ಭೂಮಿಯ ಫಲವತ್ತತೆಯಿಂದ ಉತ್ತಮ ಇಳುವರಿ

ಭೂಮಿಯ ಫಲವತ್ತತೆಯಿಂದ ಉತ್ತಮ ಇಳುವರಿ
Published on

ನಾಪೋಕ್ಲು: ರೈತರು ಉತ್ತಮ ಇಳುವರಿ ಪಡೆಯಬೇಕಾದರೆ ಭೂಮಿ ಫಲವತ್ತತೆಯಿಂದ ಕೂಡಿರಬೇಕು ಎಂದು ಗೋಣಿಕೊಪ್ಪಲು ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಡಾ. ಕೆ.ಟಿ.ಮೋಹನ್‌ಕುಮಾರ್ ಹೇಳಿದರು.

ಕೂರ್ಗ್ ಟ್ರೇಡಿಂಗ್ ಕಂಪನಿ ಲಿಮಿಟೆಡ್ ಹಾಗೂ ಕೋರಮಂಡಲ್ ಇಂಟರ್‌ನ್ಯಾಷನಲ್ ಲಿಮಿಟೆಡ್ ಆಶ್ರಯದಲ್ಲಿ ನಾಪೋಕ್ಲುವಿನ ಬೆಳೆಗಾರರಿಗೆ ಆಯೋಜಿಸಿದ್ದ ಕಾಫಿ ಮತ್ತು ಕಾಳುಮೆಣಸು ಕೃಷಿ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಮಾತನಾಡಿದರು.

ರೈತರು ಕೃಷಿ ಮಾಡುವ ಮುನ್ನ ಮಣ್ಣು ಪರೀಕ್ಷೆ ಮಾಡಿಕೊಳ್ಳಬೇಕು. ಅಗತ್ಯಕ್ಕೆ ತಕ್ಕಂತೆ ಉತ್ತಮ ಗುಣಮಟ್ಟದ ರಸಗೊಬ್ಬರಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುವುದರಿಂದ ಬೆಳೆಗಳ ಇಳುವರಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಪಡೆಯಲು ಸಾಧ್ಯ ಎಂದರು.

ನಾಪೋಕ್ಲು ಕೂರ್ಗ್ ಟ್ರೇಡಿಂಗ್ ಕಂಪನಿ ಲಿಮಿಟೆಡ್ ಮಾಲೀಕ ಮಹಮ್ಮದ್ ರಫಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ರೈತರು ಕೃಷಿ ಚಟುವಟಿಕೆಗಳಲ್ಲಿ ಉತ್ತಮ ಇಳುವರಿ ಪಡೆಯಲು ಉತ್ತಮ ರಸ ಗೊಬ್ಬರಗಳ ಬಳಕೆ ಮಾಡಬೇಕಿದೆ ಎಂದರು.

ವಕೀಲ ಅಬ್ದುಲ್ ರಿಯಾಜ್, ಕೋರಮಂಡಲ ಇಂಟರ್ ನ್ಯಾಷನಲ್ ಲಿಮಿಟೆಡ್ ಕಂಪನಿಯ ವಿಭಾಗೀಯ ಬೇಸಾಯ ಶಾಸ್ತ್ರಜ್ಞ ರಮೇಶ್ ಕುಮಾರ್ ಮಾತನಾಡಿದರು.

ಕೋರಮಂಡಲ್ ಇಂಟರ್‌ನಾಷನಲ್ ಕಂಪನಿ ವತಿಯಿಂದ ಕೂರ್ಗ್ ಟ್ರೇಡಿಂಗ್ ಕಂಪನಿ ಮಾಲೀಕ ಮಹಮದ್ ರಫಿ ಹಾಗೂ ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ.ಮೋಹನ್‌ಕುಮಾರ್ ಅವರನ್ನು ಸನ್ಮಾನಿಸಲಾಯಿತು.

ಬೆಳೆಗಾರ ಶೌಕತ್ ಆಲಿ, ಕಲ್ಯಾಟಂಡ ರಮೇಶ್ ಚಂಗಪ್ಪ, ಲಿಯಾಕತ್‌ಅಲಿ, ಅಪ್ಪಚ್ಚಿರ ಸುರೇಶ್, ನಜೀರ್, ಹರೀಶ್ ಕೋರಮಂಡಲ ಇಂಟರ್‌ನ್ಯಾಷನಲ್ ಲಿಮಿಟೆಡ್ ಜಿಲ್ಲಾ ಮಾರುಕಟ್ಟೆ ವ್ಯವಸ್ಥಾಪಕ ಹರ್ಷ ಹೆಗಡೆ, ಬೇಸಾಯ ತಜ್ಞ ಡಾ.ರಾಜಶೇಖರ್, ಮೊಯ್ದು ಬೆಟಗೇರಿ, ಮೊಹಮದ್ ಕುಂಜಿಲ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net