

ಕುರುಗೋಡು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಕಾರ್ಮಿಕರು ಕುಡತಿನಿ ಬಿಟಿಪಿಎಸ್ ಮುಂದೆ ಅನಿರ್ಧಿಷ್ಟಾವಧಿ ಧರಣಿ ನಡೆಸಿದರು.
ಇದನ್ನೂ ಓದಿ: ಪೌರಕಾರ್ಮಿಕರು ಜನರ ಆರೋಗ್ಯ ಕಾಪಾಡುವ ವೈದ್ಯರು
ಸುಮಾರು ಹತ್ತು ವರ್ಷಗಳಿಂದ ಕನಿಷ್ಟ ವೇತನ ನೀಡುವಲ್ಲಿ ವಿಫಲವಾಗಿದೆ. ಸರ್ಕಾರ ನಿಗದಿಪಡಿಸಿದ ಹಾಗೂ ಪರಿಷ್ಕರಿಸಿದ ವೇತನ, ಭತ್ಯೆ ನೀಡುತ್ತಿಲ್ಲ. ಸರ್ಕಾರದ ನಿಯಮಾವಳಿ ಪಾಲಿಸದೆ ಹತ್ತು ವಷರ್ದಿಂದ ನುರಿತವಲ್ಲ ಎಂದು ದೂಷಿಸಿ,
ನಾಲ್ಕು ಹಂತದ ಕಾರ್ಮಿಕರಿಗೆ ಸಮಾನ ವೇತನ ನೀಡುತ್ತಿಲ್ಲ. ಪ್ರತಿ ಕಾರ್ಮಿಕನ ಹಾಜರಾತಿ ಗುತ್ತಿಗೆದಾರರ ಜತೆಗೆ ಅದರ ಪ್ರತಿಯನ್ನು ಆಯಾ ವಿಭಾಗದ ನಿಯಂತ್ರಣಾಧಿಕಾರಿಗಳು ನಿರ್ವಹಿಸಬೇಕು. ಹದಿನೈದು ವಷರ್ ಕೆಲಸ ಮಾಡಿದರೂ, ಅವರಿಗೆ ನುರಿತ ಅರ್ಹತೆ ನೀಡುತ್ತಿಲ್ಲ ಎಂದು ಅಧಿಕಾರಿಗಳ ವಿರುದ್ಧ ಆರೋಪಿಸಿದರು.
ಗುತ್ತಿಗೆದಾರರು ಟೆಂಡರ್‌ನಲ್ಲಿ ನಮೂದಿಸಿದ ಸಂಖ್ಯೆಗಿಂತ ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ನಿಗಮದಿಂದ ಹೆಚ್ಚಿನ ಹಣ ಪಡೆಯಲಾಗುತ್ತಿದೆ. ಆಯಾ ಗುತ್ತಿಗೆದಾರರು ಟೆಂಡರ್‌ನಲ್ಲಿ ಸಾರಿಗೆ ವ್ಯವಸ್ಥೆ ಬಗ್ಗೆ ನಮೂದಿಸಿದ್ದಲ್ಲಿ ಸಾರಿಗೆ ವ್ಯವಸ್ಥೆ ಮಾಡುವುದು ಅವಶ್ಯಕವಾಗಿದೆ.
ಒ.ಟಿ. ಕೊಡಬೇಕು. ಗುತ್ತಿಗೆದಾರರು ಕಾರ್ಮಿಕರ ಮೇಲೆ ದಬ್ಬಾಳಿಕೆ ಮತ್ತು ದೌರ್ಜನ್ಯ ಮಾಡುತ್ತಿರುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಸಿಐಟಿಯು ಕಾರ್ಮಿಕ ತಾಲೂಕು ಅಧ್ಯಕ್ಷ ತಿಪ್ಪೇಸ್ವಾಮಿ ಮಾತನಾಡಿದರು. ಪ್ರಮುಖರಾದ ಚಂದ್ರಯ್ಯ, ದೊಡ್ಡಬಸಪ್ಪ, ಮೆಟ್ರಿಕ್ ವೆಂಕಟೇಶ, ಜಿ.ಪ್ರತಾಪ್, ಮಹಾಂತೇಶ, ದೊಡ್ಡಪ್ಪ ಇದ್ದರು.