ಕಟೀಲಿನಲ್ಲಿ ಗೋಪೂಜೆ ವಿಶೇಷ

Kin_Kateel
Published on

ಕಟೀಲು: ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದಲ್ಲಿ ಗೋಶಾಲೆಗಳನ್ನು ನಡೆಸುತ್ತಿರುವುದು ಶ್ಲಾನೀಯ. ಇಲ್ಲಿ ಗೋಪೂಜೆ ವಿಶೇಷವಾಗಿದ್ದು, ರಾಜ್ಯದ ವಿವಿಧ ಕಡೆಗಳ ಗೋಶಾಲೆಗಳಲ್ಲಿನ ಗೋಉತ್ಪಾದನೆಗಳನ್ನು ಪ್ರದರ್ಶಿಸಿ, ಜನರಿಗೆ ಸಿಗುವಂತೆ ವಾಡಿರುವ ಈ ಸಮ್ಮೇಳನ ಅತ್ಯಂತ ಸಮರ್ಪಕ ಎಂದು ಉದ್ಯಮಿ, ಗೋಸೇವಕ ಸುಮನ್ ಶೆಟ್ಟಿ ಹೇಳಿದರು.

ಅವರು ಮೂರು ದಿನಗಳ ಕಾಲ ಕಟೀಲು ದೇಗುಲದ ವತಿಯಿಂದ ಸರಸ್ವತೀ ಸದನದಲ್ಲಿ ನಡೆಯುವ ಗೋಉತ್ಪನ್ನಗಳ ಪ್ರದರ್ಶನ, ಮಾರಾಟ, ಜಾಗೃತಿ ಹಾಗೂ ಮಾಹಿತಿ ಕಾರ್ಯಕ್ರಮ ನಂದಿನೀ ಗವ್ಯಮ್ ಉದ್ಘಾಟಿಸಿ ವಾತನಾಡಿದರು.

ದೇಗುಲದ ಅರ್ಚಕರು ಗೋವುಗಳಿಗೆ ಆರತಿ ಬೆಳಗಿ ವಾರಾಟ ಮೇಳಕ್ಕೆ ಚಾಲನೆ ನೀಡಿದರು. ಸಾವಯವ ಕೃಷಿಕ ಗ್ರಾಹಕ ಬಳಗದ ರತ್ನಾಕರ ಕುಳಾಯಿ, ಲೋಕಯ್ಯ ಸಾಲ್ಯಾನ್ ಮತ್ತಿತರರಿದ್ದರು. ಮೈಸೂರು, ಉಡುಪಿ, ಬೆಂಗಳೂರು, ಧಾರವಾಡ, ಕಿನ್ನಿಗೋಳಿ ಹೀಗೆ ನಾನಾ ಗೋಶಾಲೆಗಳಲ್ಲಿ ಗೋಉತ್ಪನ್ನಗಳ ವಾರಾಟ ಭಾನುವಾರದವರೆಗೆ ನಡೆಯಲಿದೆ.

ದಿನಬಳಕೆಯ ವಸ್ತುಗಳು, ಅರ್ಕ, ಸೆಂಟ್, ಸಾಬೂನು, ಅಲಂಕಾರಿಕ ವಸ್ತುಗಳು, ತುಪ್ಪ, ನೋವು ನಿವಾರಕ ಔಷಧಿಗಳು ಧೂಪ, ಲೋಬಾನ ಇತ್ಯಾದಿ ಪೂಜಾ ಸಾಮಗ್ರಿಗಳು ವಾರಾಟಕ್ಕೆ ಇದ್ದು, ಕಟೀಲಿಗೆ ಸೋಣ ಶುಕ್ರವಾರದ ಸಲುವಾಗಿ ಬಂದ ಭಕ್ತರು ಅನೇಕ ಉತ್ಪಾದನೆಗಳನ್ನು ಖರೀದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net