9 ರಲ್ಲಿ 6 ಗ್ರಾಪಂಗೆ ಬಿಜೆಪಿ ಬೆಂಬಲಿತರು ಆಯ್ಕೆ

GP President
Published on

ಕಾರವಾರ: ತಾಲೂಕಿನ 18 ರಲ್ಲಿ 9 ಗ್ರಾಪಂಗಳಿಗೆ ಎರಡನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಬುಧವಾರ ನಡೆಯಿತು. ಅದರಲ್ಲಿ 6 ಗ್ರಾಪಂಗಳಿಗೆ ಬಿಜೆಪಿ ಬೆಂಬಲಿತರು ಆಯ್ಕೆಯಾಗಿದ್ದಾರೆ.

ಅಸ್ನೋಟಿ-ಸಂಜಯ ಸಾಳುಂಕೆ(ಅದ್ಯಕ್ಷ), ಅಶ್ವಿನಿ ಮಾಳ್ಸೇಕರ್(ಉಪಾಧ್ಯಕ್ಷೆ), ಹಣಕೋಣ-ಶಾಂತಾರಾಮ ತಾಮ್ಸೆ, ಅನಿತಾ, ಗೋಟೆಗಾಳಿ-ವರ್ಷಾ ಪಡುವಳಕರ್, ಪ್ರಶಾಂತ ಗಾಂವಕರ್, ದೇವಳಮಕ್ಕಿ-ಸಂತೋಷ ಗೌಡ, ಕೋಮಲ ದೇಸಾಯಿ, ಮಾಜಾಳಿ-ಮಂಗಲಾ ಕೊಠಾರಕರ್, ವಿನಯಾ ಭಟ್ಟ, ಶಿರವಾಡ-ಅಶ್ವಿನಿ ನಾಯ್ಕ, ದಿಲೀಪ ನಾಯ್ಕ ಇವರೆಲ್ಲರೂ ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. ಅಮದಳ್ಳಿ ಗ್ರಾಪಂನಲ್ಲಿ ಕಾಂಗ್ರೆಸ್‌ ಬೆಂಬಲಿತ -ಪುರುಷೋತ್ತಮ ಗೌಡ ಅಧ್ಯಕ್ಷರಾಗಿದ್ದಾರೆ. ಉಪಾಧ್ಯಕ್ಷರ ಆಯ್ಕೆಗೆ ಸರಿಯಾದ ಮತಗಳು ಬಿದ್ದಿದ್ದವು. ನಂತರ ಚೀಟಿ ಆರಿಸುವ ಮೂಲಕ ಬಿಜೆಪಿಯ ಕಲಾವತಿ ದುರ್ಗೇಕರ್‌ ಅವರನ್ನು ಆಯ್ಕೆ ಮಾಡಲಾಯಿತು. ಮಲ್ಲಾಪುರ ಗ್ರಾಪಂ ಅಧ್ಯಕ್ಷರಾಗಿ ಉದಯ ಬಾಂದೇಕರ್, ಪಿಯಾದಾದ ಇಗ್ನೇಸ್‌ ಡಿಸೋಜಾ ಆಯ್ಕೆಯಾಗಿದ್ದಾರೆ. ಕಿನ್ನರ ಗ್ರಾಪಂನಲ್ಲಿ ಪ್ರಕಾಶ ಗುನಗಿ, ಚಂದ್ರಕಲಾ ಸೂರ್ಯೋದಯ ಕೊಠಾರಕರ್ ಆಯ್ಕೆಯಾಗಿದ್ದು, ಅವರು ಯಾವುದೇ ಪಕ್ಷದಡಿ ತಾವು ಗುರುತಿಸಿಕೊಂಡಿಲ್ಲ ಎಂದಿದ್ದಾರೆ.

ಸಂಭ್ರಮಾಚರಣೆ:

ಕಾರವಾರ ಗ್ರಾಪಂಗಳಲ್ಲಿ ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರೇ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾದ ಹಿನ್ನೆಲೆಯಲ್ಲಿ ಬಿಜೆಪಿ ಸಂಭ್ರಮಚಾರಣೆ ನಡೆಸಿತು. ಆಯ್ಕೆಯಾದ ಎಲ್ಲ ಬಿಜೆಪಿ ಬೆಂಬಲಿತ ಅಧ್ಯಕ್ಷ, ಉಪಾಧ್ಯಕ್ಷರನ್ನು ಮಾಜಿ ಶಾಸಕಿ ರೂಪಾಲಿ ನಾಯ್ಕ ಹಾರ ಹಾಕಿ ಅಭಿನಂದಿಸಿದರು. ಬಿಜೆಪಿ ಗ್ರಾಮೀಣ ಘಟಕದ ಅಧ್ಯಕ್ಷ ಸುಭಾಷ ಗುನಗಿ ಇದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ರೂಪಾಲಿ ನಾಯ್ಕ, "ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದ್ದಾಗಲೂ ತಾಲೂಕಿನ ಜನಪ್ರತಿನಿಽಗಳು ಬಿಜೆಪಿಯ ಬಗ್ಗೆ ಒಲವು ತೋರಿರುವುದು ಹೆಮ್ಮೆಯ ವಿಚಾರ ಎಂದರು. ಮೊದಲ ಎರಡು ತಿಂಗಳ ಕಾಂಗ್ರೆಸ್ ಆಡಳಿತ ನೋಡಿ ಜನ ದಿಗ್‌ಬ್ರಾಂತರಾಗಿದ್ದಾರೆ. ಉಚಿತ ಗ್ಯಾರಂಟಿ ಕೊಡುವ ಹರಿಬರಿಯಲ್ಲಿ ಇನ್ನೊಂದೆಡೆ ವಿವಿಧ ವಸ್ತುಗಳ ಬೆಲೆ, ತೆರಿಗೆ ಏರಿಸಿ ವಸೂಲಿ ಮಾಡುತ್ತಿದ್ದಾರೆ ಎಂದು ದೂರಿದರು. ನೂತನ ವಾಗಿ ಆಯ್ಕೆಯಾದ ಅಧ್ಯಕ್ಷ, ಉಪಾಧ್ಯಕ್ಷರು ನಿರಂತರ ಜನರ ಸಂಪರ್ಕ ಇಟ್ಟುಕೊಂಡು ಅವರ ಸಂಕಷ್ಟಗಳಿಗೆ ಸ್ಪಂದಿಸಬೇಕು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net