ಸರ್ಕಾರದ ಕನ್ನಡ ಕಾಳಜಿ ಸಾಬೀತು

Maski Karave Protest
ಮಸ್ಕಿ ತಹಸೀಲ್ದಾರ್ ಅರಮನೆ ಸುಧಾಗೆ ಕರವೇ ತಾಲೂಕು ಘಟಕದಿಂದ ಮನವಿ ಸಲ್ಲಿಸಲಾಯಿತು.
Published on

ಮಸ್ಕಿ: ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಬಿಡುಗಡೆಗೆ ಒತ್ತಾಯಿಸಿ ತಹಸೀಲ್ದಾರ್ ಅರಮನೆ ಸುಧಾಗೆ ಕರವೇ ತಾಲೂಕು ಘಟಕದ ಪದಾಧಿಕಾರಿಗಳು ಶುಕ್ರವಾರ ಮನವಿ ಸಲ್ಲಿಸಿದರು.

ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಅಗ್ರಸ್ಥಾನ ನೀಡಬೇಕು. ಸರ್ಕಾರಿ ಕಚೇರಿಗಳು, ಖಾಸಗಿ ಕಂಪನಿಗಳು, ಅಂಗಡಿ-ಮುಂಗಟ್ಟುಗಳಲ್ಲಿ ಕಡ್ಡಾಯವಾಗಿ ದೊಡ್ಡ ಅಕ್ಷರಗಳಲ್ಲಿ ಕನ್ನಡದ ನಾಮಫಲಕ ಅಳವಡಿಸಬೇಕು. ನಾಮಫಲಕ ಶೇ.60 ಕನ್ನಡದಲ್ಲಿದ್ದರೆ ಶೇ.40 ಅನ್ಯ ಭಾಷೆ ಬಳಸಬಹುದು ಎಂದರು.

ಕನ್ನಡ ಭಾಷೆಗೆ ಸಂಬಂಧಿಸಿದಂತೆ ಪ್ರತಿಭಟನೆ ನಡೆಸುವವರನ್ನು ಸರ್ಕಾರ ಬಂಧಿಸುವುದಾದರೆ ಸರ್ಕಾರಕ್ಕೆ ಕನ್ನಡದ ಬಗ್ಗೆ ಎಷ್ಟು ನಿಷ್ಠೆ ಇದೆ ಎಂಬುದು ತಿಳಿಯುತ್ತದೆ. ನಾರಾಯಣಗೌಡ ಮತ್ತು ಇತರ ಪ್ರತಿಭಟನಾಕಾರರನ್ನು ಬಿಡುಗಡೆ ಗೊಳಿಸಿದ್ದಲ್ಲಿ ಹೋರಾಟ ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net