ಕಲ್ಯಾಣ ಕರ್ನಾಟಕ ಸುತ್ತೋಲೆ ಎತ್ತಿ ಹಿಡಿದ ಹೈಕೋರ್ಟ್

High court logo
Published on

ನ್ಯಾಯಾಲಯದ ಆದೇಶ ಸ್ವಾಗತಿಸಿದ ಶಾಸಕ ನಮೋಶಿ

ಕಲಬುರಗಿ : ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳು ನೇಮಕಾತಿಯಲ್ಲಿ ೩೭೧ (ಜೆ) ಮೀಸಲಾತಿ ಹೊರತುಪಡಿಸಿ ಜನರಲ್ ಕೋಟಾದಲ್ಲಿಯೂ ಸಹ  ರ‍್ಯಾಂಕಿAಗ್ ಅರ್ಹತೆಯ ಆಧಾರದಲ್ಲಿ  ಪರಿಗಣಿಸಬೇಕು ಎಂದು ಸರ್ಕಾರವು ಈ ಹಿಂದೆ  ೧-೨-೨೦೨೩ ರಂದು ಸರ್ಕಾರ ಹೊರಡಿಸಿದ್ದ ಕಲ್ಯಾಣ ಕರ್ನಾಟಕದ ಸುತ್ತೋಲೆಯನ್ನು ಹೈಕೋರ್ಟ್ ಎತ್ತಿ ಹಿಡಿದಿದೆ. ಇದರಿಂದ ಈ ಭಾಗದ ಉದ್ಯೋಗಾಂಕ್ಷಿಗಳಿಗೆ   ಭಾರಿ ಅನುಕೂಲ ಮತ್ತು ಹೆಚ್ಚು ಉದ್ಯೋಗಗಳು ಸಿಗಲು ಸಹಕಾರಿಯಾಗಲಿದೆ.
ಈಚೆಗೆ ಸರ್ಕಾರವು ಪದವಿ ಕಾಲೇಜುಗಳ ಶಿಕ್ಷಕರು, ೧೩ ಸಾವಿರ ಪದವಿ ಪ್ರಾಥಮಿಕ ಶಾಲಾ ಶಿಕ್ಷಕರು ಹಾಗೂ ಕೆಪಿಟಿಸಿಎಲ್ ನೇಮಕಾತಿಯಲ್ಲಿ ಸುತ್ತೋಲೆಯಂತೆ ರ‍್ಯಾಂಕಿAಗ್ ಆಧರಿಸಿ  ಕಕ ಭಾಗದವರಿಗೆ ಸಾಮಾನ್ಯ ಕೋಟಾದಲ್ಲಿಯೂ ನೇಮಕಗೊಂಡಿದವರರಿಗೆ ಆದೇಶ ನೀಡಿದ್ದನ್ನು ಪ್ರಶ್ನಿಸಿ ಕಕಯೇತರ ಅಭ್ಯರ್ಥಿಗಳು ಹೈಕೋರ್ಟ್ನಲ್ಲಿ ಪ್ರಶ್ನಿಸಿದ್ದರು.
ಹೈಕೋರ್ಟ್ ಮಂಗಳವಾರ ಈ ವಿಷಯವಾಗಿ ಮಹತ್ವದ ತೀರ್ಪು ನೀಡುವ ಮೂಲಕ ನಮ್ಮ ಭಾಗದ ಅಭ್ಯರ್ಥಿಗಳ ಹಿತವನ್ನು ಕಾಪಾಡಿದಂತೆ. ಇದರಿಂದಾಗಿ ಮೀಸಲಾತಿ ಹೊರತುಪಡಿಸಿ ಹೆಚ್ಚುವರಿಯಾಗಿ  ೪೦೦ ಹುದ್ದೆಗಳು ಸಿಕ್ಕಂತೆ ಆಗಲಿವೆ ಎಂದು ವಿಧಾನ ಪರಿಷತ್ ಸದಸ್ಯ ಶಶೀಲ್ ನಮೋಶಿ ಅವರು ತಿಳಿಸಿದ್ದಾರೆ. ಈ ವಿಷಯವನ್ನು ಮುಂದಿಟ್ಟುಕೊAಡು ತಾವು ಮತ್ತು ಪದವಿ ಕಾಲೇಜು ಶಿಕ್ಷಕ ಅಭ್ಯರ್ಥಿಗಳು ನಡೆಸಿದ ಹೋರಾಟಕ್ಕೆ ಜಯ ಸಿಕ್ಕಿದೆ ಎಂದು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net