ಗೋಪಾಲ ಭಂಡಾರಿ ಆದರ್ಶ ಎಲ್ಲರಿಗೂ ಪ್ರೇರಣೆ

lokarpane
lokarpane
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ನಾವು ಹುಟ್ಟುವಾಗ ಹೆಸರು ಇರಲ್ಲ, ಉಸಿರು ಇರುತ್ತದೆ. ಸತ್ತಾಗ ಉಸಿರು ಇರುವುದಿಲ್ಲ ಹೆಸರು ಇರುತ್ತದೆ. ಅಂತಹ ಶಾಶ್ವತ ಹೆಸರನ್ನು ಗೋಪಾಲ ಭಂಡಾರಿ ಸಂಪಾದಿಸಿದ್ದಾರೆ. ಅಧಿಕಾರವನ್ನು ಜನಸೇವೆಗೆಂದು ಮನಗಂಡ ಜನನಾಯಕ ಭಂಡಾರಿಯವರು. ಇಂದು ಪಕ್ಷಾತೀತವಾಗಿ ಎಲ್ಲರೂ ಒಪ್ಪಿಕೊಂಡು ಕಾರ್ಯಕ್ರಮಕ್ಕೆ ಬಂದಿರುವುದು ನೋಡಿದರೆ ಅವರ ಆದರ್ಶ ಎಲ್ಲರಿಗೂ ಪ್ರೇರಣೆ ಎಂದು ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದರು.

ಹೆಬ್ರಿ ಬ್ರಹ್ಮಶ್ರೀ ನಾರಾಯಣಗುರು ಸಮುದಾಯ ಭವನದಲ್ಲಿ ಸೋಮವಾರ ಗೋಪಾಲ ಭಂಡಾರಿ ಸಂಸ್ಮರಣಾ ಗ್ರಂಥ ಬಿಡುಗಡೆ ವಾಡಿ ವಾತನಾಡಿದರು.

ಹೆಬ್ರಿ-ಕಾರ್ಕಳ ರಾಜ್ಯ ಹೆದ್ದಾರಿಯ ಬಚ್ಚಪ್ಪುವಿನಲ್ಲಿ ಸ್ಥಾಪಿಸಲಾದ ಗೋಪಾಲ ಭಂಡಾರಿ ಪುತ್ಥಳಿ ಲೋಕಾರ್ಪಣೆ ವಾಡಿದ ವಾಜಿ ಮುಖ್ಯಮಂತ್ರಿ ಡಾ.ಎಂ.ವೀರಪ್ಪ ಮೊಯಿಲಿ ವಾತನಾಡಿ, ಅಜಾತಶತ್ರು ಜನನಾಯಕ ಅಭಿವೃದ್ಧಿಯ ಹರಿಕಾರರಾಗಿದ್ದ ಹೆಬ್ರಿ ಗೋಪಾಲ ಭಂಡಾರಿ ಕಾರ್ಕಳ ಕ್ಷೇತ್ರದ ಶಾಸಕರಾಗಿ ಜನಸೇವೆ ವಾಡಿ ಜನರ ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ ಎಂದರು.

ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಅಧ್ಯಕ್ಷ ನೀರೆ ಕೃಷ್ಣ ವಾತನಾಡಿ, ರಾಜಕೀಯದಲ್ಲಿ ಜನರ ಪ್ರೀತಿಗಳಿಸಿದ್ದರು. ಎಲ್ಲರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದು, ರಾಜಕೀಯದಲ್ಲಿ ಪಾರದರ್ಶಕವಾಗಿದ್ದರು ಎಂದರು.

ವಿಧಾನ ಪರಿಷತ್ ವಾಜಿ ಸಭಾಪತಿ ಕೆ.ಪ್ರತಾಪಚಂದ್ರ ಶೆಟ್ಟಿ, ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುವಾರ್ ಕೊಡವೂರು, ವಾಜಿ ಸಚಿವರಾದ ರವಾನಾಥ ರೈ, ಜಯಪ್ರಕಾಶ ಹೆಗ್ಡೆ, ವಿನಯಕುವಾರ್ ಸೊರಕೆ, ಅಭಯಚಂದ್ರ ಜೈನ್, ಕಿಮ್ಮನೆ ರತ್ನಾಕರ್, ವಾಜಿ ಶಾಸಕ ಗೋಪಾಲ ಪೂಜಾರಿ, ಧರ್ಮಸ್ಥಳ ಯೋಜನೆಯ ಹೆಬ್ರಿ ತಾಲೂಕು ಯೋಜನಾಧಿಕಾರಿ ಲೀಲಾವತಿ, ಜಿಪಂ ವಾಜಿ ಸದಸ್ಯ ಮುದ್ರಾಡಿ ಮಂಜುನಾಥ ಪೂಜಾರಿ, ಕಾರ್ಕಳದ ಶುಭದ್ ರಾವ್, ಹೆಬ್ರಿ ಗ್ರಾಪಂ ಅಧ್ಯಕ್ಷ ತಾರನಾಥ ಬಂಗೇರ, ಚಾರ ಗ್ರಾಮ ಪಂಚಾಯಿತಿ ಅಧ್ಯಕ್ಷ ದಿನೇಶ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಸುಧಾಕರ ಶೆಟ್ಟಿ, ಉದ್ಯಮಿ ಸತೀಶ ಪೈ, ಹೆಬ್ರಿ ಪ್ರವೀಣ್ ಬಲ್ಲಾಳ್, ಉಡುಪಿಯ ಎಂ.ಎ.ಗಫೂರ್, ಡಾ.ಸಂತೋಷ್ ಕುವಾರ್ ಶೆಟ್ಟಿ ಅಜೆಕಾರು, ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ನಾಗರಾಜ ಶೆಟ್ಟಿ, ಮುನಿಯಾಲು ಗೋಪಿನಾಥ ಭಟ್, ಎಚ್.ವಾದಿರಾಜ ಶೆಟ್ಟಿ, ಪ್ರಮುಖರಾದ ಮೊಳಹಳ್ಳಿ ದಿನೇಶ್ ಶೆಟ್ಟಿ, ಶೇಖರ್ ಮಡಿವಾಳ, ಸುಧಾಕರ ಕೋಟ್ಯಾನ್ ಕಲ್ಯಾ, ಅಣ್ಣಪ್ಪ ಪೂಜಾರಿ, ಹೆಬ್ರಿ ಗೋಪಾಲ ಭಂಡಾರಿ ಅಭಿವಾನಿ ವೇದಿಕೆ ಹೆಬ್ರಿ ಕಾರ್ಕಳದ ಪದಾಧಿಕಾರಿಗಳು ಉಪಸ್ಥಿತರಿದ್ದರು. ನವೀನ್ ಕೆ.ಅಡ್ಯಂತಾಯ ಸ್ವಾಗತಿಸಿದರು. ಎಚ್.ಜನಾರ್ದನ್ ವಂದಿಸಿದರು. ಪ್ರಕಾಶ್ ಪೂಜಾರಿ ವಾತಿಬೆಟ್ಟು, ಪ್ರಸಾದ್ ಶೆಟ್ಟಿ ನಿರೂಪಿಸಿದರು.

ಒಬ್ಬ ವ್ಯಕ್ತಿ ಸರಳತೆಯಿಂದ ಬದುಕಬಹುದು ಎಂಬುದಕ್ಕೆ ಗೋಪಾಲ ಭಂಡಾರಿ ಅವರು ನಿದರ್ಶನ. ಎಲ್ಲ ವರ್ಗದ ಜನರ ಮನ್ನಣೆ ಗಳಿಸಿ ಕೆಲಸ ವಾಡಿದ ವ್ಯಕ್ತಿಯಾಗಿದ್ದರು. - ಸುನಿಲ್‌ಕುಮಾರ್, ಕಾರ್ಕಳ ಶಾಸಕ

ಸಹಾಯಧನ, ಗೌರವ

ಕಾರ್ಕಳ ಕಾಂಗ್ರೆಸ್ ನಾಯಕ ಮುನಿಯಾಲು ಉದಯಕುವಾರ್ ಶೆಟ್ಟಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸಹಾಯಧನ ವಿತರಿಸಿದರು. ವಿಧಾನಸಭಾ ಸಭಾಧ್ಯಕ್ಷ ಯು.ಟಿ.ಖಾದ, ಗೋಪಾಲ ಭಂಡಾರಿ ಅವರ ಪತ್ನಿ ಪ್ರಕಾಶಿನಿ ಭಂಡಾರಿ ಹೆಬ್ರಿ, ಗೋಪಾಲ ಭಂಡಾರಿ ಸಂಸ್ಮರಣಾ ಗ್ರಂಥದ ಪ್ರಧಾನ ಸಂಪಾದಕ ಮಂಡಳಿಯನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net