ಗ್ರಾಮೀಣ ಭಾಗದ ಗ್ರಾಪಂ ಗ್ರಂಥಾಲಯಗಳು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೆ

IMG-20230805-WA0031
Published on

ಕೆಆರ್‌ಐಡಿಎಲ್ ಸಿಎಸ್‌ಆರ್ ಚೆಕ್ ಸಿಇಒಗೆ ಹಸ್ತಾಂತರಿಸಿದ ಸಿಎಂ ಡಿಸಿಎಂ : ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೊಸ ಹೆಜ್ಜೆ

ಬಾಬುರಾವ ಯಡ್ರಾಮಿ ಕಲಬುರಗಿ
ಸಾರ್ವಜನಿಕರಲ್ಲಿ ವಿದ್ಯೆಯ ಓದಿನ ಅಭಿರುಚಿ  ಬೆಳೆಸಲು ಜಿಲ್ಲೆಯ  ಗ್ರಾಮೀಣ ಭಾಗದಲ್ಲಿರುವ ಗ್ರಾಪಂ ಗ್ರಂಥಾಲಯಗಳು ಶ್ರೀಸಾಮಾನ್ಯರ ವಿಶ್ವವಿದ್ಯಾಲಯಗಳಾಗಿ ಸಮಾಜದ ಜ್ಞಾನಾರ್ಜನೆಯ ಅರ್ಥಪೂರ್ಣ ಸಾಧನಗಳಾಗಿ ಕಾರ್ಯ ನಿರ್ವಹಣೆ ಮಾಡುವಂತೆ ಮಾಡಲು  ಅವನ್ನು ಅರಿವು ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲು ಸರ್ಕಾರ ಮುಂದಡಿ ಇಟ್ಟಿದೆ. ಗ್ರಾಮೀಣಾಭಿವೃದ್ಧಿ ಸಚಿಚ ಪ್ರಿಯಾಂಕ್ ಖರ್ಗೆ ಪ್ರಮುಖ ಯೋಜನೆ ರೂಪಿಸಿದ್ದಾರೆ. ಇದು ಗ್ರಾಮೀಣರ ಜ್ಞಾನ ದಾಹ ಇಂಗಿಸಲು ಪೂರಕವಾಗಿದೆ.


ವಿಶ್ವಗುರು ಬಸವಣ್ಣನವರ ಅರಿವೇ ಗುರು ತತ್ವ  ಸಮಾಜದ ಪ್ರತಿಯೊಬ್ಬರಲ್ಲೂ ಮಾರ್ದನಿಸಬೇಕು. ಅರಿವಿನೆಡಿಗಿನ ಸಮಾಜದ ಪ್ರತಿಯೊಬ್ಬರ ಪ್ರಯಾಣದ ಸಾಥಿಯಾಗಿ ಗ್ರಾಮ ಪಂಚಾಯಿತಿಯ ಗ್ರಂಥಾಲಯಗಳನ್ನು 'ಅರಿವು ಕೇಂದ್ರಗಳು' ಎಂದು ಮೇಲ್ದರ್ಜೆಗೇರಿಸುವ ಮೂಲಕ ಡಿಜಿಟಲï ಕಲಿಕಾ ಸಾಮಗ್ರಿಗಳು, ವೃತ್ತಿಪರ ಮಾರ್ಗದರ್ಶನ ವ್ಯವಸ್ಥೆ, ಸಂವಿಧಾನದ ಶೈಕ್ಷಣಿಕ ವ್ಯವಸ್ಥೆ, ವಿಶೇಷ ಚೇತನ ಸ್ನೇಹಿ ತಾಂತ್ರಿಕತೆ ಹಾಗೂ ನುರಿತ ವ್ಯಕ್ತಿಗಳಿಂದ ಜ್ಞಾನ ನೀಡುವುದು ಮುಂತಾದ ಸೌಲಭ್ಯಗಳನ್ನು ಒದಗಿಸಲು ವಿಶೇಷ ಕಾರ್ಯಯೋಜನೆ ಹಾಕಿಕೊಳ್ಳಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್  ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ವಿಜಯವಾಣಿಗೆ ಮಾಹಿತಿ ನೀಡಿದರು.


ಜನರಿಗೆ ಸಹಾಯವಾಗುವಂತೆ ಗ್ರಂಥಾಲಯಗಳನ್ನು ವಾರಾಂತ್ಯದಲ್ಲಿಯೂ ತೆರೆಯಲು ಅನುವು ಮಾಡಿಕೊಡಲಾಗುವುದು. ಈ ಕಾರ್ಯದಲ್ಲಿ ಜೊತೆಯಾಗಿ Ä ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ( ಕೆಆರ್‌ಐಡಿಎಲ್ ) ತನ್ನ ಸಿಎಸ್‌ಆರ್ ಅನುದಾನದಡಿ  ಕಲಬುರಗಿ ಜಿಲ್ಲೆಯ ೨೬೧ ಗ್ರಾಪಂ ಗ್ರಂಥಾಲಯಗಳಿಗೆ ಕೆಎಎಸ್,ಐಎಎಸ್,ಐಪಿಎಸ್, ಬ್ಯಾಂಕಿಂಗ್, ನೀಟ್ ಇನ್ನಿತರ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಪೂರಕವಾಗಿರುವ  ೪೧ ಕಲಿಕಾ ಪುಸ್ತಕಗಳನ್ನು ಒದಗಿಸಲು ಮುಂದೆ ಬಂದು  ೨೬ ಲಕ್ಷ ರೂಪಾಯಿ ಹಣವನ್ನು ಚೆಕ್‌ನ್ನು ನೀಡಿದೆ. ಈ ಚೆಕ್‌ನ್ನು ಜಿಪಂ ಸಿಇಒ ಭನ್ವರಸಿಂಗ್ ಮೀನಾ ಅವರಿಗೆ ಕಲಬುರಗಿಯಲ್ಲಿ ಜರುಗಿದ ಗೃಹ ಜ್ಯೋತಿ ಉದ್ಘಾಟನಾ ಸಮಾರಂಭದಲ್ಲಿ  ಸಿಎಂ ಸಿದ್ಧರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ ಹಾಗೂ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಹಸ್ತಾಂತರಿಸಿದರು. ಸಚಿವರಾದ  ಕೆ.ಜೆ.ಜಾರ್ಜ್, ಶರಣಬಸಪ್ಪ ದರ್ಶನಾಪುರ, ಡಾ.ಶರಣಪ್ರಕಾಶ ಪಾಟೀಲ್, ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಇದ್ದರು.
---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net