್ಟೂರು ಮತಗಟ್ಟೆಯಲ್ಲಿದ್ದ ಒಬ್ಬರ ಮತದಾರ ಗಮನ ಸೆಳೆದ ಬಗೆ ಇದು.

ಮತದಾರನ ಹೆಸರು ನರಸೇಗೌಡ. ವೃತ್ತಿಯಲ್ಲಿ ಟ್ರ್ಯಾಕ್ಟರ್ ಚಾಲಕ. ಸದ್ಯ ಕೆಲಸ ಇಲ್ಲ. ಮದ್ಯವ್ಯಸನಿ. ಓಡಾಟ ಕಷ್ಟ. ಹೀಗಾಗಿ ಮತಗಟ್ಟೆ ಸಮೀಪ ಬಂದು ಕುಳಿತು, 'ನಂಗೆ ಯಾರು ಹೆಚ್ಚು ಹಣ ಕೊಡ್ತೀರಿ? ಅಧಿಕ ಹಣ ಕೊಟ್ಟವರಿಗೆ ಮತ ಚಲಾಯಿಸುವೆ' ಎಂದು ಬಹಿರಂಗವಾಗಿ ಕೂಗಿ ಹೇಳುತ್ತಿದ್ದುದು ಕಂಡುಬಂತು.

ಕುಡುಕನಾದ ಕಾರಣ ನರಸೇಗೌಡರ ಮಾತನ್ನು ಯಾರೂ ಗಂಭೀರವಾಗಿ ತೆಗೆದುಕೊಂಡಂತೆ ಕಾಣಲಿಲ್ಲ. ಆದರೆ, ಮತ ಮಾರಾಟದ ವಸ್ತುಸ್ಥಿತಿಗೆ ಹಿಡಿದ ಕೈಗನ್ನಡಿಯಂತೆ ಇತ್ತು ಅವರ ಮಾತು ಮತ್ತು ನಡವಳಿಕೆ.

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net