ಉಪಾಧ್ಯರಾಗಿ ಗೋವಿಂದ ಪಾಟೀಲ ಆಯ್ಕೆ

8Kanapur1
Published on

ಖಾನಾಪುರ: ತಾಲೂಕಿನ ಬರಗಾಂವ ಗ್ರಾಪಂ ಉಪಾಧ್ಯ ಸ್ಥಾನಕ್ಕೆ ಮಂಗಳವಾರ ನಡೆದ ಚುನಾವಣೆಯಲ್ಲಿ ಗೋವಿಂದ ಹನುಮಂತ ಪಾಟೀಲ ಚುನಾಯಿತರಾದರು.ಪ್ರವಿಣ ಪಾಟೀಲ ಅವರ ರಾಜೀನಾಮೆಯಿಂದ ಉಪಾಧ್ಯಕ್ಷ ಸ್ಥಾನ ಖಾಲಿಯಾಗಿತ್ತು. ಚುನಾವಣೆಯಲ್ಲಿ ಗೋವಿಂದ ಪಾಟೀಲ 6 ಮತ ಪಡೆದರೆ, ಗಂಗಾರಾಮ ಪಾಟೀಲ 4 ಮತ ಪಡೆದರು.

ಖಾನಾಪುರ ಪಿಕೆಪಿಎಸ್​ ನಿರ್ದೇಶಕ ಶಂಕರ ಪಾಟೀಲ, ಬರಗಾಂವ ಪಿಕೆಪಿಎಸ್​ ಅಧ್ಯ ಕಾಳಪ್ಪ ಪಾಟೀಲ, ಗ್ರಾಪಂ ಮಾಜಿ ಸದಸ್ಯ ರಾಮ ಪಾಟೀಲ, ಎಸ್​ಡಿಎಂಸಿ ಉಪಾಧ್ಯ ಗಜಾನನ ಪಾಟೀಲ, ಸಾಮಾಜಿಕ ಕಾರ್ಯಕರ್ತ ಪಾಂಡುರಂಗ ಹನುಮಂತ ಪಾಟೀಲ, ಗ್ರಾಪಂ ಅಧ್ಯ ಚಂಗಣ್ಣ ಪಾಟೀಲ, ಗ್ರಾಪಂ ಸದಸ್ಯರಾದ ಪ್ರವಿಣ ಪಾಟೀಲ, ಯಮುನಾ ಸುತಾರ, ಗೋಪಿಕಾ ಮುತಗೇಕರ, ಕವಿತಾ ನಿಡಗಲ್ಕರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net