ಗ್ರಾಪಂ ಮುಂದೆ ಪುತ್ರನೊಂದಿಗೆ ಮಹಿಳೆ ಧರಣಿ

24-june-hdl--02
ಹೂವಿನಹಡಗಲಿ ತಾಲೂಕಿನ ಹಿರೇಹಡಗಲಿ ಗ್ರಾಪಂ ಮುಂದೆ ಗ್ರಾಮದ ದೇವಕ್ಕ ಪುತ್ರ ರಮೇಶನೊಂದಿಗೆ ಸಾಮಾನು ಸರಂಜಾಮುಗಳನ್ನಿಟ್ಟುಕೊಂಡು ಪ್ರತಿಭಟನೆ ನಡೆಸಿದರು.
Published on

ಹೂವಿನಹಡಗಲಿ: ನಮಗೆ ವಸತಿ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಹಿರೇಹಡಗಲಿ ಗ್ರಾಪಂ ಕಾರ್ಯಾಲಯದ ಮುಂದೆ ಗ್ರಾಮದ ದೇವಕ್ಕ ಮಗ ರಮೇಶನೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಒಂದನೇ ವಾರ್ಡಿನಲ್ಲಿ ಗುಡಿಸಲು ಹಾಕಿಕೊಂಡು ವಾಸಿಸುತ್ತಿದ್ದೆವು, ನಂತರ ಆಸ್ಪತ್ರೆ ಹಿಂದೆ ವಾಸವಾಗಿದ್ದು, ಅಲ್ಲಿಂದ ಗ್ರಾಮ ಠಾಣಾ ವ್ಯಾಪ್ತಿಯಲ್ಲಿ ಗುಡಿಸಲು ಹಾಕಿಕೊಂಡು ವಾಸವಾಗಿದ್ದೆವು. ಸರ್ಕಾರಿ ಸ್ಥಳದಲ್ಲಿ ಗುಡಿಸಲು ಹಾಕಿಕೊಂಡರೆ ಅದಕ್ಕೆ ಅವಕಾಶ ನೀಡದೆ ಕೆಲವರು ದಬ್ಬಾಳಿಕೆ ಮಾಡುತ್ತಿದ್ದಾರೆ.

ವಾಸ ಮಾಡಲು ಸ್ಥಳವಿಲ್ಲದೆ ನಾನು ಮತ್ತು ನನ್ನ ಮಕ್ಕಳು ಬೀದಿಗೆ ಬಂದಿದ್ದೇವೆ. ನಮಗೆ ವಾಸಕ್ಕೆ ಸ್ಥಳ ನೀಡುವವರೆಗೆ ಧರಣಿ ನಡೆಸುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net