More

    ಶ್ರೀನಗರದಲ್ಲೂ ಅರಳಿತು ಕಮಲ! ಜಿಲ್ಲಾ ಅಭಿವೃದ್ಧಿ ಮಂಡಳಿ ಚುನಾವಣೆಯಲ್ಲಿ ಮೊದಲ ಜಯ ದಾಖಲಿಸಿದ ಬಿಜೆಪಿ!

    ಶ್ರೀನಗರ: ಜಮ್ಮು ಕಾಶ್ಮೀರದ ಜಿಲ್ಲಾ ಅಭಿವೃದ್ಧಿ ಮಂಡಳಿ (ಡಿಡಿಸಿ) ಸ್ಥಾನಗಳಿಗೆ ನಡೆದ ಚುನಾವಣೆಯ ಮತ ಎಣಿಕೆ ಇಂದು ನಡೆಯುತ್ತಿದ್ದು, ಅಲ್ಲಿಯೂ ಕೂಡ ಬಿಜೆಪಿ ತನ್ನ ಪ್ರಾಬಲ್ಯವನ್ನು ತೋರಿಸಿದೆ. ಶ್ರೀನಗರದ ಬಲ್ಹಾಮಾ ಪ್ರದೇಶದ ಖೊನ್‌ಮೋಹ್- II ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಐಜಾಜ್ ಹುಸೇನ್ ಜಯಗಳಿಸಿದ್ದು, ಈ ಪ್ರದೇಶದಲ್ಲಿ ಮೊದಲನೇ ಕಮಲ ಅರಳಿದಂತಾಗಿದೆ.

    ಇದನ್ನೂ ಓದಿ: ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ… 30 ಗಂಟೆಯ ‘ಪವಾಡ’: ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!

    ಮಾಜಿ ಕೇಂದ್ರ ಸಚಿವ ಸೈಯದ್​ ಶಾಹನವಾಜ್ ಹುಸೇನ್ ಶ್ರೀನಗರದಲ್ಲಿ ಬಿಜೆಪಿಯ ವಿಜಯವನ್ನು ದೃಢ ಪಡಿಸಿದ್ದಾರೆ. “ಮೊದಲ ಕಮಲ ಕಾಶ್ಮೀರದಲ್ಲಿ ಅರಳಿದೆ! ಐಜಾಜ್ ಹುಸೇನ್ ಅವರು ಕಾಶ್ಮೀರದ ಶ್ರೀನಗರದ ಖನ್ಮೋಹ್ II ಕ್ಷೇತ್ರದಿಂದ ಉತ್ತಮ ಅಂತರದಲ್ಲಿ ಗೆದ್ದಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ. ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಐಜಾಜ್ ಹುಸೇನ್ ಅವರಿಗೆ ಅಭಿನಂದಿಸಿ ಟ್ವೀಟ್​ ಮಾಡಿದ್ದಾರೆ.

    ಡಿಡಿಸಿ ಚುನಾವಣೆಗೆ ಮತ ಎಣಿಕೆ ಪ್ರಾರಂಭವಾಗುವ ಒಂದು ದಿನ ಮೊದಲು ಟ್ವೀಟ್​ ಮಾಡಿದ್ದ ಐಜಾಜ್ ಹುಸೇನ್ ಅವರು, “ಕಾಶ್ಮೀರದಲ್ಲಿ ಕಮಲವು ಅರಳಲಿದೆ. ಕಾಶ್ಮೀರವು ಇತರ ಪಕ್ಷಗಳ ಕೋಮು ರಾಜಕೀಯದಿಂದ ದೂರ ಹೋಗಲಿದೆ. ಈ ನನ್ನ ಟ್ವೀಟ್​ನ್ನು ಸೇವ್​ ಮಾಡಿಕೊಳ್ಳಿ ಮತ್ತು ನಾಳೆ ಬೆಳಗ್ಗೆ 11 ಗಂಟೆಗೆ ತೆರೆದು ನೋಡಿ” ಎಂದು ಟ್ವೀಟ್​ ಮೂಲಕ ತಮ್ಮ ಗೆಲುವಿನ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದರು.

    ಇದನ್ನೂ ಓದಿ: ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

    ಡಿಡಿಸಿಯಲ್ಲಿ 280 ಸ್ಥಾನಗಳಿಗೆ ಚುನಾವಣೆ ನಡೆದಿದೆ. ಮಂಗಳವಾರ ಮಧ್ಯಾಹ್ನ ಎರಡು ಗಂಟೆವರೆಗೆ ಬಂದಿರುವ ಫಲಿತಾಂಶದ ಪ್ರಕಾರ, ಪೀಪಲ್ಸ್ ಅಲೈಯನ್ಸ್ ಫಾರ್ ಗುಪ್ಕರ್ ಡಿಕ್ಲರೇಶನ್ (ಪಿಎಜಿಡಿ) ಮುಂಚೂಣಿಯಲ್ಲಿದ್ದು, ಬಿಜೆಪಿ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಕಾಂಗ್ರೆಸ್​ ಮೂರನೇ ಸ್ಥಾನದಲ್ಲಿದೆ. (ಏಜೆನ್ಸೀಸ್​)

    ವಿವಾಹಿತ ಮಹಿಳೆಯನ್ನು ರೇಪ್​ ಮಾಡಿ ಎರಡೆರೆಡು ಬಾರಿ ಮಾರಾಟ ಮಾಡಿದ ಪಾಪಿಗಳು; ಬಚಾವಾಗಿದ್ದೇ ಆಶ್ಚರ್ಯ

    ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts