

ಬೆಳ್ತಂಗಡಿ: ಕರ್ನಾಟಕ ಸರ್ಕಾರ ಇತ್ತೀಚೆಗೆ ಮಂಡಿಸಿದ ಬಜೆಟ್ನಲ್ಲಿ ಅಲ್ಪಸಂಖ್ಯಾತರಿಗೆ ವಿಶೇಷ ಅನುದಾನ ಬಿಡುಗಡೆ ವಾಡಿದೆ ಎಂದು ಆರೋಪಿಸಿ ಹಿಂದು ಜನಜಾಗೃತಿ ಸಮಿತಿ ವತಿಯಿಂದ ಉಪತಹಸೀಲ್ದಾರ್ ಜಯ ಮೂಲಕ ರಾಜ್ಯಪಾಲರಿಗೆ ಮನವಿ ನೀಡಲಾಯಿತು.
ಕರ್ನಾಟಕ ಸರ್ಕಾರದ ಧಾರ್ಮಿಕ ದತ್ತಿ ಇಲಾಖೆಯ 34 ಸಾವಿರ ‘ಸಿ’ ಗ್ರೇಡ್ ದೇವಸ್ಥಾನಗಳ ಅರ್ಚಕರಿಗೆ ಯಾವುದೇ ಸಂಬಳ ಇಲ್ಲ. ಆದರೆ ಇವಾಮ್ರಿಗೆ 6 ಸಾವಿರ ರೂ. ಅನುದಾನ ನೀಡಲಾಗಿದೆ. ಪ್ರಾಚೀನ ದೇವಸ್ಥಾನಗಳ ಅಭಿವೃದ್ಧಿಗಾಗಿ ಬಜೆಟ್ನಲ್ಲಿ ಯಾವುದೇ ಅನುದಾನವಿಲ್ಲ. ಸಾರ್ವಜನಿಕರ ತೆರಿಗೆ ಹಣವನ್ನು ಕೇವಲ ಒಂದೇ ಸಮುದಾಯದ ಅಭಿವೃದ್ಧಿಗೆ ವಿನಿಯೋಗಿಸುವುದು ಭಾರತದ ಸಂವಿಧಾನದ ಕಲಂ 14, 15 ರ ಉಲ್ಲಂಘ ನೆ. ಹಾಗಾಗಿ ಸರಕಾರದ ಈ ವರ್ಷದ ಹಣಕಾಸು ವಿಧೇಯಕಕ್ಕೆ ಅನುಮೋದನೆ ನೀಡಬಾರದು ಎಂದು ಮನವಿ ನೀಡಲಾಯಿತು.
ಪ್ರಮುಖರಾದ ನಾರಾಯಣ ಫಡ್ಕೆ ಮುಂಡಾಜೆ, ಜಯ ಸಾಲ್ಯಾನ್ ಬಲೆಂಜ, ವಾಮನ್ ಬಾಳಿಗ ವೇಣೂರು, ರಾವೇಂದ್ರ ಕಾಮತ್ ಉಜಿರೆ, ಸಂತೋಷ್ ಕುವಾರ್ ಪೆರಿಯಡ್ಕ, ಕೇಶವ ಅಚ್ಚಿನಡ್ಕ, ಶಿವರಾಮ್ ಉಜಿರೆ, ವಿಜ್ಞೇಶ್ ಆಚಾರ್ಯ ಬೆಳ್ತಂಗಡಿ, ಕೇಶವ ಭಟ್ ಅತ್ತಾಜೆ, ಉಮೇಶ್ ಬಂಗೇರ ಪಿಲ್ಯ, ಶಿವರಾಮ ಉಜಿರೆ, ಯೋಗೀಶ್ ಕೆಂಬರ್ಜಿ, ಕರುಣಾಕರ ಅಬ್ಯಂಕರ ಸೋಮಂತಡ್ಕ, ಹಿಂದು ಜನಜಾಗೃತಿ ಸಮಿತಿಯ ಹರೀಶ ಕಕ್ಕಿಂಜೆ ಮೊದಲಾದವರಿದ್ದರು.