VIDEO| ಉಡುಪಿ ವಡ್ಡರ್ಸೆ ಗ್ರಾಮದ ಅರಣ್ಯ ಪ್ರದೇಶದಲ್ಲಿ ವಿಚಿತ್ರ ವಿದ್ಯಾಮಾನ: ವೈರಲ್​ ವಿಡಿಯೋಗೆ ಹೌಹಾರಿದ ಜನ!

Gorilla
Published on

ಉಡುಪಿ: ಜಿಲ್ಲೆಯ ಕೋಟ ಸಮೀಪದ ವಡ್ಡರ್ಸೆ ಗ್ರಾಮದಲ್ಲಿ ವಿಚಿತ್ರ ವಿದ್ಯಮಾನವೊಂದು ಸಂಭವಿಸಿದೆ. ಈ ಭಾಗದ ಅರಣ್ಯ ಪ್ರದೇಶದಲ್ಲಿ ಗೋರಿಲ್ಲವನ್ನು ಕಂಡಿದ್ದೇವೆ ಎಂದು ಕೆಲ ಗ್ರಾಮಸ್ಥರು ಹೇಳುತ್ತಿದ್ದಾರೆ.

ಗ್ರಾಮದ ಸರ್ಕಾರಿ ಪ್ರೌಢಶಾಲೆ ಹಿಂಭಾಗದಲ್ಲಿರುವ ಅರಣ್ಯ ಪ್ರದೇಶದಲ್ಲಿ ಈ ಭಾರೀ ಗಾತ್ರದ ಗೋರಿಲ್ಲ ಕಾಣಿಸಿಕೊಂಡಿದೆಯಂತೆ. ಸ್ಥಳೀಯರೊಬ್ಬರು ಮೊಬೈಲ್​ನಲ್ಲಿ ಸೆರೆಹಿಡಿದಿರುವ ವಿಡಿಯೋ ಕೂಡಾ ವೈರಲ್ ಆಗುತ್ತಿದೆ. ಸ್ಥಳೀಯರ ಮಾಹಿತಿ ಮೇರೆಗೆ ಅರಣ್ಯ ಇಲಾಖಾಧಿಕಾರಿಗಳು ಭೇಟಿ ನೀಡಿದಾಗ ಗೋರಿಲ್ಲ ಪತ್ತೆಯಾಗಲಿಲ್ಲ.

ಎಂಟು ಎಕರೆ ಪ್ರದೇಶದ ಈ ಅರಣ್ಯ ಪ್ರದೇಶದಲ್ಲಿ ಹುಡುಕಾಡಿದರೂ ನಂತರ ಗೋರಿಲ್ಲ ಪತ್ತೆಯಾಗಿಲ್ಲ. ಪಕ್ಕದಲ್ಲೇ ದಟ್ಟ ಅರಣ್ಯ ಪ್ರದೇಶವೂ ಇರುವುದರಿಂದ ಜನರ ಆತಂಕ ಹೆಚ್ಚಿದೆ. ಆದರೆ, ಈ ಭಾಗದಲ್ಲಿ ಈವರೆಗೆ ಯಾರೂ ಗೋರಿಲ್ಲವನ್ನು ಕಂಡಿರಲಿಲ್ಲ ಎನ್ನುತ್ತಾರೆ. ಮರದ ಮರೆಯಲ್ಲಿ ನಿಂತ ಭಾರೀ ಗಾತ್ರದ ಗೋರಿಲ್ಲ ಎನ್ನುವ ವಿಡಿಯೋ ಮಾತ್ರ ಎಲ್ಲೆಡೆ ಹರಿದಾಡುತ್ತಿದೆ.

ಆದರೆ ಈ ವಿಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕು. ರಾಜ್ಯದ ಯಾವುದೇ ಭಾಗದಲ್ಲಿ ಗೋರಿಲ್ಲ ಕಾಣಿಸಿಕೊಳ್ಳುವ ಸಾಧ್ಯತೆ ಇರದ ಕಾರಣ ಇದೇನಾದರೂ ಕಿಡಿಗೇಡಿಗಳ ಕೃತ್ಯವೇ ಎಂಬುದು ತನಿಖೆಯಾಗಬೇಕಿದೆ. ಬಹುಶಃ ಕರಡಿಯನ್ನು ನೋಡಿ ಗೊರಿಲ್ಲ ಅಂದುಕೊಂಡಿರಬಹುದು ಎಂದು ಅರಣ್ಯಾಧಿಕಾರಿಗಳು ಅಂದಾಜಿಸಿದ್ದಾರೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net