

ನೌಕರರು ಲೇಟ್‌ಲತೀಫ್ | ಪರದಾಡುತ್ತಿರುವ ಸಾರ್ವಜನಿಕರು
ವಿಜಯವಾಣಿ ಸುದ್ದಿಜಾಲ ಯಾದಗಿರಿ
ಬಿಸಿಲಿನ ತಾಪ ಹೆಚ್ಚಿದ್ದರಿಂದ ಜನರ ಅನುಕೂಲಕ್ಕಾಗಿ ರಾಜ್ಯ ಸರ್ಕಾರ ಕಚೇರಿಗಳ ಸಮಯ ಬದಲಿಸಿ ಹತ್ತು ದಿನಗಳಾದರೂ ಯಾದಗಿರಿ ಜಿಲ್ಲೆಯಲ್ಲಿ ನೌಕರರು ಇನ್ನೂ ಬದಲಾದ ಸಮಯಕ್ಕೆ ಕಚೇರಿಗಳಿಗೆ ಬರುತ್ತಿಲ್ಲ, ಇದರಿಂದಾಗಿ ಜನರು ತೊಂದರೆ ಅನುಭವಿಸುವಂತಾಗಿದೆ. ಕಲ್ಯಾಣ ಕರ್ನಾಟಕದ ಉಳಿದ ಜಿಲ್ಲೆಗಳಲ್ಲಿಯೂ ಪರಿಸ್ಥಿತಿ ಇದಕ್ಕೆ ಹೊರತಾಗಿಲ್ಲ.
ಏ.೧ರಿಂದಲೇ ಬೆಳಗ್ಗೆ ೮ರಿಂದ ಮಧ್ಯಾಹ್ನ ೧.೩೦ರವರೆಗೆ ಸರ್ಕಾರಿ ಕಚೇರಿ ಕಾರ್ಯನಿರ್ವಹಿಸುವ ಆದೇಶ ಹೊರಡಿಸಿದೆ.ವಿವಿಧ ಇಲಾಖೆಗಳ ಶೇ.೬೦ರಷ್ಟು ನೌಕರರು ೯ ಗಂಟೆ ನಂತರವೇ ಕಚೇರಿಗೆ ಪ್ರವೇಶ ಮಾಡುತ್ತಿದ್ದಾರೆ. ೧೦.೩೦ರ ನಂತರ ಚಹಾ ಕುಡಿಯಲು ಎಂದು ಒಂದು ಅರ್ಧ ಗಂಟೆ ಮತ್ತೇ ಕಚೇರಿಯಲ್ಲಿ ಸಿಗುವುದೇ ಇಲ್ಲ, ಮಧ್ಯಾಹ್ನ ೧ಗಂಟೆಯಾಗುತ್ತಲೇ ಮನೆಗೆ ಹೋಗುವ ಅವಸರದಲ್ಲಿ ನಾಳೆ ಬನ್ನಿ ಎಂದು ಹೇಳಿ ಕಳಿಸುವುದು ಅನೇಕ ಕಡೆ ನಡೆದಿದೆ ಎಂಬ ಆರೋಪಗಳು ಸಾರ್ವಜನಿಕರದ್ದಾಗಿದೆ.
ಸರ್ಕಾರದ ೪೨ ಕ್ಕೂ ಹೆಚ್ಚು ಇಲಾಖೆಗಳಿವೆ. ಸಾವಿರಾರು ನೌಕರರಿಲ್ಲಿದ್ದಾರೆ. ಅವರುಗಳಲ್ಲಿ ತಾವು ಸೇವೆ ಸಲ್ಲಿಸುತ್ತಿರುವ ಸ್ಥಳಗಳಲ್ಲಿ ವಾಸವಿರುವ ಮಾತ್ರ ನಿಗದಿತ ಸಮಯಕ್ಕೆ ಕಚೇರಿಗಳಿಗೆ ಬರುವುದು ಕಂಡುಬAದರೇ ಬೇರೆ ಸ್ಥಳಗಳಿಂದ ಕರ್ತವ್ಯದ ಸ್ಥಳಕ್ಕೆ ನಿತ್ಯ ಹೋಗಿ ಬಂದು ಮಾಡುವವರು ಬೆಳಗ್ಗೆ ೮ಕ್ಕೆ ಕಚೇರಿಯಲ್ಲಿ ಕಾಣುತ್ತಿಲ್ಲ. ಹೀಗಾಗಿ ಜನರು ಕೆಲಸಗಳಿಗೆ ಅಲೆದಾಡುವಂತಾಗಿದೆ.
ಸಮಯ ಬದಲಿಯಾಗಿದೆ ಎಂಬ ಧಾವಂತದಲ್ಲಿ ಹಳ್ಳಿಗಳಿಂದ ಜನರು ಕೆಲಸ,ಕಾರ್ಯಗಳಿಗೆ ಬೆಳಗಿನ ಮೊದಲ ಬಸ್ ಹಿಡಿದು ತಾಲೂಕು, ಜಿಲ್ಲಾ ಕೇಂದ್ರಗಳಿಗೆ ಆಗಮಿಸುತ್ತಾರೆ. ಆದರೆ, ಸಂಬAಧಪಟ್ಟ ಅಧಿಕಾರಿಗಳು ಹಾಗೂ ಸಿಬ್ಬಂದಿ ಕುಳಿತುಕೊಳ್ಳುವ ಕುರ್ಚಿ ಖಾಲಿ ಇರುತ್ತಿವೆ ಎಂದು ಹಲವು ದೂರಿದರು.
ಮುಖ್ಯವಾಗಿ ಕಂದಾಯ, ಜಿಪಂ, ನಗರಸಭೆ, ಪುರಸಭೆ, ಗ್ರಾಪಂ, ಕಾರ್ಮಿಕ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಕೃಷಿ, ಪಶು ಸಂಗೋಪನಾ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹೀಗೆ ನಿತ್ಯ ಜನರಿಗಾಗಿ ಕೆಲಸ ಮಾಡುವ ಇಲಾಖೆಗಳಲ್ಲಿ ನೌಕರರು ಬೆಳಗ್ಗೆ ಸಿಗುವುದಿಲ್ಲ ಎಂಬ ಆರೋಪಗಳು ಹೆಚ್ಚಾಗಿವೆ.
೨೪ ಗಂಟೆ ಕರ್ತವ್ಯ
ಸರ್ಕಾರಿ ಕಚೇರಿ ಸಮಯ ಬದಲಿಸಿದಾದರೂ, ದಿನದ ೨೪ ತಾಸು ಪೊಲೀಸ್, ಸ್ಥಳಿಯ ಸಂಸ್ಥೆಯ ಪೌರಕಾರ್ಮಿಕರು, ಸಾರಿಗೆ ಸಂಸ್ಥೆ ಚಾಲಕ, ನಿರ್ವಾಹಕರ, ಅಗ್ನಿ ಶಾಮಕದಳ,ಆರೋಗ್ಯ ಇಲಾಖೆ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
---
ಆವ್ ಜಾವ್ ಅಪನಾ ಘರ್!
ಅಬಕಾರಿ, ಸಣ್ಣ ನೀರಾವರಿ, ಜಲಸಂಪನ್ಮೂಲ, ಪರಿಸರ, ಔಷಧಿ ನಿಯಂತ್ರಣ, ಲೀಡ್ ಬ್ಯಾಂಕ್, ಕ್ರೀಡಾ ಮತ್ತು ಯುವ ಸಬಲಿಕರಣ, ಜವಳಿ, ಅಬಕಾರಿ, ಸಣ್ಣ ನೀರಾವರಿ, ಸಹಕಾರ, ಕೈಗಾರಿಕೆ, ಪ್ರವಾಸೋದ್ಯಮ, ಅರಣ್ಯ,ಮೀನುಗಾರಿಕೆ,ಜವಳಿ ಮೊದಲಾದ ಇಲಾಖೆಗಳಿಗೆ ಮೊದಲಿನಿಂದಲೂ ಸಾರ್ವಜನಿಕರ ಭೇಟಿ ಕೊಡುವುದು ಕಡಿಮೆ. ಹೀಗಾಗಿ ಅಲ್ಲಿನ ನೌಕರರು ಆರಾಮವಾಗಿ ಬಂದು ಹೋಗುವ ಪರಿಪಾಠ ಮೊದಲಿನಿಂದಲೂ ಚಾಲ್ತಿಯಲ್ಲಿದೆ. ಈಗ ಅಪ್ಪಿ ತಪ್ಪಿ ಜನರು ಹೋಗಿ ಅಧಿಕಾರಿಗಳ ಬಗ್ಗೆ ವಿಚಾರಿಸಿದರೇ ಸಾಹೇಬರು ಮಿಟಿಂಗ್‌ಗೆ ಹೋಗಿದ್ದಾರೆ ಎಂಬ ಸಿದ್ದ ಉತ್ತರ ಲಭಿಸುತ್ತಿದೆ. ಹೀಗಾಗಿ ಮಾಮೂಲು ದಿನಗಳಲ್ಲಿಯೇ ಇರುವಂತಾಗಿದೆ. ಇವರದು ಆವ್ ಜಾವ್ ಎಂಬAತಾಗಿದೆ.
ಪಿಡಿಒಗಳು ಇರಲ್ಲ
ಕಕ ಭಾಗದ ಏಳು ಜಿಲ್ಲೆಗಳಲ್ಲಿರುವ ಸುಮಾರು ೧೦೫೦ಕ್ಕೆ ಗ್ರಾಪಂಗಳ ಪಿಡಿಒಗಳು ಸಮಯಕ್ಕೆ ಸರಿಯಾಗಿ ಕೇಂದ್ರ ಸ್ಥಾನದಲ್ಲಿ ಇರುವುದಿಲ್ಲ ಎಂಬ ಆರೋಪ ಬಲವಾಗಿದೆ.ಕಾರಣ, ಬೇಸಿಗೆಯಲ್ಲಿ ಕುಡಿಯುವ ನೀರಿನ ತೊಂದರೆಯಾಗದAತೆಯೇ ನೋಡಿಕೊಳ್ಳುವ ಹೊಣೆಗಾರಿಕೆ ಅವರ ಮೇಲಿದೆ.
ಬದಲಾದ ಸಮಯಕ್ಕೆ ಸರಿಯಾಗಿ ಎಲ್ಲ ನೌಕರರು ಕಚೇರಿಗೆ ಬಂದು ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ವಿಳಂಬವಾಗಿ ಬರುವ ವಿಷಯಕ್ಕೆ ಸಂಬAಧಪಟ್ಟAತೆಯೇ ಜಿಲ್ಲೆಗಳ ಜಿಲ್ಲಾಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಲಾಗುವುದು. ಸಮಯ ಪಾಲನೆ ಮಾಡಲು ಸೂಚಿಸಲಾಗುವುದು.
| ಕೃಷ್ಣ ಭಾಜಪೇಯಿ
ಪ್ರಾದೇಶಿಕ ಆಯುಕ್ತರು ಕಲಬುರಗಿ
ಕುಡಿಯುವ ನೀರು, ಆರೋಗ್ಯ ಸಮಸ್ಯೆ ಸೇರಿದಂತೆಯೇ ವಿವಿಧ ಇಲಾಖೆಗಳಿಗೆ ಜನರು ಅಗತ್ಯ ಕೆಲಸಗಳಿಗಾಗಿ ಬರುವಾಗ ಸಂಬAಧಪಟ್ಟವರೇ ಅಲ್ಲಿ ಸಮಯಕ್ಕೆ ಸರಿಯಾಗಿ ಸಿಗುವುದೇ ಇಲ್ಲ ಎಂದರೆ ಯಾರಿಗೆ ಕೇಳಬೇಕು ?. ಹಿರಿಯ ಅಧಿಕಾರಿಗಳು ಗಮನ ಹರಿಸಬೇಕು.
|ಅಶೋಕ ಮಲ್ಲಾಬಾದಿ
ರೈತ ಹೋರಾಟಗಾರ, ಶಹಾಪುರ
--