

ಅಕ್ಕಿಆಲೂರ: ಪೆಟ್ರೋಲ್, ಡೀಸೆಲ್ ಸೇರಿ ಇಂಧನ ಬೆಲೆ ಏರಿಕೆ ವಿರೋಧಿಸಿ ಪಟ್ಟಣದಲ್ಲಿ ಮಾಜಿ ಸಚಿವ ಮನೋಹರ ತಹಶೀಲ್ದಾರ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಭಾನುವಾರ 100 ನಾಟೌಟ್ ಆಂದೋಲನ ನಡೆಸಿದರು.
ಪಟ್ಟಣದ ಕಲ್ಲಾಪುರ ವೃತ್ತದಲ್ಲಿರುವ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಎದುರು ಸೇರಿದ ನೂರಾರು ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಮನೋಹರ ತಹಶೀಲ್ದಾರ ಮಾತನಾಡಿ, ಜನರ ಆರೋಗ್ಯ ಮತ್ತು ಆರ್ಥಿಕ ಹಿತ ಕಾಪಾಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಡಾ. ಪ್ರಕಾಶಗೌಡ ಪಾಟೀಲ ಮಾತನಾಡಿ, ಜನಸಾಮಾನ್ಯರಿಗೆ ಅಚ್ಛೇದಿನ ತರುತ್ತೇವೆ ಬರಲಿದೆ ಎನ್ನುತ್ತ ಅಧಿಕಾರದ ಗದ್ದುಗೆ ಹಿಡಿದ ಎನ್ಡಿಎ ಸರ್ಕಾರ, ಅಗತ್ಯ ವಸ್ತುಗಳ ಬೆಲೆ ಏರಿಸಿ ದೇಶದ ಬಡ ಜನರ ಬದುಕು ದುರ್ಬಲಗೊಳಿಸಿದೆ. ಇಂಧನ ಬೆಲೆ ಏರಿಕೆಯಿಂದ ಅಗತ್ಯವಸ್ತುಗಳ ಬೆಲೆಗಳು ಏರಿಕೆಯಾಗುತ್ತಿವೆ ಎಂದರು.
ಹಾವೇರಿ ಜಿಲ್ಲಾ ಕಾಂಗ್ರೆಸ್ ಸಂಯೋಜಕ ಶಿವಯೋಗಿ ಹಿರೇಮಠ ಮಾತನಾಡಿದರು. ಜಿಪಂ ಸದಸ್ಯ ರಾಘವೇಂದ್ರ ತಹಶೀಲ್ದಾರ, ಗ್ರಾಪಂ ಅಧ್ಯಕ್ಷೆ ಪಾರ್ವತಿ ಮಾದರ, ನಿಯಾಜ ಶೇಖ, ನಾಗಪ್ಪ ಸವದತ್ತಿ, ಕೆ.ಎಲ್. ದೇಶಪಾಂಡೆ, ಮುತ್ತಣ್ಣ ನಾಸಿಕ್, ಶಂಕರ ದೇಶಪಾಂಡೆ, ಸುರೇಶ ದೊಡ್ಡಕುರಬರ, ರವೀಂದ್ರ ಚಕ್ಕೇರಿ, ಮಾಲತೇಶ ಸೊಂಕದ, ಸಿದ್ದಪ್ಪ ಹಿರಗಪ್ಪನವರ, ಗಿರೀಶಗೌಡ ಪಾಟೀಲ, ಇನಾರ್ಸಾಬ್ ಪಠಾಣ, ಅಣ್ಣಪ್ಪ ಜಾಗಾಪುರ ಮತ್ತಿತರರು ಉಪಸ್ಥಿತರಿದ್ದರು.