ಸರ್ಕಾರಿ ಸಂಘದ ವಿರುದ್ಧ ಅಪಪ್ರಚಾರ ತಡೆಗೆ ಮನವಿ

Raju Lengti
Published on

ಕಲಬುರಗಿ: ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಕುರಿತು ಇಲ್ಲಸಲ್ಲದ ಆರೋಪ ಮಾಡಿ, ಸುಳ್ಳು ಸುದ್ದಿ ಪ್ರಚಾರ ಮಾಡುತ್ತಿರುವ ಅಧಿಕಾರಿ-ನೌಕರರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ನೌಕರರ ಸಂಘದ ಕಲಬುರಗಿ ಜಿಲ್ಲಾ ಘಟಕದ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಸಂಘದ ಜಿಲ್ಲಾಧ್ಯಕ್ಷ ರಾಜೂ ಲೇಂಗಟಿ ನೇತೃತ್ವದ ನೌಕರರ ನಿಯೋಗ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಿ ಸಂಘದ ಘನತೆಗೆ ಧಕ್ಕೆ ತರುತ್ತಿರುವ ಐದು ಜನ ಅಧಿಕಾರಿ-ನೌಕರರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದೆ.
ಸಿ.ಷಡP್ಷÀರಿ ಸಂಘದ ಅಧ್ಯಕ್ಷರಾದ ನಂತರ ನೌಕರರ ಬಹುದಿನಗಳ ಬೇಡಿಕೆ ಒಂದೊAದಾಗಿ ಈಡೇರಿವೆ. ನೌಕರರ ಏಳನೇ ವೇತನ ಆಯೋಗ ರಚನೆ, ಶೇ.೧೭ ಮಧ್ಯಂತರ ಪರಿಹಾರ ಮಂಜೂರು, ಎನ್‌ಪಿಎಸ್ ರದ್ದುಗೊಳಿಸಿ ಓಪಿಎಸ್ ಜಾರಿಗೆ ಅಧ್ಯಯನ ಸಮಿತಿ ರಚನೆ, ಶುಲ್ಕ ರಹಿತ ಆರೋಗ್ಯ ಚಿಕಿತ್ಸೆ, ಮಹಿಳಾ ನೌಕರರಿಗೆ ೬ ತಿಂಗಳ ಶಿಶು ಪಾಲನೆ ರಜೆ, ಮುಂಬಡ್ತಿ ಭಾಗ್ಯ, ಇಲಾಖೆಗಳ ಸಿ.ಆರ್ ತಿದ್ದುಪಡಿ ಸೇರಿದಂತೆ ನೌಕರರ ಸ್ನೇಹಿ ಕಾರ್ಯಗಳಾಗಿವೆ. ಸಂಘವು ಸಮಾಜಮುಖಿ ಕೆಲಸದಲ್ಲಿಯೂ ಸಹಾಯದ ಹಸ್ತ ಚಾಚಿದೆ ಎಂದು ವಿವರಿಸಿದ್ದಾರೆ.
ಸಿ.ಎಸ್.ಷಡಕ್ಷರಿ ನೇತೃತ್ವದಲ್ಲಿನ ನೌಕರರ ಸಂಘದ ಬೆಳವಣಿಗೆ ಸಹಿಸದವರು ಸಮಾಜಿಕ ಜಾಲತಾಣದ ಮೂಲಕ ಅಪಪ್ರಚಾರ ಮಾಡುತ್ತಾ, ೫.೨೫ ಲಕ್ಷ ನೌಕರರ ಮಾತೃ ಸಂಸ್ಥೆಯ ಹೆಸರಿಗೆ ಕಪ್ಪು ಚುಕ್ಕೆ ತರಲು ಪ್ರಯತ್ನಿಸುತ್ತಿದ್ದಾರೆ ಎಂದು ಅರೋಪಿಸಿದರು.
ಸಂಘದ ಪದಾಧಿಕಾರಿಗಳಾದ ಅಬ್ದುಲï ಅಜೀಮ್, ಎಚ್.ಗೊಳಸಾರ್. ಸಿದ್ದಲಿಂಗಯ್ಯ ಮಠಪತಿ, ಬಾಬು ಮೌರ್ಯ, ಉಮಾದೇವಿ, ರವಿ ಮಿರಸ್ಕರ್, ಹನುಮಂತರಾವ್ ಮರಡಿ, ಮಲ್ಲಿನಾಥ ಮಂಗಲಗಿ, ಗುರುಲಿಂಗಪ್ಪ ಪಾಟೀಲ್, ಅಶೋಕ್ ಶಾಬಾದಿ, ಅಬ್ದುಲ್ ಜಮೀಲ್ ಅವ್ವಣ್ಣ ತಳವಾರ್, ವೀರೇಂದ್ರ ಪೂಜಾರಿ, ರಂಗನಾಥ ಪೂಜಾರಿ, ಗಜೇಂದ್ರ ರವಿಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net