ಸರ್ಕಾರಿ ಪಡಿತರ ವಿತರಕ ಸಂಘ ಸಭೆ:ಸರ್ಕಾರಕ್ಕೆ ಹಕ್ಕೂತ್ತಾಯ ಮಂಡನೆ

e63d2d5b-66cf-47b8-a025-9506075c3b02
Published on

ಬೆಂಗಳೂರು: ಬಿಪಿಎಲ್​, ಅಂತ್ಯೋದಯ ಕಾರ್ಡ್​ಗೆ ಉಚಿತವಾಗಿ 3 ಲೀಟರ್​ ಸೀಮೆಎಣ್ಣೆ ವಿತರಣೆ, ಕಮಿಷನ್​ ಹೆಚ್ಚಳ, ಅನ್ನಭಾಗ್ಯ ಯೋಜನೆಯಡಿ ಹಣ ಬದಲು ಅಕ್ಕಿ,ತೋಗರಿ ಬೇಳೆ, ಸಕ್ಕರೆ ವಿತರಣೆ ಸೇರಿ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ, ಜಿಲ್ಲಾವಾರು ಸಭೆ ಆಯೋಜಿಸುತ್ತಿದೆ.

ಶಿವಮೊಗ್ಗ, ಚಿಕ್ಕಮಗಳೂರಿನಲ್ಲಿ ಈಗಾಗಲೇ ನಡೆಸಿದ್ದ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ನ್ಯಾಯಬೆಲೆ ಅಂಗಡಿ ಮಾಲೀಕರ ಜತೆ ಚರ್ಚೆ ನಡೆಸಲಾಗಿದೆ. ಬುಧವಾರ (ಜು.3) ಬೆಳಗ್ಗೆ 10.30ಕ್ಕೆ ತುಮಕೂರಿನ ಕನ್ನಡ ಭವನದಲ್ಲಿ ಸಭೆ ಆಯೋಜಿಸಿದ್ದೇವೆ. ಈ ಸಭೆಯಲ್ಲಿ ರಾಜ್ಯ, ಜಿಲ್ಲಾ ಸಂಘಟನೆ, ಸರ್ಕಾರದ ಯೋಜನೆಗಳನ್ನು ಚರ್ಚಿಸಲಾಗುವುದು. ಎಲ್ಲ ಮಾಲೀಕರು ತಪ್ಪದೆ ಭಾಗವಹಿಸಬೇಕು. ಹಂತ ಹಂತವಾಗಿ ಎಲ್ಲ ಜಿಲ್ಲೆಗಳಲ್ಲಿ ಸಭೆ ನಡೆಸಲಾಗುವುದು. ಸಭೆಯಲ್ಲಿ ಚರ್ಚಿಸಿದ ವಿಷಯಗಳ ಕುರಿತು ಮನವಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಸಂಘದ ಅಧ್ಯಕ್ಷ ಟಿ.ಕೃಷ್ಣಪ್ಪ ಹೇಳಿದ್ದಾರೆ.

ಪ್ರಧಾನಮಂತ್ರಿ ಗರೀಬ್​ ಕಲ್ಯಾಣ ಅನ್ನಯೋಜನೆಯಡಿ ಎಲ್ಲ ರಾಜ್ಯಗಳಿಗೆ ಕೇಂದ್ರವೇ ಉಚಿತವಾಗಿ ಅಕ್ಕಿ ನೀಡುತ್ತಿದೆ. ಅಂದಾಜು 80 ಕೋಟಿ ಜನರು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ಕಾರ್ಡ್​ದಾರರಿಗೆ ಪಡಿತರ ವಿತರಣೆಗಾಗಿ ನೀಡಲಾಗುವ ಕಮಿಷನ್​ ಒಂದೊಂದು ರಾಜ್ಯದಲ್ಲಿ ಬೇರೆ ಬೇರೆ ರೀತಿಯಲ್ಲಿದೆ. ಮಹಾರಾಷ್ಟ್ರದಲ್ಲಿ ಕ್ವಿಂಟಲ್​ಗೆ 150 ರೂ., ತೆಲಂಗಾಣದಲ್ಲಿ ಕ್ವಿಂಟಾಲ್​ಗೆ 140 ರೂ., ಗೋವಾದಲ್ಲಿ ಕ್ವಿಂಟಾಲ್​ಗೆ 230 ರೂ. ಹಾಗೂ ಕರ್ನಾಟಕದಲ್ಲಿ ಕ್ವಿಂಟಾಲ್​ಗೆ 124 ರೂ. ಕಮಿಷನ್​ ಹಣ ನೀಡಲಾಗುತ್ತಿದೆ.ದೇಶಾದ್ಯಂತ ಏಕರೂಪ ಕಮಿಷನ್​ ಪದ್ಧತಿ ಜಾರಿಗೆ ಬರಬೇಕು.ಈ ಬಗ್ಗೆ ಕೇಂದ್ರ ಆಹಾರ ಸಚಿವ ಪ್ರಹ್ಲಾದ್​ ಜೋಶಿಗೆ ಈಗಾಲೇ ಮನವಿ ಸಲ್ಲಿಸಲಾಗಿದೆ ಎಂದು ಕೃಷ್ಣಪ್ಪ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net