ಬನ್ನಿಕುಪ್ಪೆ ಗ್ರಾಮಾಂತರ ಪ್ರೌಢಶಾಲೆಗೆ ಜಿಪಂ ಸಿಇಒ ಭೇಟಿ

FotoJet (1)
Published on

ಕೈಲಾಂಚ: ಹೋಬಳಿಯ ಬನ್ನಿಕುಪ್ಪೆ ಕೆಂಗಲ್ ಆಂಜನೇಯ ಗ್ರಾಮಾಂತರ ಪ್ರೌಢಶಾಲೆಗೆ ಬುಧವಾರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಹಣಾಧಿಕಾರಿ ಅನ್ಮೋಲ್ ಜೈನ್ ಭೇಟಿ ನೀಡಿ ಮಕ್ಕಳ ಸಂಖ್ಯೆ, ಎಸ್‌ಎಸ್‌ಎಲ್‌ಸಿ ಫಲಿತಾಂಶ, ಶಾಲಾ ಚಟುವಟಿಕೆ ಬಗ್ಗೆ ಶಿಕ್ಷಕರಲ್ಲಿ ಮಾಹಿತಿ ಪಡೆದರು. ಶಿಕ್ಷಕರಿಗೆ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ಕಲ್ಪಿಸಿ ಹೆಚ್ಚಿನ ಫಲಿತಾಂಸದ ಕಡೆ ಲಕ್ಷ್ಯ ನೀಡುವಂತೆ ಹಾಗೂ ಮಕ್ಕಳಿಗೂ ಶಿಕ್ಷಣದ ಬಗ್ಗೆ ಒತ್ತು ನೀಡುವಂತೆ ತಿಳಿಸಿದರು. 10ನೇ ತರಗತಿ ವಿದ್ಯಾರ್ಥಿಗಳಿಗೆ ಪ್ರಶ್ನೆ ಕೇಳಿ ಗಣಿತ ಪಾಠ ಮಾಡಿದರು. ವಿದ್ಯಾಸಂಸ್ಥೆ ಅಧ್ಯಕ್ಷ ಕೆ.ಶಿವಲಿಂಗಯ್ಯ, ಮುಖ್ಯಶಿಕ್ಷಕ ಶ್ರೀನಿವಾಸ್, ಶಿಕ್ಷಕರಾದ ಹೆಚ್.ಡಿ.ಶಿವಕುಮಾರ್, ಎಸ್.ನರಸಿಂಹಮೂರ್ತಿ, ಎಸ್.ಪಿ. ಅಪ್ಪಾಜಿಗೌಡ, ಕೆ.ಎನ್.ಸತೀಶ್, ಸಂಜೀವಯ್ಯ, ಎ.ಸಿ. ಮಹದೇವಪ್ಪ, ಜೆ.ಶೃತಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net