ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಿ

18 KAMPLI 01
ಕಂಪ್ಲಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಜಿಲ್ಲಾ ಸಂಚಾಲಕ ಗೋವರ್ಧನ ಮಾತನಾಡಿದರು. ಪ್ರಮುಖರಾದ ಕೊಡ್ಲಿ ಮಲ್ಲಿಕಾರ್ಜುನ, ಎ.ಲಕ್ಷ್ಮೀಪತಿ, ನಟರಾಜಗೌಡ, ಫೋಟೋ ರಾಜ ಇತರರಿದ್ದರು.
Published on

ಕಂಪ್ಲಿ: ದೀನ, ದಲಿತ, ಬಡವ, ಶೋಷಿತರ ಪರ ಪ್ರಬಲ ಧ್ವನಿಯಾಗಿ ಸೇವೆ ಸಲ್ಲಿಸಲು ಸಮಿತಿ ಮುಂದಾಗಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೊ.ಬಿ.ಕೃಷ್ಣಪ್ಪ ಬಣ) ಜಿಲ್ಲಾ ಸಂಚಾಲಕ ಗೋವರ್ಧನ ಹೇಳಿದರು.

ಪಟ್ಟಣದ ಸಕ್ಕರೆ ಕಾರ್ಖಾನೆ ಶ್ರೀ ರಾಮಮಂದಿರ ಆವರಣದಲ್ಲಿ ಭಾನುವಾರ ಸಮಿತಿಯಿಂದ ಆಯೋಜಿಸಿದ್ದ ತಾಲೂಕು ಸಮಿತಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿದರು. ಸರ್ಕಾರದ ಯೋಜನೆಗಳನ್ನು ಅರ್ಹರಿಗೆ ತಲುಪಿಸಲು ಸೇವೆ ಸಲ್ಲಿಸಬೇಕು ಎಂದರು.

ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಕೊಡ್ಲಿ ಮಲ್ಲಿಕಾರ್ಜುನ ಮಾತನಾಡಿ, ಸಮಿತಿಯ ಸಂಚಾಲಕರು ಹಣ, ಆಮಿಷಕ್ಕೆ ಒಳಗಾಗದೆ ನಿಸ್ವಾರ್ಥ ಸೇವೆ ಸಲ್ಲಿಸಲು ಮುಂದಾಗಬೇಕು. ಅಂತರ್ಜಾಲ, ಸಾಮಾಜಿಕ ಜಾಲತಾಣಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವ ಮೂಲಕ ಸಂಘಟನೆ, ಹೋರಾಟ ಮತ್ತು ಪ್ರಗತಿ ಸಾಧಿಸಬೇಕು ಎಂದರು.

ಜಿಲ್ಲಾ ಸಂಘಟನಾ ಸಂಚಾಲಕ ಸಣ್ಣ ನಾಗರಾಜ್, ಜಿಲ್ಲಾ ಕಾರ್ಯಕಾರಿ ಸಮಿತಿ ಸದಸ್ಯ ಎಮ್ಮಿಗನೂರು ಜಡೆಪ್ಪ, ಪ್ರಮುಖರಾದ ನಟರಾಜಗೌಡ, ಫೋಟೋ ರಾಜ, ವೀರಭದ್ರಣ್ಣ, ಎ.ಲಕ್ಷ್ಮೀಪತಿ ಇತರರಿದ್ದರು.

ತಾಲೂಕು ಸಂಚಾಲಕರಾಗಿ ದೇವಸಮುದ್ರದ ಎಚ್.ಗುಂಡಪ್ಪ, ತಾಲೂಕು ಸಂಘಟನಾ ಸಂಚಾಲಕರಾಗಿ ಮರಿಯಪ್ಪ ಸಣಾಪುರ, ಚಂದ್ರಶೇಖರ ಎಮ್ಮಿಗನೂರು, ಮಹೇಶ್ ಮೆಟ್ರಿ ಆಯ್ಕೆಗೊಂಡರು.

ಸಮಿತಿಗೆ ಆಯ್ಕೆ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net