ಗ್ರಾಮ ಪಂಚಾಯಿತಿ ಚುನಾವಣಾ ವೇಳಾ ಪಟ್ಟಿ ಪ್ರಕಟ  ಡಿಸೆಂಬರ್ 8ಕ್ಕೆ ಮತದಾನ

Election symbol
Published on

ಯಾದಗಿರಿ :  ರಾಜ್ಯ ಚುನಾವಣಾ ಆಯೋಗವು 2023ರ-ಡಿಸೆಂಬರ್ ಮಾಹೆಯಿಂದ 2025ರ ಜನವರಿ ಮಾಹೆಯವರೆಗೆ ಅವಧಿ ಮುಕ್ತಾಯವಾಗಲಿರುವ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ರಾಜ್ಯ ಚುನಾವಣಾ ಆಯೋಗವು ಚುನಾವಣಾ ವೇಳಾಪಟ್ಟಿಯನ್ನು ಪ್ರಕಟಿಸಿರುತ್ತದೆ. ಅದರಂತೆ ಯಾದಗಿರಿ ಜಿಲ್ಲೆಯಲ್ಲಿ ಶೋರಾಪುರ ತಾಲ್ಲೂಕಿನಲ್ಲಿ 17-ಕರಡಕಲ್ ಮತ್ತು 18-ಕಿರದಳ್ಳಿ ಗ್ರಾಮ ಪಂಚಾಯತಿಗಳಿಗೆ 21 ಸದಸ್ಯ ಸ್ಥಾನಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸಲು ಈ ಕೆಳಗಿನಂತೆ ವೇಳಾಪಟ್ಟಿ ನಿಗದಿಪಡಿಸಿದೆ ಎಂದು ಯಾದಗಿರಿ ಜಿಲ್ಲಾ ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿ ಡಾ.ಸುಶೀಲಾ.ಬಿ ಅವರು ತಿಳಿಸಿದ್ದಾರೆ

ಗ್ರಾಮ ಪಂಚಾಯತಿಗಳಲ್ಲಿ ಚುನಾವಣೆ ನಡೆಯುವ ಕ್ಷೇತ್ರದ ವ್ಯಾಪ್ತಿಯಲ್ಲಿ ಚುನಾವಣಾ ನೀತಿ ಸಂಹಿತೆಯು 2024ರ ನವೆಂಬರ್ 21 ರಿಂದ 2024ರ ಡಿಸೆಂಬರ್ 11ರ ವರೆಗೆ ಜಾರಿಯಲ್ಲಿರುತ್ತದೆ.

ಚುನಾವಣಾ ವೇಳಾ ಪಟ್ಟಿ ಪ್ರಕಟ ಜಿಲ್ಲಾಧಿಕಾರಿಗಳು ಚುನಾವಣಾ ಅಧಿಸೂಚನೆಯನ್ನು ಹೊರಡಿಸಿದ್ದು, 2024ರ ನವೆಂಬರ್ 21ರ ಗುರುವಾರ ರಿಂದ 27ರ ಬುಧವಾರ ವರೆಗೆ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಬಹುದಾಗಿದೆ. 2024ರ ನವೆಂಬರ್ 28ರ ಗುರುವಾರ ರಂದು ನಾಮಪತ್ರಗಳ ಪರಿಶೀಲನಾ ಕಾರ್ಯ ನಡೆಯಲಿದೆ. ಅಂದೇ ಕ್ರಮಬದ್ಧ ಅರ್ಹ ಅಭ್ಯರ್ಥಿಗಳ ಪ್ರಕಟಣೆ ಹೊರಡಿಸಲಾಗುತ್ತದೆ. ಉಮೇದುವಾರಿಕೆ  ಹಿಂಪಡೆಯಲು 2024ರ ನವೆಂಬರ್ 30ರ ಶನಿವಾರ ವರೆಗೆ ಅವಕಾಶವಿರುತ್ತದೆ.

ಚುನಾವಣೆಯ ಮತದಾನವು 2024ರ ಡಿಸೆಂಬರ್ 8ರ ಭಾನುವಾರ ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯ ವರೆಗೆ ಮತದಾನ ನಡೆಯಲಿದೆ. ಮರು ಮತದಾನದ ಅವಶ್ಯವಿದ್ದರೆ, ಮತದಾನವನ್ನು ನಡೆಸಬೇಕಾದ 2024ರ ಡಿಸೆಂಬರ್ 10ರ ಮಂಗಳವಾರ ರಂದು ಬೆಳಿಗ್ಗೆ 7 ರಿಂದ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ. ಮತಗಳ ಎಣಿಕೆ 2024ರ ಡಿಸೆಂಬರ್ 11ರ ಬುಧವಾರ ರಂದು ಬೆಳಿಗ್ಗೆ 8 ಗಂಟೆಯಿAದ ತಾಲ್ಲೂಕು ಕೇಂದ್ರಗಳಲ್ಲಿ ನಡೆಯಲಿದೆ. ಅಂದೇ ಫಲಿತಾಂಶ ಘೋಷಿಸಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net