ಗ್ರಾಮದೇವಿ ಜಾತ್ರಾ ಮಹೋತ್ಸವ ಇಂದಿನಿಂದ

22nsg1 gramdevi
Published on

ಡಾ.ಮರಿಗೌಡ ಚೋಬಾರಿ ನೇಸರಗಿ

ಸಮೀಪದ ವಣ್ಣೂರ ಗ್ರಾಮದಲ್ಲಿ 11 ವರ್ಷಗಳ ಬಳಿಕ ಮೇ 23 ರಿಂದ 31ರ ವರೆಗೆ ಹಣಬರಹಟ್ಟಿಯ ಬಸವಲಿಂಗ ಶಿವಾಚಾರ್ಯ ಪಟ್ಟದೇವರ ಸಾನ್ನಿಧ್ಯದಲ್ಲಿ ಶ್ರೀ ಗ್ರಾಮದೇವಿ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಲಿದೆ.

ಮೇ 23 ರಂದು ಬೆಳಗ್ಗೆ 8 ಗಂಟೆಗೆ ಸುಮಂಗಲೆಯರ ಕುಂಭ ಹಾಗೂ ಆರತಿಯೊಂದಿಗೆ ಶ್ರೀಗಳ ಪುರಪ್ರವೇಶ, ಹೋಮ, ಹವನ ಹಾಗೂ ಗ್ರಾಮದ ದೈವದ ವತಿಯಿಂದ ದೇವಿಯರಿಗೆ ಉಡಿ ತುಂಬುವ ಕಾರ್ಯ ಜರುಗಲಿದೆ.

ಮುರಗೋಡ ದುರದುಂಡೀಶ್ವರ ಮಠದ ನೀಲಕಂಠ ಸ್ವಾಮೀಜಿ, ಗಾಳೇಶ್ವರ ಮಠದ ಚಿದಾನಂದ ಸ್ವಾಮೀಜಿ, ಸಂಗೊಳ್ಳಿಯ ಗುರುಲಿಂಗ ಶಿವಾಚಾರ್ಯರು, ತಾರಿಹಾಳದ ಅಡವೀಶ ದೇವರು, ಸುತಗಟ್ಟಿಯ ಸಿದ್ಧಲಿಂಗ ಶಿವಾಚಾರ್ಯರ ಪ್ರವಚನ ನಡೆಯಲಿದೆ. ರಾತ್ರಿ 10 ಗಂಟೆಗೆ ಗ್ರಾಮದ ರೇಣುಕಾದೇವಿ ನಾಟ್ಯ ಸಂದಿಂದ "ಬಡವನ ಒಡಲು ಬೆಂಕಿಯ ಸಿಡಿಲು' ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 24 ರಂದು ಬಾಬದವರಿಂದ ಉಡಿ ತುಂಬುವುದು, ಸಂಜೆ 5 ಗಂಟೆಗೆ ಗ್ರಾಮದೇವಿಯರ ಮಹಾರಥೋತ್ಸವ ಜರುಗಲಿದೆ. ರಾತ್ರಿ 10 ಗಂಟೆಗೆ "ಸಂಗ್ಯಾ&ಬಾಳ್ಯಾ' ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 25 ರಂದು ಗ್ರಾಮದ ಭಕ್ತರಿಂದ ಉಡಿ ತುಂಬುವುದು, ರಾತ್ರಿ 10 ಗಂಟೆಗೆ ರಾಜಧಾನಿಗೆ ಕಾಲಿಟ್ಟಿ ರೈತ ನಾಟಕ ಪ್ರದರ್ಶನಗೊಳ್ಳಲಿದೆ. ಮೇ 26 ರಂದು ಬೆಳಗ್ಗೆ 7 ಗಂಟೆಗೆ ಭಕ್ತರಿಂದ ಉಡಿ ತುಂಬುವುದು. ಸಂಜೆ 4 ಗಂಟೆಗೆ ಜಂಗೀ ಕುಸ್ತಿ ಹಮ್ಮಿಕೊಳ್ಳಲಾಗಿದೆ. ಮೇ 27 ರಂದು ಭಕ್ತರಿಂದ ಉಡಿ ತುಂಬುವುದು ಹಾಗೂ ಜಂಗೀ ಕುಸ್ತಿ ನಡೆಯಲಿವೆ.

ಮೇ 28 ಭಕ್ತರಿಂದ ಉಡಿ ತುಂಬುವುದು, ಜಂಗೀ ಕುಸ್ತಿ, ರಾತ್ರಿ 10 ಗಂಟೆಗೆ ಸಾವಿರ ಹಳ್ಳಿಯ ಸರದಾರ ನಾಟಕ ಜರುಗಲಿದೆ. ಮೇ 29 ರಂದು ಪೂಜಾ ಕಾರ್ಯಕ್ರಮ, ಮಾಸ್ತಮರ್ಡಿ ಹಾಗೂ ಸುಣಕುಂಪಿ ಗ್ರಾಮದ ಭಕ್ತರಿಂದ ಉಡಿ ತುಂಬುವ ಕಾರ್ಯ ಜರುಗಲಿದೆ. ರಾತ್ರಿ 10 ಗಂಟೆಗೆ ಹುತ್ತದಲ್ಲಿ ಕೈ ಇಟ್ಟ ಮುತೆದೆ ನಾಟಕ ಪ್ರದರ್ಶನಗೊಳ್ಳಲಿದೆ.

ಮೇ 30 ರಂದು ಪೂಜಾ ಕಾರ್ಯಕ್ರಮ, ಸಂಜೆ 5 ಗಂಟೆಗೆ ಕೊನೆಯ ರಥೋತ್ಸವ ಜರುಗಲಿದೆ. ಮೇ 31ರಂದು ಗ್ರಾಮದೇವಿಯರ ಗದ್ದುಗೆಗೊಳಿಸುವುದು. ಸ್ಥಳಿಯ ಬಸವೇಶ್ವರ ದೇವಸ್ಥಾನದಲ್ಲಿ ಪ್ರತಿದಿನ ಮಹಾಪ್ರಸಾದ ಜರುಗಲಿದೆ ಎಂದು ಜಾತ್ರಾ ಮಹೋತ್ಸವ ಕಮಿಟಿ ಪ್ರಕಟಣೆಯಲ್ಲಿ ತಿಳಿಸಿದೆ.

> ಪರಸ್ಪರ ಸಹೋದರತ್ವದ ಮನೋಭಾವದಿಂದ ಗ್ರಾಮದಲ್ಲಿ 9 ದಿನ ಗ್ರಾಮದೇವಿಯರ ಜಾತ್ರೆ ಸಂಭ್ರಮದಿಂದ ನೆರವೇರಲಿದೆ. ಜಾತ್ರೋತ್ಸವ ಸಿದ್ಧತೆ ಪೂರ್ಣಗೊಂಡಿದೆ. ಭಕ್ತರಿಗೆ ಕುಡಿಯುವ ನೀರು, ಪ್ರಸಾದ ಸೇರಿ ಅಗತ್ಯ ವ್ಯವಸ್ಥೆ ಕಲ್ಪಿಸಲಾಗಿದೆ.

> ಬಾಳಾಸಾಹೇಬ ದೇಸಾಯಿ ಜಾತ್ರಾ ಕಮಿಟಿ ಅಧ್ಯರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net