ರೈತರ ಹೋರಾಟಕ್ಕೆ ಸರ್ಕಾರ ಶೀಘ್ರ ಸ್ಪಂದಿಸಲಿ

12 rtl 02
Published on

ರಟ್ಟಿಹಳ್ಳಿ: ಶಿಕಾರಿಪುರ ಏತ ನೀರಾವರಿ ಯೋಜನೆ ವಿರೋಧಿಸಿ ಹಿರಿಯ ವಕೀಲ ಬಿ.ಡಿ. ಹಿರೇಮಠ ನೇತೃತ್ವದಲ್ಲಿ ರೈತರು ನಡೆಸುತ್ತಿರುವ ಆಮರಣಾಂತ ಉಪವಾಸ ಸತ್ಯಾಗ್ರಹ ಸ್ಥಳಕ್ಕೆ ಶನಿವಾರ ಜಂಗಮ ಕ್ಷೇಮಾಭಿವೃದ್ಧಿ ಸಂಘ ಮತ್ತು ಕರ್ನಾಟಕ ರೈತ ಮತ್ತು ಕಾರ್ವಿುಕ ಸಂಘಟನೆ ಪದಾಧಿಕಾರಿಗಳು ಆಗಮಿಸಿ ಹೋರಾಟಕ್ಕೆ ಬೆಂಬಲ ಸೂಚಿಸಿದರು.

ಸಂಘದ ಅಧ್ಯಕ್ಷ ಡಾ.ದಾರುಕಾಚಾರ್ಯರು ಮಾತನಾಡಿ, ಉಪವಾಸ ಸತ್ಯಾಗ್ರಹಕ್ಕೆ ಸರ್ಕಾರ ಶೀಘ್ರವೇ ಸ್ಪಂದಿಸಬೇಕು. ರೈತರಿಗೆ ಅನ್ಯಾಯವಾಗದಂತೆ ಸರ್ಕಾರ ಕ್ರಮ ಕೈಗೊಳ್ಳಬೇಕು. ವಕೀಲರು ಕಳೆದ 9 ದಿವಸಗಳಿಂದ ಉಪವಾಸ ಕೈಗೊಂಡಿದ್ದಾರೆ. ಅವರ ಆರೋಗ್ಯದಲ್ಲಿ ವ್ಯತ್ಯಾಸವಾಗದಂತೆ ನೋಡಿಕೊಳ್ಳಬೇಕು. ಅವರಿಗೇನಾದರೂ ತೊಂದರೆಯಾದರೆ ಸರ್ಕಾರ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಂಗಮ ಕ್ಷೇಮಾಭಿವೃದ್ಧಿ ಸಂಘದ ರಾಜ್ಯ ಮಟ್ಟದ, ದಾವಣಗೆರೆ, ಸಿಂಧನೂರು, ಬೆಂಗಳೂರು, ಧಾರವಾಡ ಸೇರಿದಂತೆ ವಿವಿಧೆಡಯಿಂದ ಆಗಮಿಸಿದ್ದ ಅನೇಕ ಪದಾಧಿಕಾರಿಗಳು, ರೈತ ಮತ್ತು ಕಾರ್ವಿುಕ ಸಂಘಟನೆ ಪದಾಧಿಕಾರಿಗಳು, ಹಿರೇಮಠ ಅವರ ಸಹೋದರಿ ತನುಜಾಶ್ರೀ ಇತರರು ಇದ್ದರು.

ಪುತ್ರನ ಯೋಗಕ್ಷೇಮ ವಿಚಾರಿಸಿದ ವಿಶಾಲಕ್ಷಮ್ಮ

ಬಿ.ಡಿ. ಹಿರೇಮಠ ಅವರ ತಾಯಿ ವಿಶಾಲಕ್ಷಮ್ಮ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿದರು. ರೈತರಿಗೆ ನ್ಯಾಯ ಕೊಡಿಸಲು ಮಗ ಹೋರಾಟ ಮಾಡುತ್ತಿದ್ದಾನೆ. ರೈತರಿಗೆ ಜಯ ದೊರಕುವ ವಿಶ್ವಾಸ ನಮಗಿದೆ. ಮಗ ಉಪವಾಸ ಇರುವುದರಿಂದ ನನಗೆ ಸಂಕಟವಾಗುತ್ತಿದೆ ಎಂದು ನೋವು ತೋಡಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net