ನಿಮ್ಮ ಗ್ರಾಪಂ ಅಧ್ಯಕ್ಷರ ಆಯ್ಕೆಯೆಂದು..? ಇಲ್ಲಿದೆ ಮಾಹಿತಿ

Gram-Panchayat-office
Published on

ಕಾರವಾರ: ಉಪವಿಭಾಗದ ವ್ಯಾಪ್ತಿಯ ನಾಲ್ಕು ತಾಲೂಕುಗಳ ಗ್ರಾಪಂಗಳ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆಗೆ ದಿನಾಂಕ ನಿಗದಿ ಮಾಡಿ, ಚುನಾವಣಾಧಿಕಾರಿಗಳನ್ನು ನೇಮಕ ಮಾಡಿ ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ ಆದೇಶ ಹೊರಡಿಸಿದ್ದಾರೆ.

ಜೊಯಿಡಾ ತಾಲೂಕಿನ ಅಸು ಗ್ರಾಪಂನಲ್ಲಿ ಆ.7 ರಂದು, ಹಳಿಯಾಳ ತಾಲೂಕಿನ ತೆರಗಾಂವ, ಅರ್ಲವಾಡ, ಹವಗಿ, ಭುಜರ ಕಂಚನಳ್ಳಿ, ತತ್ವಣಗಿ, ಜನಗಾ, ಚಿಬ್ಬಲಗೇರಿ, ಸಾಂಬ್ರಾಣಿ, ತಟ್ಟಿಗೇರಿ, ಮೊದಲಗೇರ, ಜೊಯಿಡಾ ತಾಲೂಕಿನ ಅಖೇತಿ, ಬಾಜಾರಕುಣಂಗ, ನಂದಿಗದ್ದೆ ಗ್ರಾಮಗಳಲ್ಲಿ ಆ.8 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ.
ಕಾರವಾರ ತಾಲೂಕಿನ ಮಾಜಾಳಿ, ಅಸ್ನೋಟಿ, ಹಣಕೋಣ, ಗೋಟೆಗಾಳಿ, ಮಲ್ಲಾಪುರ, ದೇವಳಮಕ್ಕಿ, ಕಿನ್ನರ, ಶಿರವಾಡ ಅಮದಳ್ಳಿ, ಜೊಯಿಡಾ ತಾಲೂಕಿನ ಕ್ಯಾಸಲ್‌ರಾಕ್, ಅವೇಡಾ, ರಾಮನಗರ, ಶಿರಗಾಂವ, ಉಳವಿ, ಕುಂಬಾರವಾಡ, ಗಾಂಗೋಡ, ಪ್ರಧಾನಿ, ದಾಂಡೇಲಿಯ ಬಡಾಖಾಶಿರಡ, ಆಲೂರು ಗ್ರಾಪಂಗಳಲ್ಲಿ ಆಗಸ್ಟ್ 9 ರಂದು ಆಯ್ಕೆ ನಡೆಯಲಿದೆ.

ಇದನ್ನೂ ಓದಿ:ಎರಡು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮದುವೆ ತಪ್ಪಿಸಿದ ಗ್ರಾಮಸ್ಥರು
ಹಳಿಯಾಳದ ಮದನಳ್ಳಿ, ಮಂಗಳವಾಡ, ನಾಗಶೆಟ್ಟಿಕೊಪ್ಪ, ಮುರ್ಕವಾಡ, ಬೆಳವಟಗಿ, ಕಾವಲವಾಡ, ಗುಂಡೊಳ್ಳಿ, ಭಾಗವತಿ, ಯಡೋಗಾ, ಕೆಸರೋಳ್ಳಿ, ಜೊಯಿಡಾ ತಾಲೂಕಿನ ಜೊಯಿಡಾ ಗ್ರಾಪಂಗಳಲ್ಲಿ ಆ.10 ರಂದು, ಕಾರವಾರದ ಚಿತ್ತಾಕುಲಾ, ಮುಡಗೇರಿ, ಘಾಡಸಾಯಿ, ಕದ್ರಾ, ಕೆರವಡಿ, ವೈಲವಾಡ, ಕಡವಾಡ, ಚೆಂಡಿಯಾ, ತೋಡೂರು, ದಾಂಡೇಲಿಯ ಅಂಬೆವಾಡಿ, ಅಂಬಿಕಾನಗರ, ಜೊಯಿಡಾದ ಜಗಲಬೇಟ, ಅಣಶಿ, ನಾಗೋಡ, ಆ.11 ರಂದು ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net