ಗ್ರಾಪಂ ಸದಸ್ಯೆ ಕಿಡ್ನ್ಯಾಪ್ ಗೆ ಯತ್ನ ಶಾಸಕರ ಪುತ್ರನ ಬಂಧನಕ್ಕೆ ರೇವೂರ ಆಗ್ರಹ

IMG-20230803-WA0079
Published on


ಕಿಡ್ನಾಪ್ ಕೇಸ್ ಮುಚ್ಚಿ ಹಾಕಲು ಹುನ್ನಾರ ದತ್ತಾತ್ರೇಯ ಪಾಟೀಲ್ ಆರೋಪ
ವಿಜಯವಾಣಿ ಸುದ್ದಿಜಾಲ ಕಲಬುರಗಿ
ತಾಲೂಕಿನ ಸಾವಳಗಿ ಗ್ರಾಪಂ ವ್ಯಾಪ್ತಿಯ ಸಿಂದಗಿ (ಬಿ) ಗ್ರಾಮದಲ್ಲಿ ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯೆ  ನಾಗಮ್ಮ ಅವರ ಮೇಲೆ ಹಲ್ಲೆ ಮಾಡಿ ಕಿಡ್ನಾಪ್ ಮಾಡಲು ಯತ್ನಿಸಿದ ಘಟನೆಯು ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕರ ಕುಮ್ಮಕ್ಕಿನಿಂದಲೇ ನಡೆದಿದೆ. ಅದರಲ್ಲಿ ಅವರ ಪುತ್ರ ಸಹ ಶಾಮೀಲಾಗಿದ್ದು, ಕೂಡಲೇ ಬಂಧಿಸಬೇಕು ಎಂದು ಕೆಕೆಆರ್‌ಡಿಬಿ ಮಾಜಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಆಗ್ರಹಿಸಿದರು.
ಮಹಾನಗರ ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಜತೆಗೂಡಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಈ ಕೇಸ್‌ನ್ನು ಮುಚ್ಚಿ ಹಾಕಲು ಶಾಸಕ ಅಲ್ಲಮಪ್ರಭು ಪಾಟೀಲ್‌ರು ಯತ್ನಿಸುತ್ತಿದ್ದಾರೆ. ಅಲ್ಲದೆ ಪೊಲೀಸರು  ಈ ವಿಷಯದಲ್ಲಿ ನಿರ್ಲಕ್ಷÈ ಮಾಡುತ್ತಿದ್ದಾರೆ.  ಗ್ರಾಪಂ ಸದಸ್ಯೆಯೊಬ್ಬರನ್ನು ಹೀಗೆ ಅಪಹರಿಸಿಕೊಂಡು ಹೋಗಲು ಯತ್ನಿಸಿದ ಘಟನೆ ಹಿಂದೆAದೂ ಕ್ಷೇತ್ರದಲ್ಲಿ ನಡೆದಿಲ್ಲ. ಕಲಬುರಗಿಯನ್ನು ಪಶ್ಚಿಮ ಬಂಗಾಳ, ಬಿಹಾರ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.
ಗ್ರಾಪಂ ಸದಸ್ಯರನ್ನು ಅಪಹರಿಸಿಕೊಂಡು ಹೋಗಲು ಪೊಲೀಸರ ಹೆಸರನ್ನು ಸಹ ದುರುಪಯೋಗ ಪಡಿಸಿಕೊಂಡಿದ್ದಾರೆ. ಪೊಲೀಸರು ಎಂದು ಹೇಳಿಕೊಂಡಿದ್ದಾರೆ. ಮಹಿಳೆಯ ಮೇಲೆ ಹಲ್ಲೆ ಮಾಡಿದ್ದರಿಂದ ಮಹಿಳಾ ಆಯೋಗಕ್ಕೂ ಸಹ ದೂರು ನೀಡುತ್ತೇವೆ. ಬಿಜೆಪಿ ಪಕ್ಷದ ವತಿಯಿಂದ  ಪೊಲೀಸ್ ಆಯುಕ್ತರಿಗೂ ಸಹ ದೂರು ನೀಡಿ, ಕೂಡಲೇ ಶಾಸಕರ ಪುತ್ರನನ್ನು ಹಾಗೂ ಉಳಿದ ಆರೋಪಿತರನ್ನು ಬಂಧಿಸುವAತೆ ಆಗ್ರಹಿಸಲಾಗುವುದು ಎಂದು ರೇವೂರ ತಿಳಿಸಿದರು.
ಸಾವಳಗಿ ಗ್ರಾಪಂದಲ್ಲಿ ಬಿಜೆಪಿ ಬೆಂಬಲಿತ ಹತ್ತು ಸದಸ್ಯರಿದ್ದರೆ, ಅವರ ಸಂಖ್ಯೆಯೂ ಅಷ್ಟೆ ಇರಬಹುದು. ಹೀಗಾಗಿ ಅಪಹರಣ ಮಾಡಿಕೊಂಡು ಹೋಗಿ ಅಧಿಕಾರಕ್ಕೆ ಬರಲು ಕಾಂಗ್ರೆಸ್‌ನವರು ಕುತಂತ್ರ ನಡೆಸಿದ್ದಾರೆ. ಸ್ವಾರ್ಥಕ್ಕಾಗಿ ಸಾಮಾಜಿಕ ಸ್ವಾಸ್ಥÈ ಕೆಡಿಸುವ ಕೆಲಸವನ್ನು ಕಾಂಗ್ರೆಸ್ ಕಾರ್ಯಕರ್ತರು ಮಾಡುತ್ತಿದ್ದಾರೆ  ಎಂದು  ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿAದಲೂ ಜಿಲ್ಲೆಯಲ್ಲಿ ಅಪರಾಧ ಕೃತ್ಯಗಳು ಹೆಚ್ಚಿಸಿವೆ. ಕೊಲೆ ಸುಲಿಗೆ ಜತೆಗೆ ಕ್ರಿಕೆಟ್ ಬೆಟ್ಟಿಂಗ್,ಮಟಕಾ, ಗಾಂಜಾ ಮಾರಾಟ ಇನ್ನಿತರ ಅಪರಾಧಿಕ ಕೃತ್ಯಗಳು ಎಗ್ಗಿಲ್ಲದೆ ನಡೆದಿವೆ.  ಪೊಲೀಸರು  ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಮಹಾನಗರ ಜಿಲ್ಲಾಧ್ಯಕ್ಷ ಸಿದ್ದಾಜಿ ಪಾಟೀಲ್ ಮಾತನಾಡಿ, ಚಾಕುವಿನಿಂದ ಇರಿದು ಗ್ರಾಪಂ ಸದಸ್ಯೆಗೆ ಗಾಯಗೊಳಿಸಲಾಗಿದೆ. ಇದೊಂದು ಹೇಯ ಕೃತ್ಯವಾಗಿದ್ದು, ಕೂಡಲೇ ಎಲ್ಲ ಆರೋಪಿತರನ್ನು ಬಂಧಿಸಬೇಕು ಎಂದು ಆಗ್ರಹಿಸಿದರು. ದಕ್ಷಿಣ ಕ್ಷೇತ್ರದ ಹೊರಗಿನವರನ್ನು ಬಳಸಿಕೊಂಡು ಈ ಕೃತ್ಯ ನಡೆಸಲಾಗಿದೆ ಎಂದು ದೂರಿದರು. ಸುದ್ದಿಗೋಷ್ಠಿಯಲ್ಲಿ ಮೇಯರ್ ವಿಶಾಲ್ ದರ್ಗಿ ಇತರರಿದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net